Advertisement

ಅಮೃತ ಸಿಟಿಗೆ ಕೂಡಿಬರದ ಗಳಿಗೆ

03:32 PM Mar 24, 2021 | Team Udayavani |

ಕೊಪ್ಪಳ: ಕೇಂದ್ರ ಸರ್ಕಾರ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಪ್ರದೇಶಗಳನ್ನು ಹೈಟೆಕ್‌ಸಿಟಿಯನ್ನಾಗಿಸಿ, ಜನರಿಗೆ ಸಕಲ ಸೌಲಭ್ಯಕೊಡಬೇಕೆಂಬ ಉದ್ದೇಶದಿಂದ ಅಮೃತ ಸಿಟಿ ಯೋಜನೆ ಜಾರಿ ಮಾಡಿದೆ.

Advertisement

ಕೊಪ್ಪಳ ನಗರವನ್ನು ಈ ಯೋಜನೆಗೆ ಪರಿಗಣಿಸುವಂತೆ ಜಿಲ್ಲಾಡಳಿತ ಎರಡು ಬಾರಿಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದರೂ ಕೊಪ್ಪಳ ಇನ್ನೂ ಅರ್ಹತೆಯನ್ನೇ ಪಡೆದಿಲ್ಲ. ಅಮೃತ ಸಿಟಿಗೆಅಮೃತಗಳಿಗೆಯೇ ಕೂಡಿ ಬಂದಿಲ್ಲ. ಕೇಂದ್ರ ಸರ್ಕಾರವು ಈ ಹಿಂದೆ ದೇಶದ 100ನಗರಗಳನ್ನು ಅಮೃತ ಸಿಟಿ ಯೋಜನೆಯಡಿಆಯ್ಕೆ ಮಾಡಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರವೂಆಯ್ಕೆಯಾಗಿದ್ದು, ಗಂಗಾವತಿಯಲ್ಲಿ ಈಗಾಗಲೇಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ. ಇದನ್ನುಗಮನಿಸಿ ಸಂಸದ ಸಂಗಣ್ಣ ಕರಡಿ ಅವರುಜಿಲ್ಲಾ ಕೇಂದ್ರ ಕೊಪ್ಪಳ ನಗರವನ್ನು ಅಮೃತಸಿಟಿ ಯೋಜನೆ ವ್ಯಾಪ್ತಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಈ ಬೆನ್ನಲ್ಲೇ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ರಾಜ್ಯ ಪೌರಾಡಳಿತನಿರ್ದೇಶನಾಲಯದ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಕೊಪ್ಪಳ ನಗರವುಒಂದು ಲಕ್ಷ ಜನಸಂಖ್ಯೆ ಹೊಂದಿಲ್ಲ ಎಂಬ ಕಾರಣ ನೀಡಿ ಈ ಪ್ರಸ್ತಾವನೆ ತಿರಸ್ಕಾರ ಮಾಡಿತು.

ಈ ಬೆನ್ನಲ್ಲೇ ಕೊಪ್ಪಳ ಜಿಲ್ಲಾಡಳಿತ ಮತ್ತೂಮ್ಮೆ ಪ್ರಸ್ತಾವನೆ ಸಿದ್ಧಪಡಿಸಿ ಜಿಲ್ಲಾ ಕೇಂದ್ರದಲ್ಲಿ 2011ರಜನಗಣತಿ ಪ್ರಕಾರ 79,370 ಜನಸಂಖ್ಯೆಯಿದ್ದು,ಜನಗಣತಿ ಹಲವು ವರ್ಷಗಳು ಗತಿಸಿವೆ. ಈ ಅವಧಿಯಲ್ಲಿ ಜನಸಂಖ್ಯೆ ಪ್ರಮಾಣವು ಹೆಚ್ಚಾಗಿದೆ. ಇದನ್ನು ಆಧರಿಸಿ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾಕೇಂದ್ರ, ಕೊಪ್ಪಳ ನಗರವನ್ನು ಅಮೃತ ಸಿಟಿಯೋಜನೆಯಡಿ ಪರಿಗಣಿಸುವಂತೆ ಸರ್ಕಾರಕ್ಕೆ2ನೇ ಪ್ರಸ್ತಾವನೆಯನ್ನೂ ಸಲ್ಲಿಸಿ ಎರಡುವರ್ಷಗಳಾಗಿವೆ. ಆದರೆ ಈವರೆಗೂ ಯೋಜನೆಕುರಿತು ಸರ್ಕಾರಗಳು ಪ್ರಸ್ತಾಪ ಮಾಡುತ್ತಲೇ ಇಲ್ಲ.

ಪ್ರಸ್ತಾವನೆಯಲ್ಲಿ 100 ಕೋಟಿ ಯೋಜನೆ: ಅಮೃತ ಸಿಟಿ ಯೋಜನೆಯಡಿ ನಗರ ಪ್ರದೇಶದಅಭಿವೃದ್ಧಿಗೆ 100 ಕೋಟಿ ರೂ. ಯೋಜನೆರೂಪಿಸಿದ್ದು,ಇದರಲ್ಲಿ ನಗರದ ಒಳ ಚರಂಡಿ ಕಾಮಗಾರಿ,ಕುಡಿಯುವ ನೀರು, ಉದ್ಯಾನವನ ಅಭಿವೃದ್ಧಿ, ರಾಜಕಾಲುವೆ ನಿರ್ಮಾಣ, ಕೋಟೆ ನಿರ್ಮಾಣಸೇರಿದಂತೆ ಇತರೆ ಕಾಮಗಾರಿಯು ನಡೆಯಲಿವೆ.ಆದರೆ ಸರ್ಕಾರವು ಇದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿಲ್ಲ.ಸರ್ಕಾರವು 1 ಲಕ್ಷ ಜನಸಂಖ್ಯೆಯನ್ನು ನಗರಪ್ರದೇಶ ಹೊಂದಿರಬೇಕು ಎನ್ನುವಂತ ನಿಯಮ ತಂದಿಟ್ಟಿದ್ದರಿಂದಲೇ ಕೊಪ್ಪಳ ಜಿಲ್ಲಾ ಕೇಂದ್ರವು ಈ ಯೋಜನೆಗೆ ಅರ್ಹತೆ ಪಡೆಯುತ್ತಿಲ್ಲ. ಆದರೆಗಂಗಾವತಿ ನಗರವು ಅಮೃತ ಸಿಟಿಯಡಿ ಅರ್ಹತೆಪಡೆದು ಈಗಾಗಲೇ ಅಭಿವೃದ್ಧಿ ಕಾಮಗಾರಿ ಪ್ರಗತಿ ಹಂತದಲ್ಲಿ ನಡೆಯುತ್ತಿವೆ.

ಕೂಡಿಬರದ ಅಮೃತಗಳಿಗೆ: ಕಲ್ಯಾಣ ಕರ್ನಾಟಕಭಾಗದಲ್ಲಿ ಕೊಪ್ಪಳ ಜಿಲ್ಲೆ ಈಗಷ್ಟೇ ಅಭಿವೃದ್ಧಿಯತ್ತಆಮೆ ನಡಿಗೆ ಆರಂಭಿಸಿದೆ. ಆದರೆ ಸರ್ಕಾರವುಅನುದಾನದ ಮೇಲೆ ಎಲ್ಲ ಅಭಿವೃದ್ಧಿ ಕಾರ್ಯವೂ ನಡೆಯಲಿದೆ. ಅಮೃತ ಸಿಟಿಯಂತಹ ಯೋಜನೆಗಳು ಜಿಲ್ಲೆಗೆ ಬಂದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಸರ್ಕಾರವು ಜಿಲ್ಲಾಡಳಿತ ಪ್ರಸ್ತಾವನೆಗೆ ಸಮ್ಮತಿಸಿಲ್ಲ. ತಿರಸ್ಕಾರವನ್ನೂ ಮಾಡಿಲ್ಲ.ತಮ್ಮ ಬಳಿಯೇ ಇರಿಸಿಕೊಂಡು ಕುಳಿತಿದೆ. ಜಿಲ್ಲೆಯ ಜನರು ಮಾತ್ರ ಅಮೃತ ಸಿಟಿಯಡಿ ಕೊಪ್ಪಳವೂಅಭಿವೃದ್ಧಿ ಕಾಣಲಿದೆ ಎಂದು ಜಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ.

Advertisement

ಕೊಪ್ಪಳ ನಗರವನ್ನು ಅಮೃತ ಸಿಟಿ ಯೋಜನೆ ವ್ಯಾಪ್ತಿಗೆ ತರುವಂತೆಜಿಲ್ಲೆಯಿಂದ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಸರ್ಕಾರವು ಈಗಾಗಲೇ ಮೊದಲ ಹಂತದಲ್ಲಿ ಘೋಷಣೆ ಮಾಡಿರುವ ನಗರಗಳನ್ನು ಅಭಿವೃದ್ಧಿ ಮಾಡುತ್ತಿದೆ. ಮುಂದಿನ ದಿನದಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ಹಾಗೂ ಸಿಂಧನೂರು ನಗರವನ್ನು ಸರ್ಕಾರ ಪರಿಗಣಿಸುವ ನಿರೀಕ್ಷೆ ಇದೆ. –ಸಂಗಣ್ಣ ಕರಡಿ, ಕೊಪ್ಪಳ ಸಂಸದ

 

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next