Advertisement

“ಬಿಗ್‌ ಬಿ’ಗೆ ಮನೆಗೆ ಹೋಗಿ ಆರಾಮಾಗಿರಿ ಎಂದ ಐದು ವರ್ಷದ ಮಗು!

11:28 PM Jul 19, 2022 | Team Udayavani |

ಮುಂಬೈ: ಸೂಪರ್‌ಸ್ಟಾರ್‌ ಅಮಿತಾಭ್‌ ಬಚ್ಚನ್‌ ಅವರಿಗೆ ದೊಡ್ಡ ಮನುಷ್ಯರೊಬ್ಬರು “ಈ ವಯಸ್ಸಿನಲ್ಲಿ ಯಾಕ್ರೀ ದುಡೀತಿರಾ? ಮನೆಗೆ ಹೋಗಿ ಆರಾಮಾಗಿರಿ’ ಅನ್ನೋ ಸಲಹೆ ನೀಡಿದ್ದಾರೆ!

Advertisement

ಆ ದೊಡ್ಡ ಮನುಷ್ಯರ ವಯಸ್ಸೆಷ್ಟು ಗೊತ್ತೇ.. ಕೇವಲ ಐದು ವರ್ಷ! ಇದನ್ನು ಖುದ್ದು “ಬಿಗ್‌ ಬಿ’ ಅವರೇ ಹೇಳಿಕೊಂಡಿದ್ದಾರೆ! ಇತ್ತೀಚೆಗೆ, ಆರ್‌ಬಿಐನ ಜಾಹೀರಾತೊಂದರಲ್ಲಿ ಐದು ವರ್ಷದ ಮಗುವಿನೊಂದಿಗೆ ನಟಿಸುತ್ತಿದ್ದಾಗ ಆ ಮಗು ನಿಮ್ಮ ವಯಸ್ಸೆಷ್ಟು ಎಂದು ಕೇಳಿತಂತೆ.

ಅದಕ್ಕೆ ಅಮಿತಾಭ್‌, 80 ವರ್ಷ ಎಂದು ಹೇಳಿದರಂತೆ. ಅದಕ್ಕೆ ಆ ಮಗು, ನಮ್ಮನೆಯಲ್ಲಿ ನನ್ನ ಅಜ್ಜ-ಅಜ್ಜಿ ಮನೆಯಲ್ಲೇ ಆರಾಮಾಗಿ ಇರುತ್ತಾರೆ. ನೀವೂ ಹಾಗೇ ಇರಿ ಎಂದು ಹೇಳಿತಂತೆ. ಆತನಿಗೆ ಮರುಉತ್ತರ ಕೊಡಲು ಸಾಧ್ಯವಾಗಲಿಲ್ಲ ಅಂತ “ಬಿಗ್‌ ಬಿ’ ಹೇಳಿಕೊಂಡಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next