Advertisement

ಸೇವೆ ನೆಪದಿಂದ ಕಾನೂನು ಉಲ್ಲಂಘನೆ ಬೇಡ

12:51 AM Sep 30, 2020 | mahesh |

ಹೊಸದಿಲ್ಲಿ: ಮಾನವೀಯತೆಯ ಸೇವೆಯ ನೆಪದಲ್ಲಿ ಕಾನೂನು ಉಲ್ಲಂಘನೆ ಸ್ವೀಕಾರಾರ್ಹವಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ. ಕೇಂದ್ರ ಸರಕಾರ ಬ್ಯಾಂಕ್‌ ಖಾತೆಗಳನ್ನು ಸ್ತಂಭನಗೊಳಿಸಿ ವಿನಾ ಕಾರಣ ಕಿರುಕುಳ ಕೊಡುತ್ತಿರುವುದರಿಂದಲೇ ಭಾರತದಲ್ಲಿನ ಚಟುವಟಿಕೆ ಸ್ಥಗಿತಗೊಳಿಸುತ್ತಿರುವುದಾಗಿ ಆಮ್ನೆಸ್ಟಿ ಇಂಡಿಯಾ ಪ್ರಕಟಿಸಿದ ಬಳಿಕ ಈ ಸ್ಪಷ್ಟನೆ ಹೊರಬಿದ್ದಿದೆ.

Advertisement

ಹೀಗಾಗಿ, ಸಂಘಟನೆ ಸರಕಾರದ ವಿರುದ್ಧ ಮಾಡುತ್ತಿರುವ ಆರೋಪ ದುರದೃಷ್ಟಕರ. ಈ ಮೂಲಕ ಅವರ ವಿರುದ್ಧದ ಆರೋಪಗಳ ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತಿಸುತ್ತಿರುವ ಅಂಶ ಕಾನೂನಿಗೆ ವಿರುದ್ಧವಾದದ್ದು ಎಂದು ಸುದೀರ್ಘ‌ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇಪ್ಪತ್ತು ವರ್ಷಗಳಲ್ಲಿ ಒಂದು ಬಾರಿ ಮಾತ್ರ ಸಂಸ್ಥೆಗೆ ವಿದೇಶದಿಂದ ದೇಣಿಗೆ ಪಡೆದುಕೊಳ್ಳಲು ಅನುಮತಿ ನೀಡಲಾಗಿತ್ತು. ನಂತರದ ವರ್ಷಗಳಲ್ಲಿ ಆ ಸಂಸ್ಥೆಗೆ ದೇಣಿಗೆ ಪಡೆಯಲು ಅರ್ಹತೆ ಇಲ್ಲದೇ ಇದ್ದ ಕಾರಣಕ್ಕಾಗಿಯೇ ಹಿಂದಿನ ಸರಕಾರಗಳು ಅನುಮತಿ ನೀಡ‌ಲಿಲ್ಲ. ಹೀಗಾಗಿಯೇ ವಿದೇಶಿ ಹೂಡಿಕೆ ನಿಯಮಗಳ ಅನ್ವಯ ಆ್ಯಮ್ನೆಸ್ಟಿ ಯು.ಕೆ. ಭಾರತದಲ್ಲಿ ನೋಂದಣಿಯಾಗಿರುವ ನಾಲ್ಕು ಸಂಸ್ಥೆ ಗಳಿಗೆ ಕೋಟ್ಯಂತರ ರೂ. ಮೊತ್ತ ಪಡೆದು ಕೊಳ್ಳುವಂತೆ ಮಾಡಿದೆ ಎಂದು ಕೇಂದ್ರ ಆರೋಪಿಸಿದೆ. ಇಂಥ ಅಕ್ರಮ ಗಮನಕ್ಕೆ ಬಂದ ಬಳಿಕ ಸರಕಾರಗಳು ಪರವಾನಿಗೆ ನೀಡಲೇ ಇಲ್ಲ ಎಂದಿದೆ.

ಸರಕಾರದಿಂದ ಕಿರುಕುಳ
ಇದಕ್ಕೂ ಮೊದಲು ಕೇಂದ್ರ ಸರಕಾರ ವಿನಾ ಕಾರಣ ಕಿರುಕುಳ ಕೊಡುತ್ತಿ ರುವ ಕಾರಣದಿಂದಲೇ ಭಾರತದಲ್ಲಿನ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತಿ ರುವುದಾಗಿ ಆಮ್ನೆಸ್ಟಿ ಇಂಟರ್‌ನ್ಯಾಶನಲ್‌ ಇಂಡಿಯಾ ಹೇಳಿಕೆ ಯಲ್ಲಿ ತಿಳಿಸಿತ್ತು. ಸಂಘಟನೆಯ ಬ್ಯಾಂಕ್‌ ಖಾತೆಗ ಳನ್ನು ಸ್ತಂಭನಗೊ ಳಿಸಿದ ವಿಚಾರ ಸೆ.10ರಂದೇ ಗಮಕ್ಕೆ ಬಂದಿತು. 2018ರಲ್ಲಿ ಬೆಂಗಳೂರಿ ನಲ್ಲಿ ಕೇಂದ್ರ ಕಚೇರಿಹೊಂದಿರುವ ಸಂಘಟನೆಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next