Advertisement
ಪ್ರಧಾನ ಮಂತ್ರಿ ಮಿಷನ್ ಅಮೃತ್ ಸರೋವರ್ ಕಾರ್ಯಕ್ರಮದಡಿ ಕೆರೆಗಳ ಆಯ್ಕೆಗೆ ಜಿ.ಪಂ. ಸಿಇಒ ಅಧ್ಯಕ್ಷತೆ ಯಲ್ಲಿ ಅಪರ ಜಿಲ್ಲಾಧಿಕಾರಿ ಮತ್ತು ವಿವಿಧ ಇಲಾಖೆಯ ನಾಲ್ವರು ಅಧಿಕಾರಿಗಳು, ಪಂಚಾಯತ್ ಪಿಡಿಒ ಸದಸ್ಯರಾಗಿರುವ ಹಾಗೂ ಪಂಚಾಯತ್‌ರಾಜ್ ಎಂಜಿನಿ ಯರಿಂಗ್ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಸದಸ್ಯ ಕಾರ್ಯದರ್ಶಿಯಾಗಿರುವಂತೆ ಸಮಿತಿ ರಚನೆ ಮಾಡಲಾಗಿದೆ. ನೋಡಲ್ ಅಧಿಕಾರಿ ಯನ್ನು ನೇಮಿಸಲಾಗಿದೆ.
ಬಂಟ್ವಾಳ ತಾಲೂಕಿನ ಮೇರೆಮಜಲು, ಕಡೇಶ್ವಾಲ್ಯ, ಬೆಳ್ತಂಗಡಿಯ ಕುವೆಟ್ಟು, ಅಳದಂಗಡಿ, ಅಂಡಿಂಜೆ, ಕಡಬದ ಕುಟ್ರಾಪ್ಪಾಡಿ, ಸುಬ್ರಹ್ಮಣ್ಯ, ಮಂಗಳೂರಿನ ಗಂಜಿಮಠ, ತಲಪಾಡಿ, ಮೂಡುಬಿದಿರೆಯ ವಾಲ್ಪಾಡಿ, ಪುತ್ತಿಗೆ, ಪುತ್ತೂರಿನ ಆರ್ಯಾಪು, ಉಪ್ಪಿನಂಗಡಿ, ಸುಳ್ಯದ ಬಾಳಿಲ, ಮುರುಳ್ಯ ಗ್ರಾ.ಪಂ. ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ನಡೆಯುತ್ತಿದೆ. ಬಂಟ್ವಾಳ ತಾಲೂಕಿನ ಇರ್ವತ್ತೂರು, ಸಜಿಪಪಡು, ಕುರ್ನಾಡು, ಕಾವಳಮುಡೂರು, ಕರಿಯಂಗಳ, ಪುದು, ಬಾಳೆಪುಣಿ, ಕೊಳ್ನಾಡು, ಬಡಗಬೆಳ್ಳೂರು, ನರಿಕೊಂಬು, ಬಾಳ್ತಿಲ, ಕಳ್ಳಿಗೆ, ಬೆಳ್ತಂಗಡಿಯ ವೇಣೂರು, ನಾರಾವಿ, ನೆರಿಯ, ಚಾರ್ಮಾಡಿ, ಕೊಕ್ಕಡ, ಪಡಂಗಡಿ, ಉಜಿರೆ, ನಾವೂರು, ಸುಲ್ಕೇರಿ, ಮಡಂತ್ಯಾರು, ಹೊಸಂಗಡಿ, ಕಡಬ ತಾಲೂಕಿನ ಬಾರ್ಯ, ನೆಲ್ಯಾಡಿ, ರಾಮಕುಂಜ, ಪೆರಾಬೆ, ಐತೂರು, ಸವಣೂರು, ಸುಬ್ರಹ್ಮಣ್ಯ ಮಂಗಳೂರು ತಾಲೂಕಿನ ಗುರುಪುರ, ಬಳ್ಕುಂಜೆ, ಕಂದಾವರ, ಪಡುಪಣಂಬೂರು, ಮುನ್ನೂರು, ಕೊಣಾಜೆ, ಅತಿಕಾರಿಬೆಟ್ಟು, ಮೂಡುಬಿದಿರೆ ತಾಲೂಕಿನ ತೆಂಕಮಿಜಾರು, ದರೆಗುಡ್ಡೆ, ಪುತ್ತೂರಿನ ಅರಿಯಡ್ಕ, ಬಡಗನ್ನೂರು, ಬೆಟ್ಟಂಪಾಡಿ, ಕೆದಂಬಾಡಿ, ಬನ್ನೂರು, ಹಿರೇಬಂಡಾಡಿ, ಉಪ್ಪಿನಂಗಡಿ, ಬೆಟ್ಟಂಪಾಡಿ, ಸುಳ್ಯದ ಹರಿಹರಪಳ್ಳತ್ತಡ್ಕ, ಬೆಳ್ಳಾರೆ, ದೇವಚಳ್ಳ, ಉಬರಡ್ಕ ಮಿತ್ತೂರು, ಕೊಲ್ಲಮೊಗ್ರು ಗ್ರಾ.ಪಂ. ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ನಡೆಯಲಿದೆ.
Related Articles
ಬ್ರಹ್ಮಾವರ ತಾಲೂಕಿನ ಹೊಸೂರು, ಹನೆಹಳ್ಳಿ, ಕಾವಡಿ, ನಾಲ್ಕೂರಿನಲ್ಲಿ 2, ಕೆಂಜೂರು, ಪೆಜಮಂಗೂರಿನಲ್ಲಿ 3, ಯಡ್ತಾಡಿ, ಹೇರಾಡಿ, ಗಿಳಿಯಾರಿನಲ್ಲಿ 2, ಕೋಟತಟ್ಟು, ಬನ್ನಾಡಿ, ನಂಚಾರು, ಕುದಿ-82, ಕಡೂರು, ಹಿಲಿಯಾಣ, ನಡೂರು, ಬೈಂದೂರು ತಾಲೂಕಿನ ಮರವಂತೆ, ಕೆರ್ಗಾಲು, ಕಿರಿಮಂಜೇಶ್ವರದಲ್ಲಿ 2, ಕಂಬದಕೋಣೆ, ಕಾಲ್ತೊಡು, ಶಿರೂರಿನಲ್ಲಿ 2, ಎಳಜಿತ್‌ನಲ್ಲಿ 2, ಗೋಳಿಹೊಳೆ, ಹೆಬ್ರಿಯ ಮುದ್ರಾಡಿ, ಕೆರೆಬೆಟ್ಟು, ಚಾರ, ಬೆಳಂಜೆ, ಶಿವಪುರ, ಕಾಪುವಿನ ಶಿರ್ವ, ಪಾದೆಬೆಟ್ಟು ಮಜೂರು, ಸಾಂತೂರು, ಎಲ್ಲೂರು, ಏಣಗುಡ್ಡೆ, ಬೆಳ್ಳೆ, ಕೋಟೆ, ಕುತ್ಯಾರು, ಕಾರ್ಕಳದ ಮಿಯ್ನಾರಿನಲ್ಲಿ 2, ಇನ್ನಾ, ಕಣಜಾರು, ಎರ್ಲಪಾಡಿ, ದುರ್ಗಾ, ನಿಟ್ಟೆ, ಬೋಳ, ಕುಕ್ಕುಂದೂರು, ಕೌಡೂರು, ಸಾಣೂರು, ಮರ್ಣೆ, ಮುಲ್ಲಡಕ, ಕಾಂತೇಶ್ವರ. ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ 3, ಕೆರಾಡಿಯಲ್ಲಿ 2, ಕಟ್‌ಬೇಲೂರು, ತಲ್ಲೂರಿನಲ್ಲಿ 2, ಬೀಜಾಡಿಯಲ್ಲಿ 5, ಕಾವ್ರಾಡಿ, ಚಿತ್ತೂರು, ನೂಜಾಡಿ, ಹಟ್ಟಿಯಂಗಡಿ, ಬೇಳೂರು, ಹಕೂìರು, ಆಜ್ರಿಯಲ್ಲಿ 2, ಕೊಡ್ಲಾಡಿ, ಕೋಣಿ, ಬೆಳ್ಳಾಲ, ವಂಡ್ಸೆಯಲ್ಲಿ 2, ಮೊಳಹಳ್ಳಿ, ತೆಕ್ಕಟ್ಟೆ, ಕೆದೂರು, ಹೊಸಾಡು, ಸಿದ್ದಾಪುರ, ಇಡೂರು ಕುಂಜ್ಞಾಡಿ, ಉಡುಪಿಯ ಕುಕ್ಕೇಹಳ್ಳಿ, ಪೆರ್ಡೂರು ಬೊಮ್ಮರ ಬೆಟ್ಟು, ಬೈರಂಪಳ್ಳಿ, ಉದ್ಯಾವರ, ತೋನ್ಸೆ ಪೂರ್ವದ ಗ್ರಾಮದ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
Advertisement
ಅಮೃತ್ ಸರೋವರ್ ಯೋಜನೆಯಡಿ ಅಭಿವೃದ್ಧಿಪಡಿಸಲು ಕೆರೆಗಳನ್ನು ಗುರುತಿಸಲಾಗಿದೆ. ಆಗಸ್ಟ್ 15ರೊಳಗೆ 15 ಕೆರೆಗಳನ್ನು ಅಭಿವೃದ್ಧಿಪಡಿಸಿ ಆ ಕೆರೆಗಳ ಪಕ್ಕದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುವುದರೊಂದಿಗೆ ಬಾಕಿ ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು.– ಪ್ರಸನ್ನ ಎಚ್. / ಡಾ| ಕುಮಾರ್,
ಉಡುಪಿ ಮತ್ತು ದ.ಕ. ಜಿ.ಪಂ. ಸಿಇಒಗಳು