Advertisement
ಇವುಗಳನ್ನು ಕಾರು, ಮೊಬೈಲ್, ಟಿವಿ, ವಿಮಾನಯಾನ, ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆ ಮಾಡುವ ಉಪಕರಣಗಳು, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಳಕೆ ಮಾಡಲಾಗುತ್ತದೆ.
ಈ ಬಗ್ಗೆ ಮಾತನಾಡಿದ ಅವರು, ಇದೇನಿದ್ದರೂ ಆರಂಭಿಕ ಹಂತ. ಹೊಸ ಮಾದರಿಯ ಖನಿಜಗಳು ಇರುವ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಾಗಿದೆ. ಭೂಮಿಯ ತೀರ ಆಳಭಾಗವಲ್ಲದ ಪ್ರದೇಶಗಳಲ್ಲಿ ಸಂಶೋಧನೆ ನಡೆಸುವ ಶೋರ್ ಎನ್ನುವ ಯೋಜನೆಯ ಭಾಗವಾಗಿ ಅದನ್ನು ನಡೆಸಲಾಗಿದೆ ಎಂದು ಹೇಳಿದ್ದಾರೆ. ಪತ್ತೆಯಾದದ್ದು ಹೇಗೆ?
ಎನ್‌ಜಿಆರ್‌ಐನ ವಿಜ್ಞಾನಿಗಳು ಅನಂತಪುರ ಜಿಲ್ಲೆಯಲ್ಲಿ ಸಾಂಪ್ರದಾಯಿಕವಲ್ಲದ ಶಿಲೆ ಸಯೋನೈಟ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಹೊಸ ಖನಿಜ ಸಂಪನ್ಮೂಲ ಇರುವುದರ ಬಗ್ಗೆ ದೃಢಪಟ್ಟಿತು. ಈ 15 ಖನಿಜಗಳನ್ನು ಲ್ಯಾಂಥೆನೈಡ್ ಮತ್ತು ಆ್ಯಕ್ಟಿನೈಡ್ ಸರಣಿಯಲ್ಲಿ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.
Related Articles
ಕರ್ನಾಟಕಕ್ಕೆ ಹೊಂದಿಕೊಂಡು ಇರುವ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಅಪರೂಪದ ಲೈಟ್ ರೇರ್ ಅರ್ಥ್ ಎಲೆಮೆಂಟ್ಸ್ (ಆರ್‌ಇಇ) ಖನಿಜ ನಿಕ್ಷೇಪ ಪತ್ತೆ ಹಚ್ಚಲಾಗಿದೆ. ಅದರಲ್ಲಿ ಮೊಬೈಲ್, ಕಾರು, ಟಿವಿ, ಕಂಪ್ಯೂಟರ್, ವೈದ್ಯಕೀಯ ತಂತ್ರಜ್ಞಾನ, ವಿಮಾನಯಾನ, ವಾಹನೋದ್ಯಮ, ರಕ್ಷಣೆ ಸೇರಿದಂತೆ ವಿವಿಧ ಕೈಗಾರಿಕೆಗಳಿಗೆ ಬೇಕಾಗುವ ಬಿಡಿಭಾಗಗಳಿಗೆ ಬೇಕಾಗುವ ಖನಿಜಗಳಿವು.
Advertisement
ಯಾವ ಲೋಹಗಳು ಪತ್ತೆ?ಲ್ಯಾಂಥನಮ್, ಸೀರಿಯಮ್, ಪ್ರಸೆಯೋಡೈಮಿಯಮ್, ನಿಯೋಡೈಮಿಯಮ್, ಯಟ್ರಿಯಮ್, ಹ್ಯಾಫಿ°ಯಮ್, ಟ್ಯಾಂಟಲಮ್, ನಿಯೋಬಿಯಮ್, ಜಿರ್ಕೋನಿಯಮ್ ಹಾಗೂ ಸ್ಕ್ಯಾಂಡಿಯಮ್ ಪತ್ತೆಯಾಗಿವೆ. ಭೂಮಿಯ ಅಪರೂಪದ ಖನಿಜಾಂಶಗಳ ಕುರಿತ ಲೋಹಶಾಸ್ತ್ರ ಅಧ್ಯಯನ, ಸಂಪನ್ಮೂಲಗಳ ಮೌಲ್ಯಮಾಪನ, ಆರ್ಥಿಕ ಅಭಿವೃದ್ಧಿಯಲ್ಲಿ ಅವುಗಳ ಪಾತ್ರವನ್ನು ಅರಿತು ಗಣಿಗಾರಿಕೆಗಾಗಿ ಸಂಭಾವ್ಯ ತಾಣಗಳನ್ನು ಗುರುತಿಸಿ, ಆರ್ಥಿಕತೆಗೆ ಒತ್ತು ನೀಡುವ ಉದ್ದೇಶವನ್ನು ಯೋಜನೆ ಹೊಂದಿದೆ.