Advertisement

ಕರಾವಳಿಗರನ್ನು ಸೆಳೆಯುತ್ತಿರುವ ಇ-ವಾಹನ : ಒಂದೇ ವರ್ಷ 450 ವಾಹನಗಳು ರಸ್ತೆಗೆ

10:14 AM Mar 02, 2021 | Team Udayavani |

ಮಂಗಳೂರು: ತೈಲ ಬೆಲೆ ಏರಿಕೆಯಿಂದ ಪಾರಾಗುವ ಮತ್ತು ಸಬ್ಸಿಡಿಯ ಲಾಭ ಪಡೆಯುವ ಉದ್ದೇಶದಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ವಾಹನಗಳತ್ತ ಕರಾವಳಿಗರು ದೃಷ್ಟಿ ಹರಿಸುತ್ತಿದ್ದಾರೆ. ಕರಾವಳಿಯಲ್ಲಿ ಒಂದೇ ವರ್ಷದಲ್ಲಿ 450 ಇ- ವಾಹನಗಳು ರಸ್ತೆಗಿಳಿದಿವೆ.

Advertisement

ಎಲೆಕ್ಟ್ರಿಕ್‌ ವಾಹನ ಖರೀದಿಗೆ ಕೇಂದ್ರ, ರಾಜ್ಯ ಸರಕಾರಗಳು ವಿಶೇಷ ಒತ್ತು ನೀಡುತ್ತಿದ್ದು, ಇ-ವಾಹನ ನೀತಿಯನ್ನು ಜಾರಿಗೆ ತಂದ ಮೊದಲಿಗನಾಗಿ ಕರ್ನಾಟಕ ಗುರುತಿಸಿಕೊಂಡಿದೆ.

2020ರ ಜ. 1ರಿಂದ 2021ರ ಫೆ. 24ರ ವರೆಗೆ ರಿಕ್ಷಾ, ಕಾರು, ದ್ವಿಚಕ್ರ ವಾಹನ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 284 ಮತ್ತು ಉಡುಪಿ ಜಿಲ್ಲೆಯಲ್ಲಿ 166 ಎಲೆಕ್ಟ್ರಿಕ್‌ ವಾಹನಗಳು ನೋಂದಣಿಯಾಗಿವೆ. ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಸುಮಾರು 90 ಸಾವಿರ ರೂ.ಗಳಿಗೆ ದೊರಕುತ್ತಿದ್ದು, ಒಮ್ಮೆ ಚಾರ್ಜ್‌ ಮಾಡಿದರೆ ಸುಮಾರು 100 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿವೆ.

ಆಗಬೇಕಿರುವುದೇನು?
ಎಲೆಕ್ಟ್ರಿಕ್‌ ವಾಹನಗಳ ಖರೀದಿ ಇನ್ನಷ್ಟು ಹೆಚ್ಚಬಹುದಾಗಿದ್ದರೂ ಕೆಲವು ಕೊರತೆಗಳು ಅಡ್ಡಿಯಾಗಿವೆ. ಸಾಮಾನ್ಯ ಆಟೋಗಳನ್ನು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಲು ಸುಮಾರು 1 ಲಕ್ಷ ರೂ. ವ್ಯಯವಾಗುತ್ತದೆ. ಬ್ಯಾಟರಿ ಬೆಲೆ ದುಬಾರಿ; ಹೀಗಾಗಿ ಸರಕಾರವು ದ್ವಿಚಕ್ರ ವಾಹನಗಳಿಗೆ ನೀಡುತ್ತಿರುವ 20ರಿಂದ 25 ಸಾವಿರ ರೂ. ಸಬ್ಸಿಡಿ ಹೆಚ್ಚಿಸಬೇಕಿದೆ. ಪೆಟ್ರೋಲ್‌ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್‌ ವಾಹನಗಳ ವೇಗ ಕಡಿಮೆ ಎನ್ನುತ್ತಾರೆ ಗ್ರಾಹಕರು.

ಪರಿವರ್ತನೆಯತ್ತ ಮನ
ಪೆಟ್ರೋಲ್‌ ಚಾಲಿತ ಸ್ಕೂಟರ್‌ಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಬಹುದಾಗಿದ್ದು, ಕೆಲವರು ಮುಂದೆ ಬರುತ್ತಿದ್ದಾರೆ ಎಂದು ನಗರದ ಎಲೆಕ್ಟ್ರಿಕ್‌ ಅಂಗಡಿ ಮುಖ್ಯಸ್ಥ ಸದಾನಂದ ಹೇಳಿದ್ದಾರೆ.

Advertisement

ಎರಡೇ ತಿಂಗಳು; 111 ನೋಂದಣಿ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಲೆಕ್ಟ್ರಿಕ್‌ ವಾಹನ ನೋಂದಣಿ ಹೆಚ್ಚಾಗುವ ಸಾಧ್ಯತೆ ಇದೆ. 2021ರ ಜ. 1ರಿಂದ ಫೆ. 24ರ ಅವಧಿಯಲ್ಲಿ ನೋಂದಣಿ ವಿವರ ಇಂತಿದೆ.

ಚಾರ್ಜಿಂಗ್‌ ಪಾಯಿಂಟ್‌
ರಾಜ್ಯ ಸರಕಾರವು ಇ-ಸಂಚಾರವನ್ನು ಉತ್ತೇಜಿಸುವ ಸಲುವಾಗಿ ಬೆಸ್ಕಾಂ ಮೂಲಕ ಬೆಂಗಳೂರಿನ ವಿವಿಧೆಡೆ ಡಿ.ಸಿ. ಫಾಸ್ಟ್‌ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಿದೆ. ಮಂಗಳೂರಿನಲ್ಲಿಯೂ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ಖಾಸಗಿ ಸಂಸ್ಥೆಯೊಂದರ ಕೇಂದ್ರ ಈಗಾಗಲೇ ಕಾರ್ಯಾಚರಿಸುತ್ತಿದೆ.

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next