ಹೊಸದಿಲ್ಲಿ: ದೇಶದ ಎಲ್ಲ ರಾಜ್ಯಗಳು ಮತ್ತು ಲೋಕಸಭೆಗೆ 2018ರಲ್ಲೇ ಒಟ್ಟಿಗೆ ಚುನಾವಣೆ ನಡೆಸಲಾಗುತ್ತದೆ ಎಂಬ ಸುದ್ದಿಗಳ ನಡುವೆ ದಿಲ್ಲಿ ಮಟ್ಟದಲ್ಲಿ ರಾಜಕೀಯ ಬಿರುಸು ಪಡೆದುಕೊಂಡಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗುರುವಾರ ಪಕ್ಷದ ಪ್ರಮುಖ 31 ನಾಯಕರು ಮತ್ತು ಸಚಿವರೊಂದಿಗೆ “ಮಿಷನ್ 2019′ ಎಂಬ ವ್ಯೂಹಾತ್ಮಕ ಸಭೆ ನಡೆಸಿದ್ದಾರೆ. ಮುಂದಿನ ಬಾರಿ ಏನಾದರೂ ಸರಿಯೇ 350 ಸ್ಥಾನಗಳಲ್ಲಿ ಗೆಲ್ಲಲೇಬೇಕು ಎಂಬ ಗುರಿಯನ್ನೂ ನೀಡಿದ್ದಾರೆ. ಅಲ್ಲದೆ ಕಳೆದ ಬಾರಿ ಸೋತ 150 ಸ್ಥಾನಗಳ ಮೇಲೆ ವಿಶೇಷ ಕಣ್ಣಿಟ್ಟಿರುವ ಅಮಿತ್ ಶಾ ಅವರು, ಈ ಕ್ಷೇತ್ರಗಳನ್ನು ಒಳಗೊಂಡ ಕರ್ನಾಟಕ, ಪಶ್ಚಿಮ ಬಂಗಾಲ, ಒಡಿಶಾ ಮತ್ತು ಈಶಾನ್ಯ ರಾಜ್ಯಗಳ ಮೇಲೆ ಹೆಚ್ಚಿನ ಮುತುವರ್ಜಿ ಇರಿಸುವಂತೆಯೂ ನಾಯಕರಿಗೆ ಸೂಚಿಸಿದ್ದಾರೆ.
ಈ ಸಭೆಯಲ್ಲಿ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಅನಂತ್‌ಕುಮಾರ್, ಜೆ.ಪಿ. ನಡ್ಡಾ, ಪಕ್ಷದ ನಾಯಕರಾದ ರಾಮ್‌ಲಾಲ್, ಅನಿಲ್ ಜೈನ್ ಮತ್ತು ಭೂಪೇಂದರ್ ಯಾದವ್ ಪಾಲ್ಗೊಂಡಿದ್ದರು. ಪವರ್ ಪಾಯಿಂಟ್ ಪ್ರಸೆಂಟೇಶನ್ ಮೂಲಕ ಪಕ್ಷದ ಅಷ್ಟೂ ಯೋಜನೆಗಳನ್ನು ಈ ನಾಯಕರ ಮುಂದೆ ತೆರೆದಿಡಲಾಗಿದೆ.
ಮುಂದಿನ ಲೋಕಸಭೆ ಚುನಾವಣೆ ಯಲ್ಲಿ ಪಕ್ಷ ಮೂರನೇ ಎರಡರಷ್ಟು, ಅಂದರೆ 350 ಸ್ಥಾನಗಳಲ್ಲಿ ಗೆಲ್ಲಲೇ ಬೇಕು ಎಂದು ಅಮಿತ್ ಶಾ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ. ಈಗಾ ಗಲೇ 110 ದಿನಗಳ ದೇಶ ಪರ್ಯಟನೆ ಕೈಗೊಂಡಿರುವ ಅಮಿತ್ ಶಾ, ಬಿಜೆಪಿ ಬಲ ಇಲ್ಲದ ಕಡೆಗಳಲ್ಲಿ ಹೆಚ್ಚಿನ ಆಸ್ಥೆ ವಹಿಸುತ್ತಿದ್ದಾರೆ. ವಿಶೇಷ ವೆಂದರೆ 30 ವರ್ಷಗಳ ಅನಂತರ ಕೇಂದ್ರದಲ್ಲಿ ಒಂದೇ ಪಕ್ಷದ ಅಧಿಕಾರ ಬಂದಿದ್ದು, ಆಗ ಉತ್ತರ ಪ್ರದೇಶದ ಉಸ್ತುವಾರಿಯಾಗಿದ್ದ ಅಮಿತ್ ಶಾ ಅವರೇ 80 ಸೀಟುಗಳಲ್ಲಿ 71 ಅನ್ನು ಗೆಲ್ಲಿಸಿಕೊಟ್ಟಿದ್ದರು.
2018ಕ್ಕೇ ಲೋಕಸಭೆ ಚುನಾವಣೆ?: ದೇಶದಲ್ಲಿ ಒಂದೇ ಬಾರಿಗೆ ಎಲ್ಲ ರಾಜ್ಯ ವಿಧಾನಸಭೆಗಳು ಮತ್ತು ಲೋಕಸಭೆ ಚುನಾವಣೆ ನಡೆಸುವ ಕುರಿತಂತೆ ಚರ್ಚೆ ನಡೆಯುತ್ತಿದೆ. ಇದನ್ನು ಬುಧವಾರವಷ್ಟೇ “ಉದಯ ವಾಣಿ’ಗೆ ಸಂದರ್ಶನ ನೀಡಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಇದನ್ನು ಸೂಚ್ಯವಾಗಿ ಹೇಳಿದ್ದರು. 2019ಕ್ಕೆ ಚುನಾವಣೆಗೆ ನಿಲೆ¤àನೋ ಇಲ್ಲವೋ ಗೊತ್ತಿಲ್ಲ. ಆದರೆ ಸದ್ಯ ವಿಧಾನಸಭೆ ಮತ್ತು ಲೋಕಸಭೆಗೆ ಅವಧಿಗೆ ಮುನ್ನವೇ ಒಟ್ಟಿಗೇ ಚುನಾ ವಣೆ ನಡೆಯುವ ಮಾತುಗಳು ಕೇಳಿ ಬಂದಿವೆ. ಹೀಗಾದರೆ ತನ್ನ ಸ್ಪರ್ಧೆ ಅನಿವಾರ್ಯವಾಗಬಹುದೋ ಏನೋ ಎಂದಿದ್ದರು. ಸದ್ಯ ದಿಲ್ಲಿಯಲ್ಲಿನ ರಾಜಕಾರಣ ಗಮನಿಸಿದರೆ ದೇವೇ ಗೌಡರ ಈ ಮಾತಿನ ಹಿಂದೆ ಸತ್ಯವಿದೆ ಎಂದು ಹೇಳಲಾಗುತ್ತಿದೆ.
ವಿಪಕ್ಷಗಳಿಂದಲೂ ಭಾರೀ ಸಿದ್ಧತೆ
ಕಾಂಗ್ರೆಸ್ ಸಹಿತ ಹಲವಾರು ವಿಪಕ್ಷಗಳ ನಾಯಕರು ಗುರುವಾರ ದಿಲ್ಲಿಯಲ್ಲಿ ಸಭೆ ಸೇರಿ ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಬಿಹಾರದಲ್ಲಾದ ಬೆಳವಣಿಗೆ ಗಳಿಂದ ಅಸಮಾಧಾನಗೊಂಡು ವಿಪಕ್ಷ ಪಾಳಯದಲ್ಲಿ ಗುರುತಿಸಿ ಕೊಂಡಿರುವ ಶರದ್ ಯಾದವ್ ಈ ಸಭೆ ಕರೆದದ್ದು ಎಂದು ಹೆಸರಿಗೆ ಹೇಳಬಹುದಾದರೂ ಇದು ಲೋಕಸಭೆ ಚುನಾವಣೆಗೆ ಸಿದ್ಧತೆಗಾಗಿಯೇ ನಡೆಸಲಾದ ಸಭೆ ಎಂದೂ ಹೇಳಲಾಗಿದೆ. ಈ ಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಮಗೆ ಸ್ವತ್ಛ ಭಾರತಕ್ಕಿಂತ ಸಚ್ ಭಾರತ ಬೇಕು ಎಂದೂ ಹೇಳಿ ದ್ದರು. ಜತೆಗೆ ಮುಂದಿನ ಚುನಾ ವಣೆಗೆ ಎಲ್ಲರೂ ಒಟ್ಟಾಗುವ ಸುಳಿವನ್ನೂ ಈ ಸಭೆ ನೀಡಿದೆ.