Advertisement

Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ

12:29 PM May 08, 2024 | Team Udayavani |

ಮುಂಬಯಿ: ಗಾಯಕಿ, ಗೀತರಚನೆಕಾರ್ತಿ ಉದ್ಯಮಿ ಅನನ್ಯಶ್ರೀ ಬಿರ್ಲಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತಮ್ಮ ವ್ಯವಹಾರದ ಮೇಲೆ ಕೇಂದ್ರೀಕರಿಸುವುದಾಗಿ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಳಂ ಬಿರ್ಲಾ ಅವರ ಹಿರಿಯ ಪುತ್ರಿ ಹೇಳಿಕೊಂಡಿದ್ದಾರೆ.

Advertisement

“ಗೆಳೆಯರೇ, ಇದು ಅತ್ಯಂತ ಕಠಿಣ ನಿರ್ಧಾರವಾಗಿದೆ. ನಾನು ನಡೆಸುವ ಮತ್ತು ನಿರ್ಮಿಸುತ್ತಿರುವ ಎರಡೂ ವ್ಯವಹಾರಗಳನ್ನು ಸಮತೋಲನಗೊಳಿಸುವ ಹಂತವನ್ನು ನಾನು ತಲುಪಿದ್ದೇನೆ + ಸಂಗೀತವು ಅಸಾಧ್ಯವಾಗುತ್ತಿದೆ. ನಾನು ವ್ಯಕ್ತಪಡಿಸಲು ಸಾಧ್ಯವಾಗದ ರೀತಿಯಲ್ಲಿ ಅದು ನನ್ನ ಮೇಲೆ ಭಾರವಾಗುತ್ತಿದೆ. ಧನ್ಯವಾದಗಳು ನಾನು ಅನೇಕ ವರ್ಷಗಳಿಂದ ಬಿಡುಗಡೆ ಮಾಡಿದ ಸಂಗೀತದ ಮೇಲಿನ ಪ್ರೀತಿಯನ್ನು ನಾವು ನಮ್ಮದೇ ಆದ ಜನರು ಮಾಡಿದ ಇಂಗ್ಲಿಷ್ ಸಂಗೀತವನ್ನು ಶ್ಲಾಘಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಎಲ್ಲಾ ಶಕ್ತಿಯನ್ನು ನಾನು ವ್ಯಾಪಾರ ಪ್ರಪಂಚದತ್ತ ಕೇಂದ್ರೀಕರಿಸುವ ಸಮಯವಿದು” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

29 ರ ಹರೆಯದ ಅನನ್ಯಶ್ರೀ ಅವರ ನಿರ್ಧಾರ ಘೋಷಣೆ ಬಳಿಕ ಅವರ ಸ್ನೇಹಿತರು, ಹಿತೈಷಿಗಳು ಮತ್ತು ಅಭಿಮಾನಿಗಳು ತೀವ್ರ ಬೇಸರ ಹೊರ ಹಾಕಿದ್ದಾರೆ. ಗಾಯಕ ಅಮ್ರಾನ್ ಮಲಿಕ್ , ಸಾನಿಯಾ ಮಿರ್ಜಾ, ಬಾಬಿ ಡಿಯೋಲ್ ಸೇರಿ ಹಲವಾರು ಮಂದಿ ಬೇಸರ ಹೊರ ಹಾಕಿದ್ದಾರೆ.

ಪಬ್‌ಗಳು ಮತ್ತು ಕ್ಲಬ್‌ಗಳಲ್ಲಿ ಗಿಟಾರ್ ನುಡಿಸಿ ಹಾಡುವ ಮೂಲಕ ತನ್ನದೇ ಆದ ಸಂಗೀತ ಪ್ರಾರಂಭಿಸಿದ ಅನನ್ಯಶ್ರೀ ಚೊಚ್ಚಲ “ಲಿವಿನ್’ ದಿ ಲೈಫ್” ಮೂಲಕ ಜನಪ್ರಿಯವಾಗಿದ್ದರು. “ಲಿವಿನ್’ ದಿ ಲೈಫ್” ಜಿಮ್‌ಬೀನ್ಜ್‌ ಅವರು ಸಹ ಗೀತ ರಚನೆ ಸಾಹಿತ್ಯ ಮತ್ತು ನಿರ್ಮಿಸಿದ್ದರು. ಫಿಲಡೆಲ್ಫಿಯಾದ ಸ್ಟುಡಿಯೊದಲ್ಲಿ ರೆಕಾರ್ಡ್ ಮಾಡಲಾಗಿತ್ತು. ಡಚ್ ಡಿಜೆ ಅಫ್ರೋಜಾಕ್ ಅವರ ರೀಮಿಕ್ಸ್, ಮೂಲಕ ಅನನ್ಯಶ್ರೀ ವಿಶ್ವಾದ್ಯಂತ ಬಿಡುಗಡೆಯಾದ ಮೊದಲ ಭಾರತೀಯ ಕಲಾವಿದೆ ಎನಿಸಿಕೊಂಡಿದ್ದರು. 2017 ರ ಜೂನ್ ಹೊತ್ತಿಗೆ YouTube ನಲ್ಲಿ 14 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದರು.ಅವರ ಹಾಡುಗಳು 2019 ರಲ್ಲಿ ಸಂಗೀತ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದವು. ಆಕೆಯ ಐದು ಸಿಂಗಲ್ಸ್, ಪ್ಲಾಟಿನಂ ಅಥವಾ ಡಬಲ್ ಪ್ಲಾಟಿನಂ ಸ್ಥಾನಮಾನವನ್ನು ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next