Advertisement

ಆಂಧ್ರ: ಜಗನ್ ಮೋಹನ್ ರೆಡ್ಡಿ ಸಂಪುಟದ 24 ಸಚಿವರ ರಾಜೀನಾಮೆ

08:00 PM Apr 07, 2022 | Team Udayavani |

ಅಮರಾವತಿ : 2024 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರ ಇಡೀ ಕ್ಯಾಬಿನೆಟ್ ಗುರುವಾರ ರಾಜೀನಾಮೆ ನೀಡಿದೆ. ಕ್ಯಾಬಿನೆಟ್ ಸಭೆಯ ನಂತರ 24 ಸಚಿವರು ತಮ್ಮ ರಾಜೀನಾಮೆಯನ್ನು ನೀಡಿದ್ದು, ಭಾರಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

Advertisement

ಉಳಿದಿರುವ ಏಕೈಕ ಸಂಪುಟ ಸದಸ್ಯ ಸಿಎಂ ಜಗನ್ ರೆಡ್ಡಿ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ಜಗನ್ ರೆಡ್ಡಿ ಅವರು ತಮ್ಮ ಉಳಿದ ಅವಧಿಯಲ್ಲಿ ಸಂಪೂರ್ಣ ಹೊಸ ತಂಡಕ್ಕೆ ಹುದ್ದೆಗಳನ್ನು ನೀಡುವುದಾಗಿ ಹೇಳಿದ್ದರಿಂದ ಬದಲಾವಣೆಯನ್ನು ನಿರೀಕ್ಷಿಸಲಾಗಿತ್ತು. ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ಈ ಬದಲಾವಣೆ ಕೋವಿಡ್‌ನಿಂದಾಗಿ ಮುಂದೂಡಲಾಲಾಗಿತ್ತು.ಹೊರ ಹೋಗಿರುವ ತಂಡದಿಂದ ಒಬ್ಬರು ಅಥವಾ ಇಬ್ಬರು ಸಚಿವರನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ನೂತನ ಸಚಿವ ಸಂಪುಟದಲ್ಲಿ ಹೊಸದಾಗಿ ರಚನೆಯಾಗಿರುವ ರಾಜ್ಯದ 26 ಜಿಲ್ಲೆಗಳ ಪ್ರಾತಿನಿಧ್ಯ ದೊರೆಯುವ ಸಾಧ್ಯತೆ ಇದೆ. 2019 ರ ಜೂನ್‌ನಲ್ಲಿ ಜಗನ್ ರೆಡ್ಡಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಂತೆ ಜಾತಿ, ಪ್ರದೇಶ, ಧರ್ಮ ಮತ್ತು ಲಿಂಗ ಆದ್ಯತೆ ನೀಡಲಾಗುತ್ತಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಕಾಪು ಜಾತಿ ಮತ್ತು ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದಿಂದ ತಲಾ ಒಬ್ಬರಂತೆ ಐದು ಉಪ ಮುಖ್ಯಮಂತ್ರಿಗಳನ್ನು ಹೊಂದಿದ್ದರು . ಸಂಪುಟದಲ್ಲಿ ಮೂವರು ಮಹಿಳೆಯರಿದ್ದರು. ದಲಿತ ಸಮುದಾಯದ ಮಹಿಳೆ ಎಂ ಸುಚರಿತಾ ಗೃಹ ಸಚಿವರಾಗಿದ್ದರು.

ಇದು ಆಂಧ್ರಪ್ರದೇಶದ ಇತಿಹಾಸದಲ್ಲಿ ಇಡೀ ಸಚಿವ ಸಂಪುಟ ಅಧಿಕಾರದ ಮಧ್ಯದಲ್ಲಿ ರಾಜೀನಾಮೆ ನೀಡುತ್ತಿರುವುದು ಎರಡನೇ ಬಾರಿಗೆ ನಡೆಯುತ್ತಿದೆ.

Advertisement

ಬೈ ಬೈ ಜಗನ್ ಟ್ರೆಂಡಿಂಗ್

ವೈಎಸ್ ಜಗನ್ ರೆಡ್ಡಿಯವರ ಕರಾಳ ಆಡಳಿತದಿಂದಾಗಿ 2022 ರಲ್ಲಿ ಎಲ್ಲೆಡೆ ಕತ್ತಲೆ ತುಂಬಿದೆ ಎಂದು ವಿದ್ಯುತ್ ಸಮಸ್ಯೆಯ ಕುರಿತಾಗಿ ಹಲವರು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಬೈ ಬೈ ಜಗನ್ ಟ್ರೆಂಡಿಂಗ್ ಆಗಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಅನಿಯಂತ್ರಿತ ಮತ್ತು ಘೋಷಿಸದ ವಿದ್ಯುತ್ ಕಡಿತವು ದೊಡ್ಡ ಚರ್ಚೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.