Advertisement

ಮೇ 8: ಮಂಗಳೂರಿನಲ್ಲಿ ಅಮಿತ್‌ ಶಾ ಮೂರು ಕಡೆ ಬೃಹತ್‌ ರೋಡ್‌ ಶೋ

07:50 AM May 07, 2018 | Team Udayavani |

ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್‌ ಶಾ ಅವರು ಮೇ 8ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳಲ್ಲಿ ಬೃಹತ್‌ ರೋಡ್‌ ಶೋ ನಡೆಸಲಿದ್ದಾರೆ.

Advertisement

ಮಧ್ಯಾಹ್ನ 12.45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು 2.30ರ ವರೆಗೆ ಊಟ ಮತ್ತು ವಿಶ್ರಾಂತಿ ತೆಗೆದುಕೊಳ್ಳುವರು. ಮಧ್ಯಾಹ್ನ 2.30ಕ್ಕೆ ಮಂಗಳೂರು ಕ್ಷೇತ್ರದ ಬಿಜೆಪಿ ಕಚೇರಿಯಿಂದ ತೊಕ್ಕೊಟ್ಟು ನಾಗಕಟ್ಟೆಯವರೆಗೆ ರೋಡ್‌ ಶೋ ನಡೆಸುವರು. 3.45ರಿಂದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ನವಭಾರತ ವೃತ್ತದಿಂದ ಕೆ.ಎಸ್‌. ರಾವ್‌ ರಸ್ತೆ, ಪಿ.ಎಂ. ರಸ್ತೆ ಮೂಲಕ ಕಾರ್‌ ಸ್ಟ್ರೀಟ್‌ ಟೆಂಪಲ್‌ ಸ್ಕ್ವೆರ್‌ ತನಕ ರೋಡ್‌ ಶೋ ಹಾಗೂ 4.45ರಿಂದ ಮಂಗಳೂರು ನಗರ ಉತ್ತರ ಕ್ಷೇತ್ರದ ಬಿಜೆಪಿ ಕಚೇರಿಯಿಂದ ಮರಕಡವರೆಗೆ ರೋಡ್‌ ಶೋ ನಡೆಸುವರು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನ ನೆಹರೂ ಮೈದಾನದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.

ಆಯಾ ಕ್ಷೇತ್ರದ ಪಕ್ಷದ ಕಾರ್ಯಕರ್ತರು, ಸದಸ್ಯರು, ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾ ಸಂಚಾಲಕ ಮೋನಪ್ಪ ಭಂಡಾರಿ, ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತು ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಅವರು ಪತ್ರಿಕಾ ಪ್ರಕಟನೆಯಲ್ಲಿ  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next