Advertisement

ಅಮ್ಟಾಡಿ ಕೆಂಪುಗುಡ್ಡೆ: ಗುಡ್ಡದಲ್ಲಿ ಬಿರುಕು :ಸಂಪರ್ಕ ಕಡಿತ ಭೀತಿ ; ಮುನ್ನೆಚ್ಚರಿಕೆ

11:35 PM Jul 16, 2023 | Team Udayavani |

ಬಂಟ್ವಾಳ: ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಸಮೀಪ ಗುಡ್ಡ ವೊಂದು ಬಿರುಕು ಬಿಟ್ಟು ಸ್ಥಳೀಯರನ್ನು ಆಂತಕಕ್ಕೀಡು ಮಾಡಿದೆ. ಬಂಟ್ವಾಳದ ಅಜೆಕಲ- ಕೆಂಪುಗುಡ್ಡೆ -ಕಲ್ಪನೆ ರಸ್ತೆಯೂ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ಅಮಾrಡಿ ಗ್ರಾಮ ಪಂಚಾಯತ್‌ ವತಿಯಿಂದ ರಸ್ತೆಯ ಎರಡೂ ಬದಿಗಳಲ್ಲೂ ಸೂಚನ ಫಲಕವನ್ನು ಅಳವಡಿಸಿ ಪ್ರಯಾಣಿ ಕರನ್ನು ಎಚ್ಚರಿಸಲಾಗುತ್ತಿದೆ.

Advertisement

ಅಮ್ಟಾಡಿಗ್ರಾಮದ ಶ್ರೀ ಜಗದಂಬಿಕಾ ಭಜನ ಮಂದಿರದ ಸಮೀಪದ ಗುಡ್ಡ ಬಿರುಕು ಬಿಟ್ಟಿದ್ದು, ರಸ್ತೆಯಲ್ಲಿ ನಿಂತು ನೋಡಿದರೆ ಸುಮಾರು 500 ಮೀ. ಉದ್ದಕ್ಕೆ ಬಿರುಕು ಕಂಡುಬರುತ್ತದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯದ ಜತೆಗೆ ರಸ್ತೆಯ ಕೆಳ ಭಾಗದ ಇಳಿಜಾರು ಪ್ರದೇಶದಲ್ಲಿ ಇರುವ ಮನೆಗಳು, ಕೃಷಿಭೂಮಿಯೂ ನಾಶವಾಗುವ ಆತಂಕ ಎದುರಾಗಿದೆ.

ಹಲವು ವರ್ಷಗಳ ಹಿಂದೆ ಗುಡ್ಡದ ಮೇಲ್ಭಾಗದಲ್ಲಿ ಸಮತಟ್ಟು ಮಾಡಿದ ಪರಿಣಾಮ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ನಿರಂತರ ಮಳೆಯ ಪರಿಣಾಮ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಪ್ರಸ್ತುತ ಮಳೆಯ ತೀವ್ರತೆ ಕಡಿಮೆಯಾಗಿರುವುದರಿಂದ ಕುಸಿತದ ಭೀತಿ ಕಡಿಮೆಯಿದೆ.

ಲೋಕೋಪಯೋಗಿ ಇಲಾಖೆಯ ಮೂಲಕ ಸುಮಾರು 4 ಕೋ.ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೊಂಡಿದ್ದು, ಒಂದು ವೇಳೆ ಗುಡ್ಡ ಕುಸಿದರೆ ರಸ್ತೆಗೆ ಹಾನಿಯಾಗಲಿದೆ. ಬಂಟ್ವಾಳದಿಂದ ಕಲ್ಪನೆ ಭಾಗಕ್ಕೆ ಸಂಚರಿಸಲು ಇದು ಸಮೀಪದ ರಸ್ತೆಯಾಗಿದ್ದು, ಸಂಪರ್ಕ ಕಡಿತಗೊಂಡಲ್ಲಿ, ಗ್ರಾಮಸ್ಥರು ಸುತ್ತು ಬಳಸುವ ಸ್ಥಿತಿ ನಿರ್ಮಾಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next