Advertisement

UV Fusion: ಮುಗಿಯದ ಮೂವಿ ಕಥೆ

04:11 PM Feb 20, 2024 | Team Udayavani |

ಕೆಳವೊಂದು ವಿಷಯಗಳೇ ಹಾಗೆ. ನಮ್ಮ ಯೋಜನೆ ಒಂದಾಗಿದ್ದರೆ ವಿಧಿ ಲಿಖೀತ ಬೇರೆಯದೇ ಆಗಿರುತ್ತದೆ. ನಾವು ಎಷ್ಟೇ ಪ್ರಯತ್ನ ಪಟ್ಟರೂ ನಮಗೆ ಸಿಗುವುದೆಂದು ಮೊದಲೇ ಬರೆದಿದ್ದರೆ ಮಾತ್ರ ಸಿಗುವುದು. ಇಲ್ಲ ಎಂದಾದರೆ ಯಾವ ಹರಸಾಹಸ ಪಟ್ಟರೂ ಸಿಗದು.  ಒಟ್ಟಾರೆ ಎಲ್ಲವನ್ನೂ ಅನುಸರಿಕೊಂಡು ಹೋಗುವ ಮನಸ್ಥಿತಿ ನಮ್ಮದಾಗಿರಬೇಕು ಅಷ್ಟೇ.

Advertisement

ಇತ್ತೀಚೆಗೆ ನಾನು ಪಿಯುಸಿ ಓದಿದ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮೇಳನ ನಡೆಯಿತು. ನನ್ನನ್ನು ಸೇರಿದಂತೆ ಎಲ್ಲ ಹಳೆ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಎಲ್ಲರಿಗೂ ತಾವು ಓದಿದ ಕಾಲೇಜಿಗೆ ಮತ್ತೆ ಭೇಟಿ ನೀಡುವುದೆಂದರೆ ಒಂದು ರೀತಿಯ ಖುಷಿ ಇದ್ದೇ ಇರುತ್ತದೆ. ನನಗೂ ಹಾಗೆ ನನ್ನ ಎಲ್ಲ ಸ್ನೇಹಿತರು ಮತ್ತೆ ಭೇಟಿಯಾಗಲು ಸಿಗುವರೆಂಬ ಸಂತಸ. ಇದನ್ನು ಬಿಟ್ಟರೆ ಕಾಲೇಜಿನ ಊಟ ಸವಿಯಲು ಸಿಗುವುದೆಂಬ ಆಸೆ. ಇದಕ್ಕೆ ಕಾರಣ ನಮ್ಮ ಕಾಲೇಜಿನಲ್ಲಿ ಉಣಬಡಿಸುತ್ತಿದ್ದ ಊಟದ ರುಚಿ.

ಯಾರಾದರು ಒಂದು ಬಾರಿ ನಮ್ಮ ಕಾಲೇಜಿನಲ್ಲಿ ಊಟ ಸವಿದರೆ  ಓನ್‌ ಮೋರ್‌ ಓನ್‌ ಮೋರ್‌ ಎಂದು ಹೇಳುವುದಂತು ಖಂಡಿತ. ಕಾಲೇಜಿನ ದಿನಗಳಲ್ಲಿ ನಮ್ಮದು 7 ಮಂದಿಯ ಗರ್ಲ್ಸ್‌ ಗ್ಯಾಂಗ್‌ ಇತ್ತು. ನಮ್ಮದು 14ವರ್ಷಗಳ ಗೆಳೆತನ. ನಮ್ಮ ಈ ಗ್ಯಾಂಗ್‌ನ ಎಲ್ಲ ಗೆಳತಿಯರನ್ನು ಸುಮಾರು ಒಂದೂವರೆ ವರ್ಷದ ಬಳಿಕ ಭೇಟಿಯಾಗುವಂತೆ ಮಾಡಿದ್ದೇ ಈ ಹಳೆ ವಿದ್ಯಾರ್ಥಿಗಳ ಸಮ್ಮೇಳನ.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೆಳತಿಯರೊಂದಿಗೆ ಹರಟೆ ಹೊಡೆಯಬೇಕಾದರೆ   ನಮ್ಮ ತಂಡದ ದೊಡ್ಡ ಈಡೇರದ ಬಯಕೆಯೊಂದು ನೆನಪಿಗೆ ಬಂತು. ಅದೇನೆಂದರೆ ನಮ್ಮ ಗುಂಪಿನ ಎಲ್ಲರೂ ಸೇರಿ ಸಿನೆಮಾ ನೋಡಲು ಹೋಗುವ ಯೋಜನೆ. ಅದು 10ನೇ ತರಗತಿಯಲ್ಲಿ ನಮ್ಮ ಕೊನೇಯ ದಿನಗಳು. ಶಾಲೆ ಮುಗಿದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ  ಎಲ್ಲರೂ ಒಂದೊಂದು ಕಡೆ ಚದುರುವುದು ಸಹಜವಾಗಿರುವ ಕಾರಣಕ್ಕೆ 10ನೆಯ ತರಗತಿ ಅಂತಿಮ ಪರೀಕ್ಷೆ ಮುಗಿದ ಬಳಿಕ ಒಂದು ದಿನ ನಮ್ಮ ಗುಂಪಿನ ಎಲ್ಲರೂ ಜತೆಯಾಗಿ ನಮ್ಮ ಹೆಬ್ರಿಯಿಂದ ದೂರ ಹೋಗಿ ತಿರುಗಾಡಿ ಬರಬೇಕು ಎಂದು ಯೋಜಿಸಿದೆವು. ಆ ದಿನಗಳಲ್ಲಿ ಅದೇ ನಮ್ಮ ಅತೀ ದೊಡ್ಡ ಆಸೆಯಾಗಿತ್ತು.

ಮನಸ್ಸು ಒಂದು ಕಡೆ ಅಂತಿಮ ಪರೀಕ್ಷೆಗೆ ಓದುತ್ತಿದ್ದರೆ, ಮತ್ತೂಂದೆಡೆ ನಮ್ಮ ತಿರುಗಾಟಕ್ಕೆ ಎಲ್ಲಿಗೆ ಹೋಗುವುದು ಎಂಬ ಯೋಜನೆ ಸಿದ್ಧಪಡಿಸುತ್ತಿತ್ತು. ಕೊನೆಗೂ ನಮ್ಮ ಗುಂಪಿನ ಎಲ್ಲರ ಒಮ್ಮತದಂತೆ ಮಾರ್ಚ್‌ 23ಕ್ಕೆ (2020ರ) ಉಡುಪಿಯನ್ನು ಸುತ್ತಾಡುವುದು ಮತ್ತು ಸಿನೆಮಾ ನೋಡಲು ಹೋಗುವುದೆಂದು ತೀರ್ಮಾನ ಮಾಡಲಾಯಿತು. ಅದರಂತೆ ಮೊದಲೇ ಮನೆಯಲ್ಲಿ  ಅಪ್ಪ ಅಮ್ಮನನ್ನು ಬೇಡಿ ಒಪ್ಪಿಸಿ ಹೇಗೋ ಮಾಡಿ ಅನುಮತಿಯನ್ನು ಪಡೆದುಕೊಂಡೆವು.

Advertisement

ಸಣ್ಣದಿನಿಂದಲೇ ಸಿನೆಮಾ ನೋಡುವುದರೆಂದರೆ ನನಗೆ ಬಲು ಇಷ್ಟ.  ಇಲ್ಲಿಯವರೆಗೆ ಟಿ.ವಿ.ಯಲ್ಲಿ ಮಾತ್ರ ಸಿನೆಮಾ ನೋಡಿದ್ದ ನನಗೆ ಮೊದಲ ಬಾರಿಗೆ ಥೀಯೇಟರ್‌ನಲ್ಲಿ ಸಿನೆಮಾ ನೋಡಲಿದ್ದೇವೆ ಎಂಬ ಕೌತುಕ. ಅದೇ ಸಮಯದಲ್ಲಿ 83ರ ವಿಶ್ವಕಪ್‌ ಕುರಿತಾದ ಸಿನೆಮಾ ಬಿಡುಗಡೆಯಾಗಿದ್ದ ಹಿನ್ನೆಲೆ ಕ್ರಿಕೆಟ್‌ ಪ್ರೇಮಿಯೂ ಆಗಿದ್ದ ನನ್ನ ಖುಷಿಗೆ ಪಾರವೇ ಇರಲಿಲ್ಲ. ನಮ್ಮ ಗುಂಪು ಕೂಡ ಇದೇ ಸಿನೆಮಾವನ್ನು ನೋಡುವುದಾಗಿ ತಿರ್ಮಾನಿಸಿತ್ತು.

ನಮ್ಮ ಯೋಜನೆ ಸುಮಾರು ಒಂದು ತಿಂಗಳ ದೊಡ್ಡ ಪ್ರಕ್ರಿಯೆ. ಒಂದು ರೀತಿಯಲ್ಲಿ ನಮ್ಮ ಯೋಜನೆಯ ಕಥೆಯನ್ನೇ ಸಿನೆಮಾ ಮಾಡಬಹುದು. ಅಷ್ಟೊಂದು ಸ್ವಾರಸ್ಯಕರವಾಗಿತ್ತು ಆ ಒಂದು ಮಾಸ. ಆದರೆ  ನಮ್ಮ ಈ ಯೋಜನೆ ಮೇಲೆ ಯಾರ ಕಣ್ಣು ಬಿತ್ತೋ ಗೋತ್ತಿಲ್ಲ, ಶಾಲೆಯ ಕೊನೆ ದಿನ ಆದ ಮೇಲೆ ಉಡುಪಿ ತಿರುಗಾಡುವುದಕ್ಕೆ ಹೋಗುವುದು ಬಿಟ್ಟು ಹೊರಗಡೆ ಹೋಗಿ ನಮ್ಮ ಗುಂಪಿನವರೊಂದಿಗೆ  ಜತೆ ಸೇರಿ ಮಾತನಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಒಂದೊಗಿತ್ತು.

ನಮ್ಮ ಈ ಪುಟ್ಟ ಆಸೆಗೆ ಚೀನಾದಿಂದ ಬಂದ ವಿಲನ್‌ ಕೋವಿಡ್‌ ಮಣ್ಣೆರೆಚಿತ್ತು. ಸಪ್ತ ಸಾಗದಚೆ ಎಲ್ಲೂ ಸಿನೆಮಾದ ಮನುವಿಗಿಂತಲೂ ಹೆಚ್ಚಿನ ಬೇಜಾರಿನ  ಕ್ಲೈಮ್ಯಾಕ್ಸ್‌ ಕೊಟ್ಟು ಉಡುಪಿಗೆ ಹೋಗುವುದು ಬಿಟ್ಟು ಮನೆಯಿಂದ ಹೊರಗಡೆ ಬರದಂತೆ ಆಗಿತ್ತು. ಪ್ರಪಂಚಕ್ಕೆ ಲಾಕ್‌ಡೌನ್‌ ಘೋಷಣೆಯಾಗುವುದರೊಂದಿಗೆ ನಮ್ಮ ಸಿನೆಮಾ ನೋಡುವ ಕನಸು ಅಲ್ಲಿಗೆ ಮುದುಡಿ ಹೋಗಿತ್ತು.

ಅನನ್ಯಾ

ಎಂಜಿಎಂ

ಕಾಲೇ ಜು ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next