Advertisement
ಅಮೃತಸರ ರೈಲು ದುರಂತದಲ್ಲಿ ಮೃತಪಟ್ಟಿರುವ 60 ಮಂದಿ ದುರ್ದೈವಿಗಳಲ್ಲಿ “ರಾವಣ ಪಾತ್ರಧಾರಿ’ ದಲ್ ಬೀರ್ ಸಿಂಗ್ ಕೂಡ ಒಬ್ಬರಾಗಿದ್ದಾರೆ.
Related Articles
Advertisement
ಈ ನಡುವೆ ಭಾರತೀಯ ರೈಲ್ವೆ ಅಮೃತಸರ ಅವಘಡವನ್ನು ತಾನು ರೈಲು ಅಪಘಾತಗಳ ಪಟ್ಟಿಗೆ ಸೇರಿಸುವುದಿಲ್ಲ. ಇದೊಂದು ರೈಲು ಅಪಘಾತ ಅಲ್ಲ, ಹಾಗಾಗಿ ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಹೇಳಿದೆ.
ಕೇಂದ್ರ ಸಹಾಯಕ ರೈಲ್ವೆ ಸಚಿವ ಮನೋಜ್ ಸಿನ್ಹಾ ಅವರು “ಘಟನೆಯ ಬಗ್ಗೆ ಯಾವುದೇ ತನಿಖೆಯನ್ನು ಕೈಗೊಳ್ಳುವ ಅಗತ್ಯ ರೈಲ್ವೇ ಗೆ ಇಲ್ಲ; ರೈಲಿನ ಚಾಲಕರಿಗೆ ಎಲ್ಲಿ ರೈಲನ್ನು ನಿಧಾನವಾಗಿ ಚಲಾಯಿಸಬೇಕು ಎಂಬ ಬಗ್ಗೆ ಸ್ಪಷ್ಟವಾದ ಸೂಚನೆಗಳಿದ್ದವು; ಅವಘಡ ನಡೆದಲ್ಲಿ ತಿರುವುಗಳಿದ್ದವು; ಹಾಗಾಗಿ ರೈಲಿನ ಚಾಲಕರಿಗೆ ಜನರು ಹಳಿಯಲ್ಲಿ ನಿಂತಿರುವುದು ಗೋಚರಿಸಿರಲಿಲ್ಲ. ಹಾಗಾಗಿ ನಾವು ಯಾವುದರ ಬಗ್ಗೆ ತನಿಖೆ ನಡೆಸಬೇಕು ? ರೈಲುಗಳಿರುವುದೇ ವೇಗವಾಗಿ ಸಾಗಲು’ ಎಂದು ಹೇಳಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ದಲ್ ಬೀರ್ ಕುಟುಂಬಕ್ಕೆ ರೈಲ್ವೆಯಿಂದ ಯಾವುದೇ ಪರಿಹಾರ ಸಿಗುವ ಸಾಧ್ಯತೆಗಳು ಶೂನ್ಯವಾಗಿದ್ದು ಇನ್ನು ರಾಜ್ಯ ಸರಕಾರದಿಂದ ಮಾತ್ರವೇ ಉದ್ಯೋಗ ರೂಪದಲ್ಲಿ ಪರಿಹಾರ ಸಿಗಬೇಕಾಗಿದೆ.