Advertisement
ಕೇಂದ್ರ ಸಂಪುಟ ವಿಸ್ತರಣೆ ಸಮಯದಲ್ಲಿ ಅನಿರೀಕ್ಷಿತವಾಗಿ ಅನಂತಕುಮಾರ ಹೆಗಡೆ ಹೆಸರು ಬರಲು ಕಾರಣವಿದೆ. ಬಿಜೆಪಿಯನ್ನು ಅದ್ಭುತವಾಗಿ ಸಮರ್ಥಿಸಿಕೊಳ್ಳಬಲ್ಲ, ಪ್ರತಿಪಕ್ಷವನ್ನು ಹಿಗ್ಗಾಮುಗ್ಗಾ ಜಾಲಾಡಿಸಬಲ್ಲ ವಾಕ್ ಚಾತುರ್ಯ ಹೊಂದಿರುವ ಹೆಗಡೆ, ಬಿಜೆಪಿಯ ರಾಜ್ಯ ಕಾರ್ಯದರ್ಶಿ ಆಗುವವರೆಗೆ ತಮ್ಮ ಕ್ಷೇತ್ರದಲ್ಲಿ ಗಟ್ಟಿ ನಿಲ್ಲುವ ರಾಜಕೀಯ ತಂತ್ರಗಾರಿಕೆ ಮಾಡುತ್ತಾ ಬಂದರು. ತಮ್ಮ ವಾಗ್ಝರಿಯಿಂದ ಕೇಳುಗರನ್ನು ಮಂತ್ರಮುಗ್ಧಗೊಳಿಸಬಲ್ಲ, ಆ ಕ್ಷಣದಲ್ಲಿ ಎಲ್ಲರನ್ನೂ ಒಪ್ಪಿಸಬಲ್ಲ, ಎಲ್ಲ ಜಾತಿಯವರ ವಿಶ್ವಾಸ ಗಳಿಸಿರುವ ಹೆಗಡೆ ಎಂಬ ನಾಣ್ಯ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ತರುವ ವಿಶ್ವಾಸದ ಮೇಲೆ ಮಂತ್ರಿ ಪಟ್ಟ ದಕ್ಕಿದೆ.
Related Articles
Advertisement
ಪರಿಸರವಾದಿಗಳಿಂದ ಅಡ್ಡಗಾಲು: ಉತ್ತರ ಕನ್ನಡದ 11, ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ತಾಲೂಕುಗಳನ್ನೊಳಗೊಂಡ ಸುಮಾರು ಗೋವಾ ರಾಜ್ಯದಷ್ಟೇ ದೊಡ್ಡದಾದ ಕೆನರಾ ಮತ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅನಂತ ಪರಿಸರಕ್ಕೆ ಪೂರಕವಾದ ಕೆನರಾ ಟ್ರೇಲ್‌ನಂತಹ ಯೋಜನೆ ತಂದರೂ ಪರಿಸರವಾದಿಗಳು ಅಡ್ಡಗಾಲು ಹಾಕಿದರು. ಸಿಆರ್‌ಜಡ್ ಮತ್ತು ಅರಣ್ಯ ಕಾನೂನು ಜಿಲ್ಲೆಯ ಅಭಿವೃದ್ಧಿಗೆ ಅಡ್ಡಗಾಲಾಗಿರುವುದರಿಂದ ಅನಂತ ಯೋಜನೆಗೆ ಕಲ್ಲುಬಿತ್ತು. ಅವರು ಸಂಸದರಿದ್ದಾಗ ಸೀಬರ್ಡ್ ಯೋಜನೆ ಬಂತು, ಪರಿಹಾರದ ತೀರ್ಮಾನ ಈಗ ಬಂದಿದೆ, ಕೊಡಿಸುವ ಜವಾಬ್ದಾರಿ ಮಂತ್ರಿ ಅನಂತ ಮೇಲಿದೆ.
ಕೇಂದ್ರ ಸಂಪುಟದಲ್ಲಿ ಕೌಶಲ್ಯಾಭಿವೃದ್ಧಿ ಸಚಿವರಾಗಿ ನೇಮಕಗೊಂಡಿರುವ ಅನಂತಕುಮಾರ್ ಹೆಗಡೆ ಅವರಿಗೆ ಅಭಿನಂದನೆಗಳು. ಹೊಸ ಭಾರತ ಸೃಷ್ಟಿಗಾಗಿ ಕೋಟ್ಯಂತರ ಕೌಶಲ್ಯಭರಿತ ಯುವ ಸಮುದಾಯ ರೂಪಿಸುವ ಪ್ರಧಾನಿ ಮೋದಿ ಕನಸಿಗೆ ಹೊಸ ಶಕ್ತಿ ಬರಲಿದೆ. ಮಹತ್ವದ ಖಾತೆ ವಹಿಸಿಕೊಂಡಿರುವ ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯೆಲ್, ಮುಕ್ತಾರ್ ಅಬ್ಟಾಸ್ ನಖೀÌ, ಧರ್ಮೇಂದ್ರ ಪ್ರಧಾನ್ ಅವರನ್ನೂ ಅಭಿನಂದಿಸುತ್ತೇನೆ.ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಜೀಯು ಹೊನ್ನಾವರ