ಬೆಂಗಳೂರು: ಎನ್‌ಐಆರ್‌ಎಫ್ 2023ರ ಪ್ರಕಾರ ದೇಶದ ಪ್ರಮುಖ 10 ವಿವಿಗಳಲ್ಲಿ ಒಂದಾಗಿರುವ ಅಮೃತ ವಿಶ್ವ ವಿದ್ಯಾಪೀಠಂ, ಅಮೃತ ಸಂಶೋ ಧನೆ ಮತ್ತು ಅನ್ವೇಷಣೆ ಸಿಂಪೋ ಸಿಯಂ ಪರಿಣತಿ (ಅರೈಸ್) 2024 ಕಾರ್ಯಕ್ರಮ ಜರಗಿತು.
ನಾಲ್ಕು ದಿನಗಳ ಈ ಕಾರ್ಯಕ್ರಮವು ಒಂದು ವಿಶಿಷ್ಟ ವೇದಿಕೆಯಾಗಿ ಮಾರ್ಪಟ್ಟಿದ್ದು, ವಿಶ್ವಾದ್ಯಂತದ ಸಮಸ್ಯೆಗಳಿಗೆ ಕ್ರಿಯಾಶೀಲ ಪರಿಹಾರವನ್ನು ಒದಗಿಸಲಾಯಿತು. ಏಕ ಆರೋಗ್ಯ, ಪರಿಸರ ವ್ಯವಸ್ಥೆ ಮರುಸ್ಥಾಪನೆ, ಮಾಹಿತಿ ಜ್ಞಾನ, ವಿಪತ್ತು ಸಹಿಷ್ಣುತೆ, ಮೌಲ್ಯಾಧಾರಿತ ಶಿಕ್ಷಣ ಮತ್ತು ಭಾರತೀಯ ಅಧ್ಯಯನ ಸಹಿತ ಅನೇಕ ವಿಷಯಗಳ ಕುರಿತು ಪರಿಣಿತರು ಚರ್ಚೆ ನಡೆಸಿದರು.
ಕೇಂದ್ರ ಸರಕಾರದ ಎಸ್‌ಇಆರ್‌ಬಿ ಡಾ| ಅಖಿಲೇಶ್ ಗುಪ್ತಾ, ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಆಳವಾದ ಜ್ಞಾನ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ವಿದ್ಯಾ ಪೀಠದ ಉಪಕುಲಪತಿ ಮಾತಾ ಅಮೃತಾನಂದ ಮಯಿ ದೇವಿ ಮಾತನಾಡಿ, ಜೀವನ ನಡೆಸುವುದಕ್ಕೆ ನಮಗೆ ಉದ್ಯೋಗ, ಹಣ, ಮನೆ, ಕಾರು ಮತ್ತು ಇತರ ಅನುಕೂಲಗಳು ಬೇಕಾಗುತ್ತವೆ. ಆದರೆ ಇವೆಲ್ಲ ನಮ್ಮ ಜೀವನವನ್ನು ಪೂರ್ಣಗೊಳಿಸುವುದಿಲ್ಲ. ಪ್ರೀತಿ, ಪ್ರಬುದ್ಧತೆ ಇರಬೇಕು. ಶಿಕ್ಷಣವು ನಮ್ಮೊಳಗೂ ಮತ್ತು ಹೊರಗೂ ಇರಬೇಕು. ಹೊರಜಗತ್ತನ್ನು ನೋಡುವಂತೆ ನಮ್ಮೊಳಗಿನ ವಿಶ್ವ ವನ್ನು ನೋಡಲು ನಮಗೆ ಕುತೂ ಹಲ ಇರಬೇಕು ಎಂದರು.
ಜಾಗತಿಕವಾಗಿ ಶೇ.2ರಷ್ಟು ವಿಜ್ಞಾನಿ ಗಳಲ್ಲಿ ಒಳಗೊಂಡಿರುವ ಅಮೃತ ವಿಶ್ವ ವಿದ್ಯಾಪೀಠಂ 24 ಸಂಶೋಧಕರನ್ನು ಗೌರವಿಸಿತು. ಇದೇ ವೇಳೆ ಅಮೃತ ಇನ್ನೋವೇಶನ್ ಅಂಡ್ ರಿಸರ್ಚ್ ಅವಾರ್ಡ್ಸ್ ಕಾರ್ಯಕ್ರಮ ನಡೆಸಿ, ಇವರನ್ನೂ ಸಮ್ಮಾನಿಸಲಾಯಿತು.
ಅಮೆರಿಕದ ಬಫಲೋ ವಿವಿಯ ಎಸ್‌ಯುಎನ್‌ಐ ಪ್ರೊ| ಡಾ| ವೇಣು ಗೋವಿಂದರಾಜು, ಕೇಂದ್ರ ಸರಕಾರದ ರಕ್ಷಣೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಗಳ ವಿಭಾಗದ ಪ್ರಧಾನ ನಿರ್ದೇಶಕ ಡಾ| ಉಪೇಂದ್ರ ಕುಮಾರ್ ಸಿಂಗ್, ಅಮೃತ ವಿವಿಯ ಪ್ರೋವೋಸ್ಟ್ ಡಾ| ಮನೀಶಾ ವಿ. ರಮೇಶ್ ಮತ್ತಿತರರಿದ್ದರು.