Advertisement
ಕೈಲಾಶ್ ವಿಜಯ್‌ವರ್ಗಿಯಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆರ್ಭಟಿಸಲು ಪ್ರಮುಖ ಕಾರಣ ಕೈಲಾಶ್ ವಿಜಯ್‌ವರ್ಗಿಯಾ. ಇಂದೋರ್ ಮೂಲದ ಇವರು ಬಂಗಾಳದಲ್ಲಿ ಸಂಘಟಿಸಿದ “ಹಿಂದುತ್ವ ಅಭಿಯಾನ’ ಬಿಜೆಪಿಯ ಅಭೂತಪೂರ್ವ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಅಭಿಯಾನದ ಫಲವಾಗಿ ಬಹುಪಾಲು ಹಿಂದೂ ಮತಗಳನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಕೈಲಾಶ್ ವಿಜಯ್‌ವರ್ಗಿಯಾ, ಒಮ್ಮೆ ಇಂದೋರ್ ಮೇಯರ್, 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
Related Articles
Advertisement
ಅನಿಲ್ ಕುಮಾರ್ ಜೈನ್: ವೃತ್ತಿಯಲ್ಲಿ ಸರ್ಜನ್ ಆಗಿರುವ ಅನಿಲ್ ಕುಮಾರ್ ಜೈನ್ ಹರ್ಯಾಣ ಮತ್ತು ಛತ್ತೀಸ್‌ಗಢ ಚುನಾವಣಾ ಉಸ್ತುವಾರಿ ವಹಿಸಲಾಗಿತ್ತು. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಛತ್ತೀಸ್‌ಗಢ ಉಸ್ತುವಾರಿಯಾಗಿ ನೇಮಿಸುವ ಸಂದರ್ಭದಲ್ಲಿ ಅನಿಲ್ ಜೈನ್ ಅವರಿಗೆ ರಾಜ್ಯದಲ್ಲಿ ಮತ್ತೂಮ್ಮೆ ಬಿಜೆಪಿ ನೆಲೆ ಗಟ್ಟಿಗೊಳಿಸುವ ಮತ್ತು ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸುವ ಟಾರ್ಗೆಟ್ ನೀಡಲಾಗಿತ್ತು. ಅದರಂತೆ ತಮ್ಮದೇ ಆಪ್ತರ ಮತ್ತು ನಂಬಿಕಸ್ತರ ಒಂದು ತಂಡ ಕಟ್ಟಿಕೊಂಡು ಚುನಾವಣಾ ಕಣಕ್ಕಿಳಿದ ಜೈನ್, ಚುನಾವಣಾ ಪೂರ್ವದಲ್ಲೇ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದರು. ಬಳಿಕ ಪ್ರಮುಖ ನಾಯಕರನ್ನು ವಿಶಸ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಮೂಲೆ ಮೂಲೆಯಲ್ಲೂ ಬಿಜೆಪಿ ಹಾಗೂ ಮೋದಿ ಅಲೆ ಏಳುವಂತೆ ಮಾಡಿದರು. ಪರಿಣಾಮ 11 ಲೋಕಸಭಾ ಕ್ಷೇತ್ರಗಳ ಪೈಕಿ 9ರಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಅದೇ ರೀತಿ ಹರ್ಯಾಣ ದಲ್ಲೂ ಜೈನ್ ಜಾದೂ ನಡೆದಿದ್ದು, ಹತ್ತ ರಲ್ಲೂ ಗೆದ್ದಿ ದೆ.
ಸುನಿಲ್ ಬನ್ಸಲ್: 2014ರ ಲೋಕಸಭಾ ಚುನಾವಣೆ ಮತ್ತು 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮುನ್ನಡೆಸಿ, ಯಾದವ್‌ಗಳ ಹಿಡಿತದಲ್ಲಿದ್ದ ಉತ್ತರ ಪ್ರದೇಶವನ್ನು ಯೋಗಿ ಕೈಗೆ ನೀಡಿದ್ದು ಸುನಿಲ್ ಬನ್ಸಲ್. ಆರ್‌ಎಸ್‌ಎಸ್‌ನ ಶಿಸ್ತಿ ನ ಕಾರ್ಯಕರ್ತ ರಾಗಿರುವ ಇವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪರಮಾಪ್ತ. ಈ ಹಿಂದಿನ ಎರಡು ಚುನಾವಣೆಗಳಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಪ್ರಚಂಡ ಜಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬನ್ಸಲ್‌ಗೆ ಈ ಬಾರಿ ಯೋಗಿ ರಾಜ್ಯದಲ್ಲಿ ದೊಡ್ಡ ಸವಾಲೇ ಎದುರಾಗಿತ್ತು. ಪ್ರತಿಪಕ್ಷಗಳು ಸೃಷ್ಟಿಸಿದ್ದ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ತಗ್ಗಿಸಿ ಸಾಧ್ಯವಾದಷ್ಟು ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ಬನ್ಸಲ್ ಮೇಲಿತ್ತು. ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿ 40 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು ಚುನಾವಣಾ ಪೂರ್ವದ ಸಮೀಕ್ಷೆಗಳು ಹೇಳಿದ್ದವು. ಆದರೆ ಇವೆ ಲ್ಲ ವನ್ನೂ ಇವರು ಸುಳ್ಳು ಮಾಡಿ ದ್ದಾರೆ.