Advertisement

ಸುಪ್ರೀಂ ತೀರ್ಪಿನ ನೆಪದಲ್ಲಿ ಭಕ್ತರನ್ನು ಹತ್ತಿಕ್ಕಿದರೆ ಹುಷಾರ್; ಶಾ

03:36 PM Oct 27, 2018 | Team Udayavani |

ನವದೆಹಲಿ:ಶಬರಿಮಲೆ ದೇಗುಲದೊಳಗೆ ಮಹಿಳೆಯರು ಪ್ರವೇಶಿಸುವುದನ್ನು ತಡೆಗಟ್ಟಿದ ಸುಮಾರು 2,800 ಮಂದಿಯನ್ನು ಕೇರಳ ಸರ್ಕಾರ ಬಂಧಿಸಿರುವ ಕ್ರಮವನ್ನು ಕಟುವಾಗಿ ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇರಳ ಸರ್ಕಾರ ಪ್ರಕರಣವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರನ್ನು ಬಂಧಿಸಿದೆ. ಆದರೆ ಬಿಜೆಪಿ ಅಯ್ಯಪ್ಪ ಭಕ್ತರ ಜೊತೆಗೆ ಇದೆ ಎಂದು ತಿಳಿಸಿದ್ದಾರೆ.

Advertisement

ಶಬರಿಮಲೆ ಪ್ರತಿಭಟನೆಯನ್ನು ಸಂಪ್ರದಾಯ ಉಳಿಸಲು ನಡೆದ ಹೋರಾಟ ಎಂದು ಹೇಳಿರುವ ಶಾ, ಕೇರಳ ಸರ್ಕಾರ ಮತ್ತು ಧಾರ್ಮಿಕ ನಂಬಿಕೆಯ ನಡುವಿನ ಹೋರಾಟದಲ್ಲಿ ಕ್ರೌರ್ಯ ಮೆರೆದಿದೆ ಎಂದು ಆರೋಪಿಸಿದರು.

ಶನಿವಾರ ಕೇರಳದ ಕಣ್ಣೂರು ಜಿಲ್ಲೆಗೆ ಆಗಮಿಸಿದ್ದ ಶಾ ಬಿಜೆಪಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತ, ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಕೇರಳ ಸರ್ಕಾರ ಬಂಧಿಸಿದೆ. ಸಾವಿರಾರು ಜನರನ್ನು ಜೈಲಿಗೆ ಕಳುಹಿಸಿದೆ. ನಾನು ಕೇರಳದ ಕಮ್ಯೂನಿಷ್ಟ್ ಮುಖ್ಯಮಂತ್ರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ, ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವ ನೆಪದಲ್ಲಿ ಭಕ್ತರನ್ನು ತಡೆಗಟ್ಟಬೇಡಿ ಎಂದು ಹೇಳಿದ್ದಾರೆ.

ಕೇರಳದಲ್ಲಿರುವ ದೇವಾಲಯಗಳ ಪಾವಿತ್ರ್ಯತೆಯನ್ನು ನಾಶ ಮಾಡುವ ವ್ಯವಸ್ಥಿತ ಹುನ್ನಾರ ನಡೆಸಿರುವುದಾಗಿ ದೂರಿದರು. ನಾವು ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಅಯ್ಯಪ್ಪ ಭಕ್ತರ ಜೊತೆ ನಾವಿದ್ದೇವೆ ಎಂದು ಶಾ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next