Advertisement

ಧರೆಗಿಳಿದು ಬಂದ ಲಕ್ಷ್ಮೀ, ವಿಷ್ಣು!

06:10 AM Oct 09, 2017 | |

ಹೈದರಾಬಾದ್‌: ಸಮುದ್ರದಾಳದಲ್ಲಿ, ಹೆಲಿಕಾಪ್ಟರ್‌ನಲ್ಲಿ ಮದುವೆ ಮಾಡಿಕೊಳ್ಳುವುದೆಲ್ಲ ಹಳತಾಗಿರುವ ವಿಚಾರ. ದೇವಲೋಕದ ಮಾದರಿಯಲ್ಲಿ ದಿರಿಸು ಧರಿಸಿ ಮದುವೆ ಮಾಡಿಕೊಂಡರೆ ಹೇಗಿರುತ್ತದೆ? ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ತಾನುಕು ಗ್ರಾಮದಲ್ಲಿ ಅಂಥದ್ದೊಂದು ಮದುವೆ ನಡೆದು ಹೋಗಿದೆ.

Advertisement

ಗ್ರಾಮದ ಸ್ವಘೋಷಿತ ದೇವಮಾನವ ಶ್ರೀಧರ ಸ್ವಾಮಿ ಎಂಬಾತನ ಪುತ್ರಿಯ ವಿವಾಹ ದೇವಲೋಕದಲ್ಲಿನ ವಿವಾಹದಂತೆಯೇ ನಡೆ ದಿದೆ. ವಧೂ-ವರ, ಅವರ ತಂದೆ-ತಾಯಿ, ಕುಟುಂಬ ವರ್ಗದ ಸದಸ್ಯರು ದೇವ, ದೇವತೆ ಗಳಂತೆ ಕಿರೀಟ, ಆಭರಣ, ವೇಷ-ಭೂಷಣ ಗಳನ್ನು ಧರಿಸಿ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. 

ದೇವ ಮಾನವನ ಪುತ್ರಿಯು ಲಕ್ಷ್ಮೀಯಂತೆ, ವರ ವಿಷ್ಣುವಿನಂತೆ, ವಧುವಿನ ತಾಯಿ ಮತ್ತು ತಂದೆ ರಾಜ ಮತ್ತು ರಾಣಿಯರ ಪೋಷಾಕಿ ನಲ್ಲಿದ್ದರು. ಮಕ್ಕಳು ಕೂಡ ದೇವತೆಗಳ ಮಕ್ಕ ಳಂತೆ ಪೋಷಾಕು, ಕಿರೀಟ ಮತ್ತಿತರ ಆಭರಣ ಗಳನ್ನು ಧರಿಸಿದ್ದರು. ಇತ್ತೀಚೆಗೆ ನಡೆದಿದ್ದ ಈ ಮದುವೆ ಕಾರ್ಯಕ್ರಮ ತಾನುಕು ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದಂತೂ ಸತ್ಯ.

Advertisement

Udayavani is now on Telegram. Click here to join our channel and stay updated with the latest news.

Next