ಎಲ್ಲರನ್ನೂ ಕಾಡುವ ಒಂದು ಮುಖ್ಯ ಪ್ರಶ್ನೆ , ಮುಖದ ಸೌಂದರ್ಯವನ್ನು ಹೆಚ್ಚಿಸುವಂಥ ಯಾವುದಾದರೂ ಫಿಟ್ನೆಸ್ ತಂತ್ರ, ಎಕ್ಸರ್‌ಸೈಜ್ ಇದೆಯೆ?
ಯಾಕಿಲ್ಲ!
ಖಂಡಿತ ಇದೆ, ನಮ್ಮ ಮುಖದ ಕಾಂತಿ, ಕಳಕಳಿ, ಹೊಳಪು ಬರುವುದು ನಾವು ಹಚ್ಚುವ ಕ್ರೀಮ್‌ಗಳಿಂದಲ್ಲ, ಅದು ಬರೋದು ನಮ್ಮೊಳಗಿನ ಹುರುಪು, ಉತ್ಸಾಹ, ಆತ್ಮವಿಶ್ವಾಸಗಳಿಂದ. ಅದು ಸಾಧ್ಯವಾಗುವುದು ನೀವು ತೆಗೆದುಕೊಳ್ಳುವ ಪೌಷ್ಟಿಕಾಂಶಯುಕ್ತ ಆಹಾರಗಳಿಂದ. ಆಹಾರದಲ್ಲಿ ನ್ಯೂಟ್ರಿಷನ್ ಇದ್ದರೆ ಅದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡುತ್ತದೆ. ಇದಕ್ಕೆ ಇನ್ನೊಂದು ದಾರಿ, ಎಕ್ಸರ್‌ಸೈಜ್.
ಚೆನ್ನಾಗಿ ಬೆವರುವಂತೆ ಎಕ್ಸರ್‌ಸೈಜ್ ಮಾಡಬೇಕು. ಮುಖದ ಅತಿ ಚಿಕ್ಕ ಗುಳಿಗಳು, ನಿಮ್ಮ ಮುಖದ ಸೌಂದರ್ಯದ ಮೂಲಗಳು. ನೀವು ಮಾಡುವ ಎಕ್ಸರ್‌ಸೈಜ್, ಆ ಗುಳಿಗಳನ್ನು ಅನ್‌ಲಾಕ್ ಮಾಡುತ್ತವೆ, ಕ್ರಮೇಣ ಮುಖಕ್ಕೊಂದು ಪ್ರಭೆಯನ್ನು ಕೊಡುತ್ತವೆ.
ನಾವು ಮಾಡಬೇಕಾಗಿರುವುದಿಷ್ಟೇ, ಕೆಲ ಯೋಗ ಆಸನಗಳನ್ನು ಪ್ರಯತ್ನಿಸಬೇಕು. ಮಯೂರಾಸನ, ಅಧೋಮುಖ ವೃಕ್ಷಾಸನ, ಸಲಂಭ ಶೀರ್ಷಾಸನ, ಸಲಂಭ ಸರ್ವಾಂಗಾಸನ ಮೊದಲಾದ ತಲೆ ಕೆಳಗು ಮಾಡಿ ಮಾಡುವಂಥ ಆಸನಗಳನ್ನು ಪ್ರಯತ್ನಿಸಬೇಕು.
ಆದರೆ, ಯಾವುದನ್ನೂ ಯೋಗಪಟುಗಳ ಸಹಾಯವಿಲ್ಲದೇ ಮಾಡಬಾರದು. ಅಷ್ಟೇ ಅಲ್ಲ, ಕೆಲವು ಮನೆಯಲ್ಲೇ ಮಾಡುವಂಥ ಸರಳ ಯೋಗಾಸನವನ್ನೂ ನೀವು ಪ್ರಯತ್ನಿಸಬಹುದು. ಅಂದರೆ ಮುಖವನ್ನು ಬಿಗಿಗೊಳಿಸಿಯೋ, ಮೇಲೆತ್ತಿಯೋ ಮಾಡುವಂಥ ಆಸನಗಳು. ಇದರಿಂದ ಮುಖದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ, ಅದು ಸಹಜವಾಗಿಯೇ ಮುಖಕ್ಕೊಂದು ಕಾಂತಿಯನ್ನು ತಂದುಕೊಡುತ್ತದೆ.