Advertisement
ಕಾಪು ಕ್ಷೇತ್ರದಲ್ಲಿ ಸಮಾವೇಶ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ, ಕಟಪಾಡಿ ಪರಿಸರದಲ್ಲಿ ಸಮಾವೇಶಕ್ಕೆ ಬೇಕಾದ ಸಿದ್ಧತೆಯ ಸಂಬಂಧ ಜಿಲ್ಲಾ ತಂಡ ಸೋಮವಾರ ರಾತ್ರಿ ತುರ್ತು ಸಭೆ ನಡೆಸಿತು.
ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿಯವರು ಕೂಡ ಎ. 27ರಂದು ಉಡುಪಿ ಜಿಲ್ಲೆಯ ಕಾಪುವಿಗೆ ಆಗಮಿಸಲಿದ್ದಾರೆ. ಅಂದು ಉಚ್ಚಿಲದಲ್ಲಿ ಮೀನುಗಾರರ ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಮಿತ್ ಶಾ ಹಾಗೂ ರಾಹುಲ್ ಗಾಂಧಿ ಒಂದೇ ದಿನ ಒಂದೇ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಲಿರುವುದು ತೀವ್ರ ಕುತೂಹಲ ಮೂಡಿಸಿದೆ.
Related Articles
Advertisement