Advertisement

Anant-Radhika 2nd Pre-wed:‌ ಐಷಾರಾಮಿ ಹಡಗು, 800 ಅತಿಥಿಗಳು.. ಏನಿರಲಿದೆ ಈ ಬಾರಿ ವಿಶೇಷ?

01:07 PM May 27, 2024 | Team Udayavani |

ಮುಂಬಯಿ: ಉದ್ಯಮಿ ಮುಕೇಶ್‌ ಅಂಬಾನಿ – ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್‌ ಅವರ ಎರಡನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಇಟಲಿ ಸಜ್ಜಾಗಿದೆ. ನೂರಾರು ಗಣ್ಯರ ಸಮ್ಮುಖದಲ್ಲಿ ದುಬಾರಿ ಪ್ರೀ ವೆಡ್ಡಿಂಗ್‌ ಸಂಭ್ರಮ ನಡೆಯಲಿದೆ.

Advertisement

ಇದೇ ವರ್ಷದ ಮಾರ್ಚ್ ನಲ್ಲಿ ಗುಜರಾತಿನ ಜಾಮ್‌ನಗರದಲ್ಲಿ ಕೋಟಿ ಕೋಟಿ ಖರ್ಚು ವೆಚ್ಚದಲ್ಲಿ ಅದ್ಧೂರಿ ಪ್ರೀ ವೆಡ್ಡಿಂಗ್‌ ನೆರವೇರಿತ್ತು.ಈ ಸಾಂಸ್ಕೃತಿಕ ಸಂಜೆಯಲ್ಲಿ ಜಗತ್ತಿನ ಖ್ಯಾತ ಸೆಲೆಬ್ರಿಟಿಗಳು, ಗಣ್ಯರು ಭಾಗಿಯಾಗಿದ್ದರು.

ಇಟಲಿಯತ್ತ ಬಿಟೌನ್‌ ಸೆಲೆಬ್ರಿಟಿಗಳು.. ಹಿಂದಿನ ಪ್ರೀ ವೆಡ್ಡಿಂಗ್‌ ಸಂಭ್ರಮದಲ್ಲಿ ಬಾಲಿವುಡ್‌ ನ ಖ್ಯಾತ ಸೆಲೆಬ್ರಿಟಿಗಳು ವೇದಿಕೆ ಮೇಲೆ ಹೆಜ್ಜೆ ಹಾಕಿದ್ದರು. ಶಾರುಖ್‌, ಸಲ್ಮಾನ್‌ ಹಾಗೂ ಆಮೀರ್‌ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಈ ಬಾರಿಯ ಪ್ರೀ ವೆಡ್ಡಿಂಗ್‌ ಕೂಡ ದೊಡ್ಡಮಟ್ಟದಲ್ಲಿ ನಡೆಯುವ ಸಾಧ್ಯತೆಯಿದೆ. ಸೋಮವಾರ ಮುಂಜಾನೆ ಇಟಲಿಯತ್ತ ಬಿಟೌನ್‌ ಸ್ಟಾರ್ಸ್‌ಗಳು ಹೊರಟಿದ್ದಾರೆ.  ಸಲ್ಮಾನ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ರಣವೀರ್ ಸಿಂಗ್ ಸೇರಿದಂತೆ ಕ್ರಿಕೆಟಿಗ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಕೂಡ ಇಟಲಿಯತ್ತ ಪಯಣ ಬೆಳೆಸಿದ್ದಾರೆ.

ಈ ಬಾರಿ ಏನಿರಲಿದೆ ವಿಶೇಷ?:

Advertisement

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಕಳೆದ ಬಾರಿಯಂತೆ ಈ ಬಾರಿಯೂ ಅತ್ಯಂತ ಅದ್ಧೂರಿತನದಿಂದಲೇ ಇರಲಿದೆ.  ಮೇ 28 ರಿಂದ 30 ರವರೆಗೆ ಪ್ರೀ ವೆಡ್ಡಿಂಗ್‌ ಸಂಭ್ರಮ ನೆರವೇರಲಿದೆ. ಸುಮಾರು 800 ಅತಿಥಿಗಳು ಇರಲಿದ್ದು, ಐಷಾರಾಮಿ ಕ್ರೂಸ್‌ಲೈನರ್‌ನಲ್ಲಿ (ಐಷಾರಾಮಿ ಹಡಗು) ಸಂಭ್ರಮಾಚರಣೆ ನಡೆಯಲಿದೆ ಎಂದು ʼಡೆಕ್ಕನ್ ಕ್ರಾನಿಕಲ್ʼ ವರದಿ ಮಾಡಿದೆ.

ಅತಿಥಿಗಳ ಆತಿಥ್ಯಕ್ಕೆ 600 ಸಿಬ್ಬಂದಿಗಳು: ಇನ್ನು ಪ್ರೀ ವೆಡ್ಡಿಂಗ್‌ ಗೆ ಬರುವ ಅತಿಥಿಗಳ ಆತಿಥ್ಯ ವಹಿಸಲು 600 ಸಿಬ್ಬಂದಿಗಳು ಇರಲಿದ್ದಾರೆ.

ಬಾಹ್ಯಾಕಾಶ ವಿಷಯದ ಥೀಮ್:‌ ( Space-themed pre-wedding bash)

ಈ ಬಾರಿಯ ನಡೆಯಲಿರುವ ಪ್ರೀ ವೆಡ್ಡಿಂಗ್‌ ಸಂಭ್ರಮಾಚರಣೆ ವಿಶೇಷವಾಗಿರಲಿದೆ. ಇಡೀ ಕಾರ್ಯಕ್ರಮ ಬಾಹ್ಯಾಕಾಶ ವಿಷಯದ ಮೇಲೆಯೇ ನಡೆಯಲಿದೆ. ಹಡಗು ಹಾಗೂ ಉಡುಗೆ – ತೊಡುಗೆ ಎಲ್ಲವೂ ಬಾಹ್ಯಾಕಾಶದ ಥೀಮ್‌ ನಲ್ಲೇ ಇರಲಿದೆ.

ರಾಧಿಕಾ ಮರ್ಚೆಂಟ್ ಅವರ ವಿಶಿಷ್ಟ ಉಡುಗೆ:

ರಾಧಿಕಾ ಮರ್ಚೆಂಟ್  ಗ್ರೇಸ್ ಲಿಂಗ್ ಕೌಚರ್ ನ್ನು ಧರಿಸಲಿದ್ದಾರೆ ಎಂದು ವರದಿಯಾಗಿದೆ. ಇದು 3D ರೀತಿ ಇರಲಿದ್ದು, ಏರೋಸ್ಪೇಸ್ ಅಲ್ಯೂಮಿನಿಯಂ ತಂತ್ರಜ್ಞಾನವನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಇದು ಗ್ಯಾಲಕ್ಸಿಯ ರಾಜಕುಮಾರಿಯ ಪರಿಕಲ್ಪನೆಯಿಂದ ಪ್ರೇರಿತವಾಗಿದೆ.

ಇರಲಿದೆ ಸ್ಪೆಷೆಲ್‌ ಮೆನು: ಜಾಮ್‌ ನಗರದಲ್ಲಾದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ವಿವಾಹ ಪೂರ್ವ ಸಂಭ್ರಮದಲ್ಲಿದ್ದಂತೆ ಅತಿಥಿಗಳಿಗೆ ಗೌರ್ಮೆಟ್ ಪಾಕಪದ್ಧತಿ (ದುಬಾರಿ ಗುಣಮಟ್ಟದ ಪಾಕ ಪದ್ಧತಿ) ವ್ಯವಸ್ಥೆ ಇರಲಿದೆ. ಪಾರ್ಸಿ, ಥಾಯ್, ಮೆಕ್ಸಿಕನ್ ಮತ್ತು ಜಪಾನೀಸ್ ಭಕ್ಷ್ಯಗಳು ಒಳಗೊಳ್ಳಲಿದೆ.

ಅತಿಥಿಗಳ ಪಟ್ಟಿ.. ಜಾಮ್‌ ನಗರ್‌ ದಲ್ಲಿ ಭಾಗಿಯಾದ ಪ್ರಮುಖ ಬಿಟೌನ್‌ ಸ್ಟಾರ್ಸ್‌ ಗಳು ಇಟಲಿಯ ಪ್ರೀ ವೆಡ್ಡಿಂಗ್‌ ನಲ್ಲೂ ಭಾಗಿಯಾಗಲಿದ್ದಾರೆ. ಸಲ್ಮಾನ್‌ ಖಾನ್‌, ಶಾರುಖ್‌, ಆಮೀರ್‌ ಖಾನ್‌, ರಣ್ವೀರ್‌, ರಣ್ಬೀರ್‌, ಆಲಿಯಾ ಸೇರಿದಂತೆ ಇತರೆ ಪ್ರಮುಖ ಸ್ಟಾರ್ಸ್‌ ಗಳು ಇಟಲಿಗೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next