Advertisement

Rakhi ಕಟ್ಟಿ ಅಮಿತಾಬ್ ಬಚ್ಚನ್ ನನಗೆ ‘ಭಾರತ ರತ್ನ’ ಎಂದ ಮಮತಾ ಬ್ಯಾನರ್ಜಿ

08:25 PM Aug 30, 2023 | Team Udayavani |

ಮುಂಬಯಿ: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನನಗೆ ಭಾರತ ರತ್ನ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಧವಾರ ಹೇಳಿದ್ದಾರೆ.

Advertisement

ಇಂಡಿಯಾ ಮೈತ್ರಿಕೂಟದ ಮೂರನೇ ಸಭೆಯಲ್ಲಿ ಭಾಗವಹಿಸಲು ಮುಂಬೈಗೆ ಆಗಮಿಸಿರುವ ಮಮತಾ ಬ್ಯಾನರ್ಜಿ, ಅಮಿತಾಬ್ ಬಚ್ಚನ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಮಮತಾ ಬ್ಯಾನರ್ಜಿ ಅವರು ಅಮಿತಾಬ್ ಬಚ್ಚನ್ ಅವರನ್ನು ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ಎಂದು ಪ್ರೀತಿಯಿಂದ ಉಲ್ಲೇಖಿಸಿದರು.

ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಮತ್ತು ಅವರ ಮಗಳು ಆರಾಧ್ಯ ಬಚ್ಚನ್,ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದಾ ಅವರನ್ನು ಭೇಟಿಯಾದರು.

“ನಾನು ಈ ಕುಟುಂಬವನ್ನು ಪ್ರೀತಿಸುತ್ತೇನೆ. ಇದು ಭಾರತದ ನಂಬರ್ ಒನ್ ಕುಟುಂಬ. ಇವರು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next