ಕೋಲಾರ: ಚೀನಾದಿಂದ ಹೊರ ಹೋಗುತ್ತಿರುವ ಕಂಪನಿಗಳನ್ನು ರಾಜ್ಯಕ್ಕೆ ಆಹ್ವಾನಿಸಲು ಸರ್ಕಾರದ ಮುಖ್ಯ ಕಾರ್ಯ ದರ್ಶಿಗಳ ಅಧ್ಯಕ್ಷತೆ ಯಲ್ಲಿ ಟಾಸ್ಕ್ಫೋರ್ಸ್ ರಚನೆ ಮಾಡಲಾಗಿ ದೆ ಎಂದು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ 19 ವೈರಸ್ ಸೋಂಕು ಹರಡುವಿಕೆ ವಿಷಯದಲ್ಲಿ ಇಡೀ ವಿಶ್ವವೇ ಚೀನಾ ವಿರುದ ಆಕ್ರೋಶಗೊಂಡಿದೆ ಎಂದು ಹೇಳಿದರು. ಅನೇಕ ಮಲ್ಟಿ ನ್ಯಾಷನಲ್ ಕಂಪನಿಗಳು ಅಲ್ಲಿಂದ ಹೊರ ಹೋಗುವ ಮಾತುಗಳನ್ನಾಡುತ್ತಿದ್ದು, ಇಂತಹ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯಲು ಈ ಟಾಸ್ಕ್ಫೋರ್ಸ್ ಸಮಿತಿ ಕೆಲಸ ಮಾಡುತ್ತಿದೆ.
ಈಗಾಗಲೇ ಹಲವು ಬಾರಿ ಸಭೆ ನಡೆಸಿರುವ ಈ ಸಮಿತಿ, ಅಲ್ಲಿಂದ ಬರುವ ಕೈಗಾರಿಕೆಗಳಿಗೆ ಆಹ್ವಾನ ನೀಡುವುದರ ಜತೆಗೆ ಅವರು ಕೇಳುವ ಸೌಲಭ್ಯ ಒದಗಿಸುವುದರ ಕುರಿತು ಸಮಾಲೋಚನೆ ನಡೆಸಲಿದೆ ಎಂದು ವಿವರಿಸಿದರು. ರಾಜ್ಯದಲ್ಲಿ ಕೈಗಾರಿಕೆ ಸ್ನೇಹಿ ವಾತಾವರಣ ಸೃಷ್ಟಿಸಲು ಕ್ರಮ ಕೈಗೊಂಡಿದ್ದು, ಈಗಾಗಲೇ ಕೈಗಾರಿಕಾ ನೀತಿ ಬದಲಾಗಿದೆ, ಬರುವ ಕೈಗಾರಿಕೆಗಳಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸುವುದರ ಜತೆಗೆ ಅವರಿಗೆ ಅನುಮತಿ ಪಡೆಯಲು ಇದ್ದ ನಿಯಮಗಳ ಸಡಿಲಿಕೆ ಮಾಡಿರುವುದಾಗಿ ತಿಳಿಸಿದರು.
ಕಾರಿಡಾರ್ ನಿರ್ಮಾಣ ಕೈಗಾರಿಕೆಗಳ ಹರಿವು: ಬೃಹತ್ ಕಾರಿಡಾರ್ ಕೋಲಾರ-ಬೆಂಗಳೂರಿಗೆ ಸಂಪರ್ಕಕಲ್ಪಿಸುವರೀತಿ ನಿರ್ಮಾಣಗೊಳ್ಳಲಿದ್ದು, ಇದು ಪೂರ್ಣಗೊಂಡರೆ ಜಿಲ್ಲೆಗೆ ಹೆಚ್ಚಿನ ಕೈಗಾರಿಕೆಗಳು ಬರಲಿವೆ ಎಂದ ಅವರು, ಈಗಾಗಲೇ ನರಸಾಪುರ, ವೇಮಗಲ್, ಮುಳ ಬಾಗಿಲು ಮತ್ತಿತರ ಭಾಗಗಳಲ್ಲಿ ಕೈಗಾರಿಕೆಗಳು ಆರಂಭಗೊಂಡಿದ್ದು, ಇನ್ನೂ ಬರಲಿವೆ ಎಂದು ಹೇಳಿದರು. 2ನೇ ಹಂತದಲ್ಲಿ ಕೋಲಾರ, ನರಸಾಪುರ, ಬಿಜಿಎಂಎಲ್ ಪ್ರದೇಶಕ್ಕೆ ಕೈಗಾರಿ ಕೆಗಳು ಬರಲು ಪ್ರಸ್ತಾವನೆ ಇದೆ, ಮುಳಬಾಗಿಲು ತಾಲೂಕಿನ ದೇವರಾಯಸಮುದ್ರಕ್ಕೂ ಕೈಗಾರಿಕೆಗಳು ಬರಲಿವೆ ಎಂದರು.
ಕೋವಿಡ್ 19ದಿಂದಾಗಿ ಆರ್ಥಿಕತೆ ಹಿನ್ನಡೆ: ಕೋವಿಡ್ 19 ಜಗತ್ತಿನಲ್ಲೇ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ, ಆದರೂ ಇಡೀ ದೇಶದಲ್ಲೇ ಕೈಗಾರಿಕೆ ಚಟುವಟಿಕೆ ಆರಂಭಗೊಂಡಿರುವುದು ರಾಜ್ಯದಲ್ಲೇ. ಕೋವಿಡ್ 19ದಿಂದ ಜೀವ ರಕ್ಷಣೆ ಜತೆಗೆ ಜೀವನ ನಡೆಸುವುದು ಹೇಗೆ ಎಂಬುದು ಮುಖ್ಯವಾಗಿದ್ದು, ಗಮನಿಸಿಯೇ ಲಾಕ್‌ಡೌನ್ ಹಂತಹಂತವಾಗಿ ಸಡಿಲಿಕೆ ಮಾಡಲಾಗಿದೆ ಎಂದರು. ಈ ವೇಳೆ ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ, ಕೈಗಾರಿಕೆ ಇಲಾಖೆ ಡಿಡಿ ರವಿಚಂದ್ರ ಇದ್ದರು