Advertisement
ಪ್ರಭಾವದ ಹಾದಿ ತುಳಿಯದ ನಿಷ್ಠುರವಾದಿ: ಚಿ.ಮೂ., ಯಾವತ್ತೂ ಪ್ರಭಾವಗಳ ಹಾದಿ ತುಳಿದವರೇ ಅಲ್ಲ. ಒಮ್ಮೆ ಅವರ ಹತ್ತಿರದ ಸಂಬಂಧಿ, ವರ್ಗಾವಣೆ ಬಯಸಿ ಅವರಲ್ಲಿಗೆ ಬಂದಿದ್ದರು. “ನೀವು ಕನ್ನಡದ ಶಕ್ತಿಕೇಂದ್ರದ ಶಕ್ತಿ. ನಿಮ್ಮ ಗರ್ಜನೆಗೆ ಮಂತ್ರಿಮಂಡಲವೇ ನಡುಗುತ್ತೆ’ ಅಂತೆಲ್ಲ ಹೇಳಿ, ಹೇಗಾದರೂ ವರ್ಗಾವಣೆ ಕೆಲಸವನ್ನು ಮಾಡಿಕೊಡಿ ಎಂದು ಕೇಳಿಕೊಂಡರು. “ನಿನ್ನ ಮಾತು ಕೇಳಿ, ನಾನು ಇನ್ನೂ ಎಚ್ಚರಗೊಳ್ಳಬೇಕಾಗಿ ಬಂದಿದೆ. ಶಕ್ತಿಕೇಂದ್ರ ಇರುವುದು, ಕನ್ನಡಿಗರ ಹಿತಾಸಕ್ತಿ ಕಾಪಾಡಲು; ನನ್ನ ಸಂಬಂಧಿಗಳ ಟ್ರಾನ್ಸ್‌ಫರ್ ಮಾಡಿಸಲು ಅಲ್ಲ’ ಎಂದು ನಿಷ್ಠುರವಾಗಿ ನುಡಿದಿದ್ದರು.
Related Articles
Advertisement
ಕನ್ನಡ ಶಕ್ತಿ ಕೇಂದ್ರದ ಹುಟ್ಟು: ಜಾರಿಗೆ ಹೋರಾಟ ಶುರುವಾದಾಗ, ಅದೇ ವರ್ಷದ ಏಪ್ರಿಲ್ 13ರಂದು “ಸಾಹಿತಿ-ಕಲಾವಿದರ ಬಳಗ’ ಅಸ್ತಿತ್ವಕ್ಕೆ ಬಂತು. ಚಿಮೂ, ಕನ್ನಡ ಚಳವಳಿಯ ಹೊಸ ನಾಯಕರಾದರು. ಗೋಕಾಕ್ ಚಳವಳಿಯಲ್ಲಿ ಮೂರ್ತಿಗಳು ತೋರಿದ ಕ್ರಿಯಾಶೀಲತೆ, ಹಿರಿಯರನ್ನು, ಕಿರಿಯರನ್ನು ಉತ್ಸಾಹಿಸಿ ತಮ್ಮೊಂದಿಗೆ ಕೊಂಡೊಯ್ದ ರೀತಿ, ಮೌನ ಮೆರವಣಿಗೆ, ಧರಣಿ, ನಿರಶನ ಸಮಾವೇಶಗಳನ್ನು ಏರ್ಪಡಿಸಿದ ವಿಧಾನಗಳು ಕನ್ನಡ ಚಳವಳಿಗೆ ಹೊಸ ರೂಪ, ವರ್ಚಸ್ಸು, ಗೌರವಗಳನ್ನು ತಂದಿತ್ತವು. 1988ರಲ್ಲಿ “ಕನ್ನಡ ಶಕ್ತಿಕೇಂದ್ರ’ವನ್ನು ಅಸ್ತಿತ್ವಕ್ಕೆ ತಂದರು. ಇದು, ಕರ್ನಾಟಕದಾದ್ಯಂತ ವ್ಯಾಪಿಸಿದ ಸಂಘಟನೆ. ಜಿಲ್ಲಾಮಟ್ಟಗಳಲ್ಲಿ ಇದರ ಶಾಖೆಗಳು ಆರಂಭಗೊಂಡವು. ಕನ್ನಡದ ಕಾರಣಕ್ಕಾಗಿಯೇ ರಾಜ್ಯಾದ್ಯಂತ ವ್ಯಾಪಿಸಿದ ಏಕೈಕ ಸಂಘಟನೆ ಇದೊಂದೇ.
ಓರ್ವ ಶ್ರೇಷ್ಠ ಸಂಶೋಧಕ, ಇತಿಹಾಸಕಾರನನ್ನು ಕಳೆದು ಕೊಂಡಂತಾಗಿದೆ. ವಿಧಾನ ಪರಿಷತ್ ಸದಸ್ಯರಾಗಿ ಎಂದು ಹೇಳಿದ್ದೆ. ಆದರೆ, ಅದನ್ನು ಒಪ್ಪಿಕೊಂಡಿಲ್ಲ. ಅವರ ಅಗಲಿಕೆ ನೋವು ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ.-ಯಡಿಯೂರಪ್ಪ ಮುಖ್ಯಮಂತ್ರಿ ಚಿದಾನಂದ ಮೂರ್ತಿ ಅವರ ಅಗಲಿಕೆ ನೋವುಂಟು ಮಾಡಿದೆ. ಅವರು ನಾಡು -ನುಡಿಗಾಗಿ ಶ್ರಮಿಸಿದ್ದರು. ಕನ್ನಡ ಸಾಹಿತ್ಯ ಲೋಕ ಅಮೂಲ್ಯವಾದ ರತ್ನ ವೊಂದನ್ನು ಕಳೆದುಕೊಂಡಂತಾಗಿದೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ ಟಿಪ್ಪು ಸುಲ್ತಾನ್ ರಾಜ್ಯಕ್ಕೆ ಮಾಡಿದ್ದ ಅನ್ಯಾಯ ಖಂಡಿಸಿದ ಏಕೈಕ ವ್ಯಕ್ತಿ ಚಿದಾನಂದ ಮೂರ್ತಿ. ಚಿಕ್ಕ ಶರೀರ ಇದ್ದರೂ ದೊಡ್ಡ ಸಾಧನೆ ಮಾಡಿದ್ದಾರೆ. ಸಂಶೋಧಕರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ರಾಮಾ ಜೋಯಿಸ್, ಮಾಜಿ ರಾಜ್ಯಪಾಲ ಚಿದಾನಂದಮೂರ್ತಿ ಅವರ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಜೀವನದಲ್ಲಿ ತುಂಬ ಶಿಸ್ತಿನ ವ್ಯಕ್ತಿಯಾಗಿದ್ದರು. ಅವರ ಕುಟುಂಬ ವರ್ಗದ ವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಡಾ.ಚಿದಾನಂದಮೂರ್ತಿ ಅವರ ನಿಧನದಿಂದ ನಾಡು ಅಪರೂಪದ ವಿದ್ವಾಂಸರನ್ನು ಕಳೆದು ಕೊಂಡಿದೆ. ಮೃತರ ಕುಟುಂಬ ಸದಸ್ಯರಿಗೆ ಅವರ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಚಿದಾನಂದ ಮೂರ್ತಿ ನಿಧನರಾಗಿರುವುದು ದುಃಖದ ಸಂಗತಿ. ನಾಡು, ನುಡಿಗೆ ಅನನ್ಯ ಸೇವೆ ಸಲ್ಲಿಸಿ ದ್ದಾರೆ. ಶೂನ್ಯ ಸಂಪಾದನೆ, ಭಾಷಾ ವಿಜ್ಞಾನದ ಮೂಲ ತತ್ವಗಳು, ಸಂಶೋಧನಾ ತರಂಗ ಸೇರಿ ಮೌಲಿಕ ಕೃತಿಗಳನ್ನು ನೀಡಿದ್ದಾರೆ.
-ಡಾ.ಮನುಬಳಿಗಾರ್, ಕಸಾಪ ಅಧ್ಯಕ್ಷ ರಾಷ್ಟ್ರೀಯ ವಿಚಾರಧಾರೆಯ ಚಿಮೂ ಅವರು ಅಗಲಿರುವುದು ದುಃಖದ ಸಂಗತಿ. ನಾಡು, ನುಡಿ, ಸಂಸ್ಕೃತಿಗಳ ವಿಚಾರವಾಗಿ ಸಂಶೋಧನಾ ಬರಹಗಳನ್ನು ಬರೆದು ಸತ್ಯವನ್ನು ನಿರ್ಭಯವಾಗಿ ತಿಳಿಸಿದವರು.
-ವಿ.ನಾಗರಾಜ, ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರ ಕ್ಷೇತ್ರೀಯ ಸಂಘಚಾಲಕ