ಹೊಸದಿಲ್ಲಿ: ದೇಶಿ ಕ್ರಿಕೆಟ್‌ನ ಬ್ಯಾಟಿಂಗ್ ಹೀರೋ ಆಗಿದ್ದ ಮುಂಬಯಿಯ ಅಮೋಲ್ ಮುಜುಂದಾರ್ ಭಾರತೀಯ ವನಿತಾ ಕ್ರಿಕೆಟ್ ತಂಡದ ಕೋಚ್ ಆಗುವುದು ಬಹುತೇಕ ಖಚಿತಪಟ್ಟಿದೆ. ಕ್ರಿಕೆಟ್ ಸಲಹಾ ಸಮಿತಿಗೆ (ಸಿಎಸಿ) ಇವರು ನೀಡಿದ ಸಂದರ್ಶನ ಸದಸ್ಯರನ್ನು ಪ್ರಭಾವಿತರನ್ನಾಗಿಸಿದ್ದೇ ಇದಕ್ಕೆ ಕಾರಣ.
ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷಣಾ ನಾೖಕ್ ಅವರನ್ನೊಳಗೊಂಡ ಸಿಎಸಿ, ಅಮೋಲ್ ಮುಜುಮದ್ದಾರ್ ಅವರನ್ನು ಸುಮಾರು 90 ನಿಮಿಷಗಳ ಕಾಲ ಸಂದರ್ಶಿಸಿತು. ಅವರು ಭಾರತದ ವನಿತಾ ಕ್ರಿಕೆಟ್ ಸುಧಾರಣೆಗಾಗಿ ಪ್ರಸ್ತುತಪಡಿಸಿದ ಅನೇಕ ಅಂಶಗಳು ಸಿಎಸಿ ಸದಸ್ಯರನ್ನು ತೃಪ್ತಿಪಡಿಸಿತು ಎಂದು ಬಿಸಿಸಿಐ ಮೂಲ ತಿಳಿಸಿದೆ.
ಭಾರತ ತಂಡ ಇನ್ನು ಕೆಲವೇ ದಿನದಲ್ಲಿ ಬಾಂಗ್ಲಾದೇಶಕ್ಕೆ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿದೆ. ಅಷ್ಟರಲ್ಲಿ ಕೋಚ್ ಆಯ್ಕೆ ನಡೆಯಲಿದೆ. ಕಳೆದ ಡಿಸೆಂಬರ್‌ನಲ್ಲಿ ರಮೇಶ್ ಪೊವಾರ್ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಿದ ಬಳಿಕ ಭಾರತ ವನಿತಾ ತಂಡ ಯಾವುದೇ ಪ್ರಧಾನ ತರಬೇತುದಾರನನ್ನು ಹೊಂದಿರಲಿಲ್ಲ.
ಅಮೋಲ್ ಮುಜುಮದ್ದಾರ್ ಇದಕ್ಕೂ ಮುನ್ನ ಮುಂಬಯಿ ರಣಜಿ ತಂಡದ ಪ್ರಧಾನ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದರು. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೂ ತರಬೇತಿ ನೀಡಿದ್ದರು.
ಡರ್‌ಹ್ಯಾಮ್ ಕೌಂಟಿಯ ಮಾಜಿ ಕೋಚ್ ಜಾನ್ ಲೂಯಿಸ್, ಬರೋಡದ ಪ್ರಥಮ ದರ್ಜೆ ಕ್ರಿಕೆಟಿಗನಾಗಿದ್ದ ತುಷಾರ್ ಅರೋಠೆ ಕೂಡ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಮೌಖಿಕ ಸಂದರ್ಶನಕ್ಕೆ ಹಾಜರಾದದ್ದು ಅಮೋಲ್ ಮುಜುಮಾªರ್ ಮಾತ್ರ.