Advertisement
ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನ 2.20ಕ್ಕೆ ಹೆಲಿ ಕಾಪ್ಟರ್ ಮೂಲಕ ಆದಿಉಡುಪಿಗೆ ಆಗಮಿಸಿ, ಅಲ್ಲಿಂದ ಕಟಪಾಡಿಯ ಗ್ರೀನ್‌ವ್ಯಾಲಿ ಮೈದಾನಕ್ಕೆ ರಸ್ತೆ ಮೂಲಕ ತೆರಳುವರು. ಅಲ್ಲಿ ಕಾಪು ಮತ್ತು ಉಡುಪಿ ಕ್ಷೇತ್ರದ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಮಾವೇಶದಲ್ಲಿ ಭಾಷಣ ಮಾಡುವರು. ಬಳಿಕ ಮತ್ತೆ ಆದಿಉಡುಪಿಗೆ ಬಂದು ಹೆಲಿ ಕಾಪ್ಟರ್ ಮೂಲಕ ಬೈಂದೂರಿಗೆ ಹೊರಡುವರು. ಬೈಂದೂರು ಕ್ಷೇತ್ರದ ಸಿದ್ದಾಪುರದಲ್ಲಿ ಸಂಜೆ 4 ಗಂಟೆಗೆ ರೋಡ್ ಶೋ ನಡೆಸಿ, ಅನಂತರ ಸಿದ್ದಾಪುರ ವೃತ್ತದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವರು. ಈ ಎರಡು ಕಾರ್ಯಕ್ರಮಗಳಿಗೂ ಜಿಲ್ಲಾ ಬಿಜೆಪಿ ಸಿದ್ಧತೆ ನಡೆಸಿದೆ.
ಸಂಜೆ 5.25ಕ್ಕೆ ಮೇರಿ ಹಿಲ್ ಹೆಲಿಪ್ಯಾಡ್‌ಗೆ ಆಗ ಮಿಸಲಿದ್ದು, 5.40 ರಿಂದ 6.40 ರವರೆಗೆ ಪುರಭವನದಿಂದ ನವಭಾ ರತ ವೃತ್ತದವರೆಗೆ ರೋಡ್ ಶೋ ದಲ್ಲಿ ಪಾಲ್ಗೊಳ್ಳುವರು. ಬಳಿಕ ಕೊಂಚ ವಿಶ್ರಾಂತಿ ಪಡೆದು, 7 ರಿಂದ 8 ರವರೆಗೆ ಪಕ್ಷದ ಸಭೆ ನಡೆಸುವರು. 8.50ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊಸ ದಿಲ್ಲಿಗೆ ತೆರಳುವರು. ಈ ಹಿಂದೆ ಎ. 27 ಕ್ಕೆ ಕಾಯಕ್ರಮ ನಿಗದಿಯಾಗಿತ್ತು.