Advertisement

ರೈತರ ಸಮಸ್ಯೆಗೆ ಸ್ಪಂದಿಸದ ಕೇಂದ್ರ

02:04 PM Apr 16, 2020 | mahesh |

ಕುಣಿಗಲ್‌: ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ರೈತ ಬೆಳೆದ ಹಣ್ಣು, ತರಕಾರಿ, ಹೂ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಹಾಳಾಗುತ್ತಿದೆ, ಸಾವು ಬದುಕಿನೊಂದಿಗೆ ರೈತರ ಕಷ್ಟ
ಹೇಳ ತೀರದಾಗಿದೆ. ರೈತನ ಕೈ ಹಿಡಿಯುವಲ್ಲಿ ಸರ್ಕಾರ ವಿಫಲಗೊಂಡಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ಡಿಕೆಎಸ್‌ ಚಾರಿಟ್ರಬಲ್‌ ಟ್ರಸ್ಟ್‌ ವತಿಯಿಂದ ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದಲ್ಲಿ ಬಡವರಿಗೆ ಉಚಿತ ಅಕ್ಕಿ, ಹಣ್ಣು, ತರಕಾರಿ ವಿತರಿಸಿ ಮಾತನಾಡಿದರು. ಮಾರ್ಚಿ,ಏಪ್ರಿಲ್‌ ತಿಂಗಳಲ್ಲಿ ಹಿಂದುಗಳಿಗೆ ಮದುವೆ, ಹಬ್ಬ, ಆಚರಣೆ ಅದನ್ನು ನಂಬಿ ರೈತನ್ನು ಹಣ್ಣು, ತರ ಕಾರಿ, ಹೂ ಹೆಚ್ಚಾಗಿ ಬೆಳೆಯುತ್ತಾನೆ, ಕೊರೊನಾ ಹಿನ್ನೆಲೆ ಯಲ್ಲಿ ಬೆಳೆದ ಬೆಳೆಯನ್ನು ರೈತ ಮಾರಾಟ ಮಾಡಲು ಸಾಧ್ಯವಾಗದೇ ಆತನ ಬದುಕು ದುಸ್ಥಿತಿಯಲ್ಲಿದೆ. ಈ ನಿಟ್ಟಿನಲ್ಲಿ ರೈತನ ನೆರವಿಗೆ ಹಾಗೂ ಬಡವರ ಹೊಟ್ಟೆ ತುಂಬಿಸುವ ದಿಸೆಯಲ್ಲಿ ಬೆಂಗಳೂರು ಗ್ರಾಮಾಂತರ  ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರು ಬೆಳೆದವಾಣಿಜ್ಯ ಬೆಳೆಗಳನ್ನು ಖರೀದಿಸಿ ಬಡವರಿಗೆ ಉಚಿತ ವಾಗಿ ಅಕ್ಕಿ, ತರಕಾರಿ, ಹಣ್ಣು, ವಿತರಣೆ ಮಾಡಲಾಗುತ್ತಿದೆ. ಮಾಜಿ ಸಚಿವ ಡಿ.ನಾಗರಾಜಯ್ಯ, ತುರುವೇಕೆರೆ ಶಾಸಕ ಮಸಾಲೆ ಜಯರಾಮ್‌ ತರಕಾರಿ, ಹಣ್ಣು ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಂಕಷ್ಟದಲ್ಲಿ ಇರುವ ರೈತನ ಕಷ್ಟಕ್ಕೆ ಸ್ಪಂದಿಸುವುದ್ದಾಗಿ ಸಿಎಂ, ಸಚಿವರು ಘೋಷಣೆ ಮಾಡಿದ್ದರು. ಆದರೆ ಕೇವಲ ಘೋಷಣೆಯಾಗಿದೆ ವಿನಃ ಕಾರ್ಯ ರೂಪಕ್ಕೆ
ಬಂದಿಲ್ಲ, ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ತರಕಾರಿ, ಹಣ್ಣು ಖರೀದಿಸುವ ಗೋಜಿಗೆ ಹೋಗಿಲ್ಲ ಎಂದು ಅಸಮಾನಧಾನ ವ್ಯಕ್ತಪಡಿಸಿದರು.
ಶಾಸಕ ಡಾ.ಎಚ್‌.ಡಿ.ರಂಗನಾಥ್‌, ಪುರಸಭಾ ಸದಸ್ಯ ನಾಗೇಂದ್ರ, ಕಾಂಗ್ರೆಸ್‌ ಮುಂಖಡರಾದ ಬೇಗೂರು ನಾರಾಯಣ್‌, ಕೋಘಟ್ಟ ರಾಜಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next