Advertisement
ಮಾಜಿ ಯುಎಸ್ ಓಪನ್ ಚಾಂಪಿಯನ್, ಫ್ರೆಂಚ್ ಓಪನ್ ಫೈನಲಿಸ್ಟ್ ಕೂಡ ಆಗಿರುವ ಸಮಂತಾ ಸ್ಟೋಸರ್ ಮೊದಲ ಸೆಟ್‌ನಲ್ಲಿ ತೀವ್ರ ನಿರಾಸೆಯ ಪ್ರದರ್ಶನ ನೀಡಿ ಕಳಪೆ ಫಾರ್ಮ್ಗೆ ಸಾಕ್ಷಿಯಾದರು. ದ್ವಿತೀಯ ಸೆಟ್‌ನಲ್ಲಿ ಸ್ವಲ್ಪಮಟ್ಟಿಗೆ ಪ್ರತಿರೋಧ ತೋರಿದರೂ ಸೆವಸ್ತೋವಾ ಆಟಕ್ಕೆ ಸಾಟಿಯಾಗಲಿಲ್ಲ.
ವಿಶ್ವದ 8ನೇ ಶ್ರೇಯಾಂಕದ ಫ್ರಾನ್ಸ್ ಆಟಗಾರ್ತಿ ಕ್ಯಾರೋಲಿನಾ ಗಾರ್ಸಿಯಾಗೂ ಇದು ಅದೃಷ್ಟದ ದಿನವಾಗಿರಲಿಲ್ಲ. ಗಾಯಾಳಾದ ಅವರು ಮೊದಲ ಸೆಟ್ ಬಳಿಕ ಪಂದ್ಯಾವಳಿಯಿಂದ ಹಿಂದೆ ಸರಿದರು. ಹೀಗಾಗಿ ಎದುರಾಳಿ ಅಲಿಜ್ ಕಾರ್ನೆಟ್ ದ್ವಿತೀಯ ಸುತ್ತಿಗೆ ಮುನ್ನಡೆದರು. ಆದರೆ ಮೊದಲ ಸೆಟ್ 6-3ರಿಂದ ಗಾರ್ಸಿಯಾ ಪಾಲಾಗಿತ್ತು. ಕಾರ್ನೆಟ್ ಅವರಿನ್ನು ಕ್ರೊವೇಶಿಯಾದ ಮಿರ್ಜಾನಾ ಲುಸಿಕ್ ಬರೋನಿ ವಿರುದ್ಧ ಆಡಲಿದ್ದಾರೆ. ದಿನದ ಇನ್ನೊಂದು ಪಂದ್ಯದಲ್ಲಿ ಬರೋನಿ 6-4, 4-6, 6-0 ಅಂತರದಿಂದ ಜರ್ಮನಿಯ ತಜಾನಾ ಮರಿಯಾ ಅವರನ್ನು ಪರಾಭವಗೊಳಿಸಿದರು. ಸರ್ಬಿಯಾದ ಅಲೆಕ್ಸಾಂಡ್ರಾ ಕ್ರುನಿಕ್ ಜರ್ಮನಿಯ ಕರಿನಾ ವಿತಾಫ್ ಅವರನ್ನು ಭಾರೀ ಹೋರಾಟದ ಬಳಿಕ 7-5, 7-6 (2) ಅಂತರದಿಂದ ಸೋಲಿಸಿದರು. ಕ್ರುನಿಕ್ ಅವರ ದ್ವಿತೀಯ ಸುತ್ತಿನ ಎದುರಾಳಿ ಸ್ಪೇನಿನ ಅಗ್ರ ಶ್ರೇಯಾಂಕಿತ ಆಟಗಾರ್ತಿ ಗಾರ್ಬಿನ್ ಮುಗುರುಜಾ.