Advertisement

ಅಂಧೇರಿ ಮೊಗವೀರ ಭವನ: ಗಡಿನಾಡ ಜಾನಪದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

10:45 PM Mar 31, 2019 | Team Udayavani |

ಮುಂಬಯಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಮಾ. 31ರಂದು ಅಪರಾಹ್ನ ಅಂಧೇರಿ ಪಶ್ಚಿಮದ ಮೊಗವೀರ ಭವನದ ಶ್ರೀಮತಿ ಶಾಲಿನಿ ಜಿ. ಶಂಕರ್‌ ಕನ್‌ವೆನ್ಶನ್‌ ಸೆಂಟರ್‌ ಸಭಾಗೃಹದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಜನಮನ ಜಾನಪದ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ್ದ ಗಡಿನಾಡ ಜಾನ ಪದ, ಸಾಂಸ್ಕೃತಿಕ ಉತ್ಸವವನ್ನು ಮುಖ್ಯಮಂತ್ರಿ ಚಂದ್ರು ಅವರು ಉದ್ಘಾಟಿಸಿದರು.

Advertisement

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್‌ ಎಲ್‌. ಬಂಗೇರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಉತ್ಸವದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ| ಕೆ. ಮುರಳೀಧರ, ನಿವೃತ್ತ ಪ್ರಾಂಶುಪಾಲ, ಕನ್ನಡ ಸಂಘ ಬಂಗಾರಪೇಟೆ ಅಧ್ಯಕ್ಷ ಪಲ್ಲವಿಮಣಿ ಎಂ. ಸುಬ್ರಹ್ಮಣಿ, ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಉದ್ಯಮಿ ಶ್ರೀನಿವಾಸ ಎನ್‌. ಕಾಂಚನ್‌, ಎನ್‌ಆರ್‌ಎ ಫೋರಂ ಬಹ್ರೈನ್‌ ಇದರ ಅಧ್ಯಕ್ಷ ಲೀಲಾಧರ್‌ ಬೈಕಂಪಾಡಿ, ಜನಮನ ಜಾನಪದ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಗೋ. ನಾ ಸ್ವಾಮಿ, ಮೊಗವೀರ ಮಾಸಿಕದ ಸಂಪಾದಕ ಅಶೋಕ ಎಸ್‌. ಸುವರ್ಣ, ಮೊಗವೀರ ವ್ಯವಸ್ಥಾಪಕ ಮಂಡಳಿ ಉಪಾಧ್ಯಕ್ಷ ಶ್ರೀನಿವಾಸ ಸಿ. ಸುವರ್ಣ ಮತ್ತು ಅರವಿಂದ ಕಾಂಚನ್‌, ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಕೆ. ಸಾಲ್ಯಾನ್‌, ಗೌರವ ಕೋಶಾಧಿಕಾರಿ ದಿಲೀಪ್‌ ಕುಮಾರ್‌ ಮೂಲ್ಕಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರಾಜು ಶ್ರೀಯಾನ್‌, ಕಾರ್ಯದರ್ಶಿ ಧರ್ಮೇಶ್‌ ಪುತ್ರನ್‌, ವಿಶ್ವಸ್ತ ಮಂಡಳಿಯ ಸದಸ್ಯ ಹರೀಶ್‌ ಕಾಂಚನ್‌, ಗಣೇಶ್‌ ಎಸ್‌. ಪುತ್ರನ್‌, ಬಿ. ಕೆ. ಪ್ರಕಾಶ್‌ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದುಷಿ ಗುಣವತಿ, ಮಧುರ ವಿ., ಸತ್ಯವತಿ, ಗಿರೀಶ್‌ ತಂಡದಿಂದ ಸಂಗೀತ ನೃತ್ಯ ವೈಭವ, ಪುಷ್ಕರ ಸೆಂಟರ್‌ ಫಾರ್‌ ಪರ್‌ಫಾರ್ಮಿಂಗ್‌ ಆರ್ಟ್ಸ್ ಸಂಸ್ಥೆಯು ಜನಪದ ಸೌರಭ, ಮಿಮಿಕ್ರಿ ಗೋಪಿ ಬೆಂಗಳೂರು ಅವರು ಹಾಸ್ಯ ಸಿಂಚನ, ಜನಮನ ಸಂಸ್ಥೆಯ ಸಂಸ್ಥಾಪಕರು ಗೋ. ನಾ. ಸ್ವಾಮಿ ಮತ್ತು ಪುಷ್ಪಾ ಆರಾಧ್ಯ ಬೆಂಗಳೂರು ಬಳಗ ಜಾನಪದ ರಸಮಂಜರಿ ಪ್ರಸ್ತುತಪಡಿಸಿತು. ಕುದ್ರೋಳಿ ಗಣೇಶ್‌ ತಂಡದಿಂದ ಜಾದೂ ಪ್ರದರ್ಶನಗೊಂಡಿತು. ಪ್ರತಿಭಾ ಆರ್‌. ಬೆಂಗಳೂರು ಅವರು ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ$ಮೊಗವೀರ ವ್ಯವಸ್ಥಾಪಕ ಮಂಡಳಿಯ ಸದಸ್ಯರಾದ ಸುರೇಶ್‌ ಶ್ರೀಯಾನ್‌, ಸುರೇಖಾ ಸುವರ್ಣ, ಪ್ರೀತಿ ಶ್ರೀಯಾನ್‌, ದೇವ್‌ರಾಜ್‌ ಕುಂದರ್‌, ದಯಾನಂದ ಬಂಗೇರ ಸೇರಿದಂತೆ ನೂರಾರು ಕಲಾಭಿಮಾನಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ರವಿವಾರ ನಿಧನಹೊಂದಿದ ನಾಡಿನ ಹಿರಿಯ ಕವಿ, ಸಾಹಿತಿ ಡಾ| ಬಿ. ಎ. ಸನದಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸ ಲಾಯಿತು. ಕಲಾಭಿಮಾನಿಗಳು, ತುಳು -ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಚಿತ್ರ – ವರದಿ : ರೋನ್ಸ್‌ ಬಂಟ್ವಾಳ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next