Advertisement
ನಗರಸಭೆ ಕಚೇರಿಯಲ್ಲಿ ಅಧ್ಯಕ್ಷೆ ಶ್ವೇತಾ ಶಬರೀಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆಯೇ ಬೇಸರ ವ್ಯಕ್ತಪಡಿಸಿದ ಸದಸ್ಯರು, ಸಭೆಗೆ ಗೌರವ ನೀಡದ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
Related Articles
Advertisement
ನಗರದ ಟೇಕಲ್ ರಸ್ತೆಯಲ್ಲಿರುವ ಮಕ್ಕಳ ಉದ್ಯಾನ ವನಕ್ಕೆ ಅಂಬೇಡ್ಕರ್ ಹೆಸರಿಡುವಂತೆ ತೀರ್ಮಾನಿಸ ಲಾಗಿದೆ. ನಾಮಫಲಕ ಹಾಕಿ ಕಾರ್ಯಕ್ರಮ ಉದ್ಘಾಟ ನೆಗೆ ಯಾವುದೇ ಅಡೆತಡೆ ಇಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಧ್ವನಿಗೂಡಿಸಿದ ಸದಸ್ಯ ರಾಕೇಶ್, ಕಿತ್ತಾಟಗಳಿಲ್ಲದೆ ವ್ಯವಸ್ಥಿತವಾಗಿ ಕಾಯಕ್ರಮ ವನ್ನು ಉದ್ಯಾನವನದಲ್ಲೇ ನಡೆಸಬೇಕು, ಮಹಾನ್ ವ್ಯಕ್ತಿಗೆ ಅವಮಾನವಾಗ ಬಾರದು ಎಂದರು.
ಸದಸ್ಯ ಪ್ರಸಾದ್‌ಬಾಬು ಮಾತನಾಡಿ, ನಗರಸಭೆಯ ಹಿಂದಿನ ರಾಜ್ಯ ಸರಕಾರವು ನಗರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ 5 ಕೋಟಿರೂ ಅನುದಾನ ಬಿಡುಗಡೆ ಗೊಳಿಸಿತ್ತು. ಆದರೆ, ಈಗಿನ ಬಿಜೆಪಿ ಸರಕಾರ ವಾಪಸ್ಸು ಪಡೆದುಕೊಂಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಜತೆಗೆ ನಗರಸಭೆ ಸಿಬ್ಬಂದಿ ಮಾಡಬೇಕಿರುವ ಶೇ.75 ಕೆಲಸವನ್ನು ಸದಸ್ಯರು ಮಾಡುತ್ತಿದ್ದಾರೆ. ಸಮಸ್ಯೆ ಬಂದ ಕೂಡಲೇ ಪರಿಹಾರ ಮಾಡುವ ಜತೆಗೆ ಸಾರ್ವಜನಿಕರಿಗೆ ಗೌರವ ನೀಡುವ ಕೆಲಸಕ್ಕೆ ಸಿಬ್ಬಂದಿ ಮುಂದಾಗಬೇಕು ಎಂದು ಸೂಚಿಸಿದರು.
ನಗರಸಭೆ ವ್ಯಾಪ್ತಿಯಲ್ಲಿರುವ ಜಾಹಿತಾತು ಫಲಕಗಳ ಸಂಪೂರ್ಣ ಮಾಹಿತಿ ಪಡೆದು ಅವುಗಳಿಗೆ ಶುಲ್ಕ ನಿಗದಿ ಮಾಡಬೇಕು, ನಗರಸಭೆ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು ಎಂದೂ ಒತ್ತಾಯಿಸಿದರು.
ಪಂಪ್‌ಹೌಸ್ ಗದ್ದಲ: ಸದಸ್ಯ ರಾಕೇಶ್ ಮಾತನಾಡಿ, ನಗರಸಭೆ ವ್ಯಾಪ್ತಿಗೆ ಬರುವ ಕೋಲಾರಮ್ಮ ಪಂಪ್‌ಹೌಸ್‌ನಲ್ಲಿ ಯಂತ್ರೋಪಕರಣಗಳ ಬಿಡಿ ಭಾಗಗಳ ವಿತರಣೆ ಯಲ್ಲಿ ಹಗಲು ದರೋಡೆ ನಡೆಯುತ್ತಿದ್ದು, ಪಂಪು ಮೋಟರ್‌ಗಳು, ಪೈಪುಗಳು, ಕೇಬಲ್‌ಗಳು ಎಷ್ಟಿವೆ ಎನ್ನುವ ಮಾಹಿತಿಯೇ ಇಲ್ಲ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿ.ಎಂ. ಮುಬಾರಕ್, ಜಿಲ್ಲಾದ್ಯಂತ ಕೆರೆಗಳು ತುಂಬಿದ್ದರೂ ನಗರಕ್ಕೆ ನೀರು ಕೊಡುವಂಥ ವಿಪುಲ ಅವಕಾಶ ಗಳಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಂಪ್ ಹೌಸ್‌ಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಸಾರ್ವಜನಿಕರಿಗೆ ನೀರು ಕೊಡುವುದರಲ್ಲಿಯೂ ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.