Advertisement

Jawan; ಆ್ಯಕ್ಷನ್ ಪ್ಯಾಕೇಜ್ ನಲ್ಲಿ ಭಾವನಾತ್ಮಕ ಪಯಣ…: ಬಂತು ಶಾರುಖ್ ‘ಜವಾನ್’ ಟ್ರೇಲರ್

01:09 PM Aug 31, 2023 | Team Udayavani |

“ಒಬ್ಬ ರಾಜನಿದ್ದ.. ಅವನು ಒಂದರ ಮೇಲೆ ಒಂದರಂತೆ ಯುದ್ಧಗಳಲ್ಲಿ ಸೋಲುತ್ತಿದ್ದ…” ಹೀಗೆ ಆರಂಭವಾಗುವ ಟ್ರೇಲರ್ ನಲ್ಲಿ ಮುಂದೆ ನಡೆಯುವುದು ಹೈವೋಲ್ಟೇಜ್ ಆ್ಯಕ್ಷನ್. ಪೊಲೀಸ್ ಇಲಾಖೆಗೆ ಸವಾಲೆಸುವ ಹೀರೋ, ಜಗತ್ತಿನ ನಾಲ್ಕನೇ ಅತಿ ದೊಡ್ಡ ವೆಪನ್ ಡೀಲರ್ ವಿಲನ್, ವಿವಿಧ ಅವತಾರಗಳಲ್ಲಿ ಶಾರುಖ್, ನಯನತಾರಾ- ದೀಪಿಕಾ ಪಡುಕೋಣೆ ಮತ್ತು ಅನಿರುದ್ಧ್ ಹಿನ್ನಲೆ ಸಂಗೀತ… ಇವು ಇಂದು ತೆರೆಕಂಡ ಬಹುನಿರೀಕ್ಷಿತ ‘ಜವಾನ್’ ಚಿತ್ರದ ಟ್ರೇಲರ್ ಹೈಲೈಟ್ಸ್.

Advertisement

ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಆ್ಯಕ್ಷನ್ ಕಟ್ ಹೇಳಿರುವ ಜವಾನ್ ಚಿತ್ರವು ಇದೇ ಸೆ.7ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಚಿತ್ರತಂಡವು ಇಂದು ಟ್ರೇಲರ್ ಬಿಡುಗಡೆ ಮಾಡಿದ್ದು, ಸಿನಿ ಪ್ರೇಮಿಗಳ ಕುತೂಹಲ ಹೆಚ್ಚಿಸಿದೆ.

‘ಜವಾನ್’ ಚಿತ್ರದಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್, ಸೌತ್ ನಟರಾದ ವಿಜಯ್ ಸೇತುಪತಿ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:Mangaluru: ತಮಿಳುನಾಡಿಗೆ ನೀರು… ರಾಜ್ಯ ಸರಕಾರದಿಂದ ರೈತರಿಗೆ ಅನ್ಯಾಯ: ಕಟೀಲ್ ಆರೋಪ

ಟ್ರೇಲರ್ ನಲ್ಲಿ ತೋರಿಸಿದಂತೆ ‘ಜವಾನ್’ ಒಂದು ಹೈ-ವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಆಗಿದ್ದು, ಆದರೆ ಇದರಲ್ಲಿ ಸಮಾಜದಲ್ಲಿನ ತಪ್ಪುಗಳನ್ನು ಸರಿಪಡಿಸಲು ಸಿದ್ಧವಾಗಿರುವ ವ್ಯಕ್ತಿಯೊಬ್ಬನ ಎಮೋಷನಲ್ ಜರ್ನಿಯು ಇದೆ.

Advertisement

ಚಿತ್ರವು ಸೆ.7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಪಠಾಣ್ ಚಿತ್ರದಲ್ಲಿ ಅದ್ಭುತ ಯಶಸ್ಸು ಕಂಡ ಶಾರುಖ್ ಇದೀಗ ‘ಜವಾನ್’ ಮೂಲಕ ಮತ್ತೊಂದು ಸೂಪರ್ ಹಿಟ್ ಚಿತ್ರ ನೀಡಲು ಮುಂದಾಗಿದ್ದಾರೆ.

ರೆಡ್ ಚಿಲ್ಲೀಸ್ ಎಂಟರ್ಟೈನ್ ಮೆಂಟ್ ಬ್ಯಾನರ್ ನಲ್ಲಿ ಗೌರಿ ಖಾನ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಅನಿರುಧ್ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next