Advertisement
ಕ್ರೀಡಾ ಮತ್ತು ಯುವ ಜನಸಬಲೀಕರಣ, ಕಾಲೇಜು ಮತ್ತು ತಾಂತ್ರಿಕಶಿಕ್ಷಣ ಇಲಾಖೆ ವತಿಯಿಂದ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ವರ್ಚುಯಲ್ ವೇದಿಕೆ ಮೂಲಕ ಯೋಗ ನಡೆಯಲಿದೆ.
Related Articles
Advertisement
ಆನ್‌ಲೈನ್ ಮೂಲಕ ತರಬೇತಿ: ರಾಷ್ಟ್ರೋತ್ಥಾನಪರಿಷತ್ 7ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಪ್ರಯುಕ್ತ ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣಕ್ಕೆ ಯೋಗ ಎಂಬ ಅಭಿಯಾನ ಕೈಗೊಂಡಿದೆ. ಈಪ್ರಯುಕ್ತ ಜೂನ್ 15 ರಿಂದ ಸಂಜೆ 6ಕ್ಕೆ ಆನ್ ಲೈನ್‌ಉಪನ್ಯಾಸ ನಡೆಯುತ್ತಿದೆ. ಜೂನ್ 21 ರಂದುರಾಷ್ಟ್ರೋತ್ಥಾನ ಯೋಗ ಕೇಂದ್ರದಲ್ಲಿ ಯೋಗಾಭ್ಯಾಸ,ಯೋಗ ಪ್ರದರ್ಶನ ನಡೆಯಲಿದೆ. ಆನ್‌ಲೈನ್‌ಮೂಲಕ ತರಬೇತಿಯೂ ನಡೆಯುತ್ತಿದೆ.
ವಿಶ್ವೇಶ್ವರಯ್ಯ ಮ್ಯೂಸಿಯಂನಿಂದ ಯೋಗ: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ಹಾಗೂ ಈಶಾ ಫೌಂಡೇಷನ್‌ಸಹಯೋಗದೊಂದಿಗೆ ಜೂ.21 ರಂದು ಸಂಜೆ 4ಗಂಟೆಗೆ ಆನ್ ಲೈನ್ ನಲ್ಲಿ ಅಂತಾರಾಷ್ಟ್ರೀಯ ಯೋಗಕಾರ್ಯಕ್ರಮವನ್ನು ಆಯೋಜಿಸಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಉಸಿರಾಟದ ಆರೋಗ್ಯಕ್ಕಾಗಿ ಸಿಂಹ ಕ್ರಿಯಾ ಕುರಿತ ಯೋಗಹೇಳಿಕೊಡಲಗುವುದು. ಆಸಕ್ತರು ಹೆಸರುನೋಂದಾಯಿಸಿಕೊಂಡು ಭಾಗವಹಿಸಬಹುದು. ನೋಂದಣಿಗೆ https://tinyurl.com/ vitm&yogaಸಂಪರ್ಕಿಸಬಹುದು.
ಜಾಲತಾಣಗಳ ಮೂಲಕ ತರಬೇತಿ: ಬೆಂಗಳೂರುನಗರ ಮತ್ತು ಗ್ರಾಮಾಂತರ ಜಿÇÉಾ ಆಯುಷ್‌ಇಲಾಖೆ ವತಿಯಿಂದ ಮನೆಯಲ್ಲೆ ಇದ್ದು, ಯೋಗವನ್ನು ಆಚರಿಸಿ ಎಂಬ ಘೋಷವಾಕ್ಯ ದೊಂದಿಗೆ ಬೆಳಗ್ಗೆ7 ಗಂಟೆಯಿಂದ ಯೋಗಾಭ್ಯಾಸ ಕಾರ್ಯಕ್ರಮನಡೆಯಲಿದೆ. ಸಾರ್ವಜನಿಕರು ಇಲಾಖೆಯ ಜಾಲತಾಣ ಅಥವಾ ಯೋಗವನ್ನು ಫ್ರೋತ್ಸಾಹಿಸುವ ಸಂಘಸಂಸ್ಥೆಗಳ ಜಾಲತಾಣಗಳ ಮೂಲಕ ತರಬೇತಿಪಡೆದುಕೊಳ್ಳಬಹುದು.
ಶಾಲೆಗಳಲ್ಲೂ ಯೋಗ ದಿನಾಚರಣೆ: ಬೆಂಗಳೂರುವಿಶ್ವವಿದ್ಯಾಲಯ ಸಹಿತವಾಗಿ ಖಾಸಗಿ ಕಾಲೇಜು,ವಿಶ್ವವಿದ್ಯಾಲಯ, ಡೀಮx… ವಿಶ್ವವಿದ್ಯಾಲಯಗಳುಆನ್‌ಲೈನ್ ಮೂಲಕ ಯೋಗ ದಿನಾಚರಣೆ ನಡೆಸಲುಸಿದ್ಧತೆ ಮಾಡಿಕೊಂಡಿವೆ. ಹಾಗೆಯೇ ಶಾಲೆಗಳಲ್ಲೂ ಯೋಗ ದಿನಾಚರಣೆ ನಡೆಯಲಿದೆ. ಕುಂಬಳ ಗೋಡುಸಮೀಪದ ಶ್ರೀಸ್ವಾಮಿ ನಾರಾಯಣ್ ಗುರುಕುಲ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಅಂದು ಬೆಳಗ್ಗೆ ಆನ್‌ಲೈನ್ ಮೂಲಕ ಯೋಗ ನಡೆಯಲಿದೆ. ಬಿಜಿಎಸ್‌ಅಂತಾರಾಷ್ಟ್ರೀಯ ವಸತಿ ಶಾಲೆ, ಪೂರ್ಣ ಪ್ರಜ್ಞಾವಿದ್ಯಾ ಪೀಠದಲ್ಲೂ ಯೋಗ ನಡೆಯಲಿದೆ.