Advertisement

Wedding Menu: ಅಂಬಾನಿ ಮಗನ ವಿವಾಹಪೂರ್ವ ಸಮಾರಂಭದಲ್ಲಿ 2,500 ಬಗೆ ಖಾದ್ಯ!

11:09 PM Feb 27, 2024 | Team Udayavani |

ಮುಂಬೈ: ಮುಕೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹಪೂರ್ವ ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಅತಿಥಿಗಳಿಗಾಗಿ 2,500 ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ.

Advertisement

ಮಾ.1ರಿಂದ 3ರವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ಸಮಾರಂಭಗಳು ನಡೆಯಲಿವೆ. ಇದರಲ್ಲಿ ಭಾಗವಹಿಸುವ ಅತಿಥಿಗಳಿಗೆ ಖುದ್ದು, ಯಾವ ಖಾದ್ಯಗಳು ಅವರ ಆದ್ಯತೆ ಎನ್ನುವಂಥ ವಿಚಾರಗಳನ್ನು ಆತಿಥ್ಯ ವಹಿಸುತ್ತಿರುವ ತಂಡ ಕೇಳಿ ತಿಳಿದುಕೊಂಡಿದೆ. ಅದರಂತೆ, ಸಮಾರಂಭದ ನೆನಪು ಸ್ಮರಣೀಯವಾಗಿಸಲು ವಿವಿಧ ರೀತಿಯ ಪಾಕ ಪದ್ದತಿಗಳಿರುವ 2,500 ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಪೈಕಿ ಬೆಳಗ್ಗೆ ಉಪಾಹಾರಕ್ಕೆ 70 ಬಗೆಯ ತಿನಿಸಿನ ಆಯ್ಕೆಗಳಿರಲಿದ್ದು, ಮಧ್ಯಾಹ್ನದ ಭೋಜನಕ್ಕೆ 250 ಬಗೆ, ರಾತ್ರಿಯ ಊಟಕ್ಕೆ 250 ಬಗೆ ಖಾದ್ಯಗಳು ಇರಲಿವೆ. ಸಮಾರಂಭ ನಡೆಯುವ ಯಾವುದೇ ದಿನದಲ್ಲೂ ಯಾವುದೇ ಖಾದ್ಯ ಪುನರಾವರ್ತಿತವಾಗುತ್ತಿಲ್ಲ.

21ರ ಪೈಕಿ 20 ಮಂದಿ ಮಹಿಳಾ ಶೆಫ್ ಗಳು:
ಇಂದೋರ್‌ ಮೂಲದ ತಿನಿಸುಗಳಿಗೆ ಅಂಬಾನಿ ಕುಟುಂಬ ಹೆಚ್ಚಿನ ಗಮನವಹಿಸಿದೆ. ಖಾದ್ಯ ತಯಾರಿಸಲು ಇಂದೋರ್‌ನಿಂದ 21 ಶೆಫ್ಗಳನ್ನು ಕರೆಸಲಾಗಿದೆ. ವಿಶೇಷವೆಂದರೇ ಈ 21 ಬಾಣಸಿಗರ ಪೈಕಿ ಒಬ್ಬರು ಮಾತ್ರ ಪುರುಷ ಬಾಣಸಿಗ, ಉಳಿದವರೆಲ್ಲಾ ಮಹಿಳೆಯರೇ ಆಗಿದ್ದಾರೆ.

ಇದನ್ನೂ ಓದಿ: ಪತಂಜಲಿ ಸುಳ್ಳು ಜಾಹೀರಾತು ಪ್ರಕರಣ: ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆಯೇ?: ಸುಪ್ರೀಂ

Advertisement

Udayavani is now on Telegram. Click here to join our channel and stay updated with the latest news.

Next