Advertisement

Sirsi: ರಾಮ ಮಂದಿರ ವಿಚಾರವನ್ನು ರಾಜಕೀಯಗೊಳಿಸಬಾರದು: ಅನಂತಕುಮಾರ ಹೆಗಡೆ

01:30 PM Jan 10, 2024 | Team Udayavani |

ಶಿರಸಿ: ರಾಮ ಮಂದಿರ ಉದ್ಘಾಟನೆ ಕೇವಲ ದೇವಾಲಯದ ಉದ್ಘಾಟನೆ ಅಲ್ಲ ಬದಲಾಗಿ ಹಿಂದೂಗಳ‌ ಮಹಾ ಶಕ್ತಿ ಅನಾವರಣ. ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಯ‌ ಮಟ್ಟಕ್ಕೆ ಇಳಿದು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

Advertisement

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ರಾಮ ಮಂದಿರ ವಿಚಾರವನ್ನು ರಾಜಕೀಕರಣಗೊಳಿಸಬಾರದು. ಧರ್ಮ ಮತ್ತು ಸಂಸ್ಕೃತಿ ರಾಜಕೀಯ ರೇಖೆ ಮೀರಿದ್ದು. ರಾಮ ಭಕ್ತರಿಗೆ ಎಲ್ಲರಿಗೂ ಆಹ್ವಾನವಿದೆ. ಆಹ್ವಾನ ಬಂದೇ ಹೋಗಬೇಕಿಲ್ಲ. ಆಹ್ವಾನ ಬರುವ ತನಕ ಬಂದಿಲ್ಲ ಎನ್ನುವದು, ಬಂದ ಬಳಿಕ ಹೋಗುವದಿಲ್ಲ ಎನ್ನುವುದು ಹೀಗೆ ಡೊಂಬರಾಟ ಮಾಡಬಾರದು ಎಂದು ಹೇಳಿದರು.

ರಾಮ ಮಂದಿರ ಸಮಸ್ತ ಹಿಂದೂ ಸಮಾಜದ ಮಂದಿರ. ಬಿಜೆಪಿ ಅಥವಾ ಸರಕಾರದ‌ ಮಂದಿರವಲ್ಲ ಎಂದರು.

ಶತಮಾನಗಳ ಇತಿಹಾಸಕ್ಕೆ ಭವ್ಯ ಗೆಲುವು ಸಿಕ್ಕಿದೆ. ಸಾವಿರ ವರ್ಷಗಳಿಂದ ಹಿಂದೂ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯ, ದೌರ್ಜನ್ಯ ಅತ್ಯಾಚಾರ ಬದಲಾಗಿ ಸಮಾಜ ಎದ್ದು ನಿಂತಿದೆ. ಹಿಂದೂ ಸಮಾಜ ಸಾತ್ವಿಕ ಶಕ್ತಿ ಅನಾವರಣವಾಗುತ್ತಿದೆ. ಒಂದು ಸಮಾಜ ಹೇಗೆ ನಿಲ್ಲುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಪ್ರತ್ಯಕ್ಷ, ವೈಚಾರಿಕ ಸಂಘರ್ಷ ಎಲ್ಲವನ್ನೂ‌ ಮೆಟ್ಟಿ ನಿಂತ ಘಟಕ ಎಂದರು.

ದೇಶದ ಪರಂಪರೆ, ಸಂಸ್ಕೃತಿ, ಧರ್ಮ, ಇತಿಹಾಸದ ಆಳವಾದ ನಂಬಿಕೆ ಇದ್ದವರಿಗೆ ಇದೊಂದು ಸಮಾರೋಹ. ಈ ಸಮಾಜ ಮೇಲೆ ಸ್ವಂತ ಶಕ್ತಿಯ ಮೇಲೆ ಎದ್ದು ನಿಂತಿದೆ ಎಂದು ಹೇಳಿದರು.

Advertisement

ಈ ವೇಳೆ ಚಂದ್ರು‌ ಎಸಳೆ, ಮೋಹನದಾಸ ನಾಯಕ ಇತರರು ಇದ್ದರು.

ಇದನ್ನೂ ಓದಿ: Heart Attack: ಕ್ರಿಕೆಟ್ ಆಡುವ ವೇಳೆ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು

Advertisement

Udayavani is now on Telegram. Click here to join our channel and stay updated with the latest news.

Next