Advertisement

ಮತ್ತು ಬರುವ ಜ್ಯೂಸ್‌ ನೀಡಿ ಅತ್ಯಾಚಾರವೆಸಗಿದ ನಟ!

12:09 PM Dec 29, 2017 | Team Udayavani |

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಮದುವೆಯಾಗುವುದಾಗಿ ನಂಬಿಸಿರುವ “ಹೊಂಬಣ್ಣ’ ಸಿನಿಮಾದ ನಟ ಸುಬ್ರಮಣ್ಯ ಎಂಬಾತ, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ 23 ವರ್ಷದ ಯುವತಿಯೊಬ್ಬರು ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

Advertisement

“ಹೊಸಕೆರೆಹಳ್ಳಿಯ ದ್ವಾರಕ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ನಟ ಸುಬ್ರಮಣ್ಯ, ನವೆಂಬರ್‌ 1ರಂದು ತನ್ನ ಅಕ್ಕನ ಮನೆಯಲ್ಲಿ  ಪಾರ್ಟಿ ಇದೆ ಎಂದು ಸುಳ್ಳು ಹೇಳಿ ನನ್ನನ್ನು ಕರೆಸಿಕೊಂಡಿದ್ದ. ಬಳಿಕ ತನ್ನ ಮನೆಗೆ ಕರೆದುಕೊಂಡು ಹೋಗಿ ಕುಡಿಯಲು ಜ್ಯೂಸ್‌ ನೀಡಿದ.

ಕೆಲವೇ ನಿಮಿಷಗಳಲ್ಲಿ ನನಗೆ ಪ್ರಜ್ಞೆ ತಪ್ಪಿತು ನಂತರ ಎಚ್ಚರಗೊಂಡಾಗ ನನ್ನ ಮೇಲೆ ಆತ ಅತ್ಯಾಚಾರ ಎಸಗಿರುವುದು ಗೊತ್ತಾಯಿತು,’ ಎಂದಿರುವ ಸಂತ್ರಸ್ತ ಯುವತಿ, ಸುಬ್ರಹ್ಮಣ್ಯನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.

ಸಂತ್ರಸ್ತೆ  ಯವತಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ವಿರುದ್ಧ ಡಿ.26ರಂದು ಎಫ್ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಇತ್ತ ತನ್ನ ವಿರುದ್ಧ ದೂರು ದಾಖಲಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಆರೋಪಿ ಸುಬ್ರಹ್ಮಣ್ಯ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ನವೆಂಬರ್‌ 1ರಂದು ತನ್ನ  ಅಕ್ಕನ ಮನೆಯಲ್ಲಿ ಪಾರ್ಟಿ ಎಂದು ಹೇಳಿ ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ ಆರೋಪಿ, ಬಳಿಕ ಇದ್ದಕ್ಕಿದ್ದಂತೆ ದೂರ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದರೆ  ನೀನು ಬಡವರ ಹುಡುಗಿ ನನಗೆ 20 ಲಕ್ಷ  ಬಂಡವಾಳ ಹಾಕಿ ಸಿನಿಮಾ ನಿರ್ಮಿಸುವ ಹುಡುಗಿ ಬೇಕು ಎನ್ನತೊಡಗಿದ.

Advertisement

ಅಲ್ಲದೆ ಸಿನಿಮಾದವರು ಕೇಳಿದರೆ ಅವರೊಂದಿಗೆ ಸಹಕರಿಸು ಎಂದು ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಅವರ  ಪೋಷಕರನ್ನು ಕೇಳಿದರೇ ಅವರೂ ನನ್ನ ಚಾರಿತ್ರ್ಯ ಹರಣ ಮಾಡುವಂತಹ ಮಾತುಗಳನ್ನಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಫೇಸ್‌ಬುಕ್‌ ಪ್ರೇಮ್‌ ಕಹಾನಿ!: ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಸುಬ್ರಹ್ಮಣ್ಯ, ಕನ್ನಡ ಚಲನ ಚಿತ್ರರಂಗದಲ್ಲಿ ಸಹನಟ ಎಂದು ಹೇಳಿಕೊಂಡು ಎರಡು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. “ಫೇಸ್‌ಬುಕ್‌ನಲ್ಲಿ ಪರಿಚಯ ಬೆಳೆದಂತೆ ನನ್ನ ಕುಟುಂಬದವರೊಂದಿಗೂ ಆತ್ಮೀಯತೆ ಬೆಳೆಸಿಕೊಂಡಿದ್ದ. ಅಲ್ಲದೆ ತಾನು ನಿನ್ನನ್ನು ಪ್ರೀತಿಸುತ್ತಿದ್ದು, ಮದುವೆಯಾಗುತ್ತೇನೆ ಎಂದು ತಿಳಿಸಿದ್ದ.

ಈ ವಿಚಾರ ನನ್ನ  ಮನೆಯವರ ಬಳಿಯೂ ಹೇಳಿ ನಂಬಿಸಿದ್ದ ಅವರ ಮನೆಯವರಿಗೂ ಪರಿಚಯ ಮಾಡಿಕೊಟ್ಟಿದ್ದ. ನೀನು ನನ್ನನ್ನು ಮದುವೆಯಾಗದೇ ಬೇರೆಯವರನ್ನು  ಮದುವೆಯಾದರೆ ಆ್ಯಸಿಡ್‌ ಹಾಕುವುದಾಗಿ ಬೆದರಿಕೆ ಹಾಕಿದ್ದ. ಆದರೆ ಮದುವೆ ವಿಚಾರ ಪ್ರಸ್ತಾಪ ಮಾಡುತ್ತಿದ್ದಂತೆ ಹೊಂಬಣ್ಣ ಸಿನಿಮಾ ಬಿಡುಗಡೆಯಾಗಲಿ ಎಂದು ಸಬೂಬು ಹೇಳುತ್ತಿದ್ದ. ಚಿತ್ರ ಬಿಡುಗಡೆಯಾದ ಬಳಿಕ ಮನೆಯ ಗೃಹಪ್ರವೇಶ ಕಾರ್ಯಕ್ರಮ ಆದ ಬಳಿಕ ವಿವಾಹ ಎಂದು ಮುಂದೆ ತಳ್ಳಿದ್ದ ಎಂದು ಯುವತಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next