Advertisement

Cinematic ಶೈಲಿಯಲ್ಲಿ ಪವನ್‌ ಕಲ್ಯಾಣ್‌-ಚಿರಂಜೀವಿ ಭೇಟಿ

11:20 PM Jun 06, 2024 | Team Udayavani |

ಹೈದ್ರಾಬಾದ್‌: ಆಂಧ್ರಪ್ರದೇಶ ವಿಧಾನಸಭೆ-ಲೋಕಸಭೆ ಚುನಾವಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌, ಸಿನಿಮೀಯ ಶೈಲಿಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ.

Advertisement

ಬುಧವಾರ ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಪವನ್‌, ಅದೇ ಖುಷಿಯಲ್ಲಿ ಹೈದ್ರಾಬಾದ್‌ಗೆ ಮರಳಿ ಅಣ್ಣ ಚಿರಂಜೀವಿ ನಿವಾಸ ಕೋಣಿದೇಳಾಕ್ಕೆ ಹೋಗಿದ್ದಾರೆ. ಅವರು ಕಪ್ಪು ಕಾರಿಳಿಯುತ್ತಿದ್ದಂತೆ ಗುಲಾಬಿ ದಳಗಳ ಮಳೆಯನ್ನೇ ಸುರಿಸಲಾಗಿದೆ. ಮೊದಲು ರಾಮ್‌ಚರಣ್‌ ತೇಜ ತಬ್ಬಿಕೊಂಡು ಶುಭಾಶಯ ಹೇಳಿದ್ದಾರೆ. ಮನೆಯೊಳಕ್ಕೆ ಹೋದಾಗ ತಾಯಿ ಅಂಜನಾ ದೇವಿ ಆರತಿಯೆತ್ತಿದ್ದಾರೆ. ಅನಂತರ ಎದುರು ಬಂದ ತೆಲುಗು ಚಿತ್ರರಂಗದ ದೊರೆ ಚಿರಂಜೀವಿಯ ಕಾಲಿಗೆರಗಿದ್ದಾರೆ. ಇಬ್ಬರೂ ಪರಸ್ಪರ ತಬ್ಬಿಕೊಂಡು ಸಂತಸಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next