Advertisement

ಸಾರಿಗೆ ಕಾರ್ಮಿಕರ ಸಮಸ್ಯೆ ಇತ್ಯರ್ಥಕ್ಕೆ ಅನಿರ್ದಿಷ್ಟ ಮುಷ್ಕರ

06:02 PM Mar 18, 2022 | Shwetha M |

ವಿಜಯಪುರ: ಸಾರಿಗೆ ಸಂಸ್ಥೆಯ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸಾರಿಗೆ ಸಂಸ್ಥೆಗಳ ವಿಭಾಗೀಯ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲು ಕಾರ್ಮಿಕರ 7ನೇ ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

Advertisement

ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಮತ್ತು ವರ್ಕರ್ ಯೂನಿಯನ್‌ 7ನೇ ಸಮ್ಮೇಳನದಲ್ಲಿ ವಿವಿಧ ಘಟಕದ ಸಾವಿರಾರು ಕಾರ್ಮಿಕರು ಪಾಲ್ಗೊಂಡಿದ್ದ ಸಮಾವೇಶದಲ್ಲಿ ಸಾರಿಗೆ ಕಾರ್ಮಿಕರ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಸುದೀರ್ಘ‌ವಾಗಿ ಚರ್ಚಿಸಲಾಯಿತು.

ಚಾಲನಾ ಸಿಬ್ಬಂದಿಗೆ ನಿತ್ಯ ಸಮಸ್ಯೆಯಾಗಿರುವ ಬಾರ್‌ ಅನುಸೂಚಿಗಳ ಬಗ್ಗೆ ಚಾಲಕ, ನಿರ್ವಾಹಕರು ಸಂಪೂರ್ಣ ರೋಸಿ ಹೋಗಿದ್ದಾರೆ. ಬರುವ ದಿನಗಳಲ್ಲಿ ಬಾರ್‌ ಅನುಸೂಚಿಗಳ ರದ್ದತಿಗೆ, ಶಾಶ್ವತ ಪರಿಹಾರ ಕಂಡುಕೊಳ್ಳಲು 8 ಗಂಟೆ ಸೇವಾ ಅವಧಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ಸಮ್ಮೇಳನದಲ್ಲಿ ನಿರ್ಣಯಿಸಲಾಯಿತು.

ಕೆಎಸ್‌ಆರ್‌ಟಿಸಿ ಸ್ಟಾಫ್‌ ಮತ್ತು ವರ್ಕರ್ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ, ಸಿದ್ದಪ್ಪ ಪಾಲ್ಕಿ, ಆರ್‌.ಎಫ್‌. ಕವಳಿಕಾಯಿ, ಬಿ.ಎ. ಮುಕ್ಕೇರಿ, ಜೆ. ಕೊಟ್ರೇಶ, ಬಿ.ವಿ. ಕುಲಕರ್ಣಿ, ಆರ್‌.ಆರ್‌.ನದಾಫ್‌ ಸೇರಿದಂತೆ ಇತರರಿದ್ದರು.

ಹಳೇ ಬೇರು, ಹೊಸ ಚಿಗುರು ತತ್ವದಡಿ ಚರ್ಚಿಸಿ ವಿಭಾಗದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲ ಕಾರ್ಮಿಕ ಪದಾ ಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

Advertisement

ನೂತನ ಗೌರವಾಧ್ಯಕ್ಷರಾಗಿ ವಿ.ಆರ್‌. ಪಟ್ಟಣಶೆಟ್ಟಿ, ಯಮನಪ್ಪ ಚಲವಾದಿ, ಬಿ.ಎಂ. ತರದಾಳ ನೂತನ ವಿಭಾಗೀಯ ಅಧ್ಯಕ್ಷರಾಗಿ ಅರುಣಕುಮಾರ ಹಿರೇಮಠ, ಪ್ರಧಾನ ಕಾರ್ಯದರ್ಶಿಯಾಗಿ ಐ.ಐ. ಮುಶ್ರೀಫ್‌, ಕೋಶಾಧ್ಯಕ್ಷರಾಗಿ ಸಿ.ಎಸ್‌. ಕುಳೆಕುಮಟಗಿ, ಕಾರ್ಯಾಧ್ಯಕ್ಷರಾಗಿ ನಿಂಗಪ್ಪ ಕವಲಗಿ, ಎಸ್‌.ಡಿ. ಪಟ್ಟಣಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಲ್ಲು ಲಮಾಣಿ, ಎಸ್‌.ಎ. ಪಟೇಲ, ಭೀಮಪ್ಪ ಗುಳೇದ, ಗುರುನಾಥಗೌಡ ಬಿರಾದಾರ, ಸುಜ್ಞಾನಿ ಹಳ್ಳಿ, ಜಂಟಿ ಕಾರ್ಯದರ್ಶಿ ಎಂ.ವಿ. ಬಿರಾದಾರ, ಎಸ್‌.ಎಚ್‌. ಸೌದಾಗರ, ಜಯಶ್ರೀ ಹೂಗಾರ, ಸಿದ್ದಾರಾಮ ಕಾಂಬಳೆ, ಐ.ಎಸ್‌. ಸಲಗಾರ, ಸಂಘಟನಾ ಕಾರ್ಯದರ್ಶಿ ಆರ್‌.ಆರ್‌. ನದಾಫ, ಎಂ.ಎಸ್‌. ಹುಂಡೇಕಾರ, ವಿ.ಎಸ್‌. ಹೋಳಿ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶರಣಪ್ಪ ಅಥಣಿ, ಎಂ.ಎ. ಬಿಜಾಪುರ, ರವೀಂದ್ರ ಜುಮನಾಳ, ಎಸ್‌.ಬಿ. ಮೆಟಗಾರ, ಸುರೇಶ ಮೇತ್ರಿ, ನಬಿರಸೂಲ ಮುಲ್ಲಾ, ಎಸ್‌.ಎಚ್‌. ಸುರಪುರ, ಬಾಬಣ್ಣವರ, ಮಮದಾಪುರ, ಇಸ್ಮಾಯಿಲ್‌ ಕುಡಚಿ, ಶ್ರೀಕಾಂತ ಕೊಪ್ಪಳ, ರೇಣುಕಾ ತಳವಾರ, ಪಿ.ಎಸ್‌. ಹಲಸಂಗಿ, ಭಾರತಿ ಕೊಪ್ಪ, ಕವಿತಾ ಪಡಗಾನೂರ, ಚಂದ್ರಶೇಖರ ಭರಮಣ್ಣಗೋಳ, ಆರ್‌.ಎಂ. ಮಠ, ರಮೇಶ ಕುಂಬಾರ, ಎಂ.ಬಿ. ಗೌಡರ, ಕೆ.ಐ. ಅವಟಿ, ಪಿ.ಎ. ಮುಜಾವರ, ಎಂ.ಎಂ. ಮುಲ್ಲಾ ಅವರನ್ನು ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next