ಚಂಡೀಗಢ: ಮೂಲಭೂತವಾದಿ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಅವರು ಒಂದು ತಿಂಗಳ ಕಾಲ ಬೇಟೆಯ ನಂತರ ಇಂದು ಬೆಳಗ್ಗೆ ಪಂಜಾಬ್ ನ ಮೊಗಾದಲ್ಲಿ ಶರಣಾಗಿದ್ದಾರೆ.
ಖಲಿಸ್ತಾನಿ-ಪಾಕಿಸ್ತಾನದ ಏಜೆಂಟ್ ಎಂದು ಸರ್ಕಾರ ಗುರುತಿಸುವ ಅಮೃತಪಾಲ್ ಸಿಂಗ್ ಶರಣಾಗುವ ಮೊದಲು ಮೊಗಾ ಜಿಲ್ಲೆಯ ರೋಡ್ ಗ್ರಾಮದ ಗುರುದ್ವಾರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಅವರನ್ನು ಗುರುದ್ವಾರದಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಗಾ ಖಲಿಸ್ತಾನಿ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಅವರ ಗ್ರಾಮವಾಗಿದೆ. ಅಮೃತಪಾಲ್ ಸಿಂಗ್ ಅವರ ಭಿಂದ್ರನ್ವಾಲೆ ಅನುಯಾಯಿ ಎಂದು ಹೇಳಿಕೊಳ್ಳುತ್ತಾರೆ. ಅಲ್ಲದೆ ಅಮೃತಪಾಲ್ ಸಿಂಗ್ ಅವರನ್ನು “ಭಿಂದ್ರನ್‌ವಾಲೆ 2.0” ಎಂದು ಕರೆಯುತ್ತಾರೆ.
Related Articles
ಇದನ್ನೂ ಓದಿ:ಅರ್ಶದೀಪ್ ಬೆಂಕಿ ಚೆಂಡಿಗೆ ಸ್ಟಂಪ್ ಪೀಸ್ ಪೀಸ್: ಒಂದು LED stump ಬೆಲೆ ಎಷ್ಟು ಲಕ್ಷ ಗೊತ್ತಾ?
ಇಂದು ಅಮೃತಪಾಲ್ ಸಿಂಗ್ ಅವರನ್ನು ಎಲ್ಲಾ ಕಡೆಯಿಂದ ಪೊಲೀಸರು ಸುತ್ತುವರಿದು ಶರಣಾಗುವಂತೆ ಒತ್ತಾಯಿಸಲಾಯಿತು. “ಪೊಲೀಸರು ಪವಿತ್ರತೆಯನ್ನು ಕಾಪಾಡಿಕೊಳ್ಳಲು ಗುರುದ್ವಾರವನ್ನು ಪ್ರವೇಶಿಸಲಿಲ್ಲ. ನಾವು ಸಮವಸ್ತ್ರವನ್ನು ಧರಿಸಿ ಪ್ರವೇಶಿಸಲು ಸಾಧ್ಯವಾಗಲಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ.
ಅವರನ್ನು ಈಗ ಅಸ್ಸಾಂನ ದಿಬ್ರುಗಢ ಜೈಲಿಗೆ ಕರೆದೊಯ್ಯಲಾಗುತ್ತಿದೆ, ಅಲ್ಲಿ ಅವರ ಎಂಟು ಸಹಾಯಕರನ್ನು ಈಗಾಗಲೇ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಬಂಧಿಸಿಡಲಾಗಿದೆ.