Advertisement

ನಿಮ್ಮ ಸಿಎಎ ಪ್ರತಿಭಟನೆಗೆ ಹೆದರಲ್ಲ…ರಾಹುಲ್, ಮಮತಾಗೆ ಅಮಿತ್ ಶಾ ಬಹಿರಂಗ ಸವಾಲು!

10:14 AM Jan 22, 2020 | Nagendra Trasi |

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ದೇಶಾದ್ಯಂತ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರೋಧ ಪಕ್ಷ ಮುಖಂಡರಿಗೆ ಮತ್ತೊಮ್ಮೆ ಸವಾಲು ಹಾಕಿದ್ದು, ಈ ಬಗ್ಗೆ ಚರ್ಚೆಗೆ ಬನ್ನಿ ಎಂದು ಹೇಳಿದ್ದಾರೆ.

Advertisement

ಸಿಎಎ ಬಗ್ಗೆ ಚರ್ಚೆ ನಡೆಸಿ, ಕಾನೂನು ರಚನೆಯಾಗಿದೆ. ನಾನೀಗ ಇಲ್ಲಿಂದಲೇ ಹೇಳುತ್ತಿದ್ದೇನೆ, ಸಿಎಎಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಯಾರೇ ಪ್ರತಿಭಟಿಸಲಿ ಅದು ವಿಷಯವಲ್ಲ. ನಾವು ವಿರೋಧಪಕ್ಷಗಳಿಗೆ ಹೆದರುವುದಿಲ್ಲ. ನಾವು ಇಲ್ಲಿಯೇ ಜನಿಸಿದವರು ಎಂದು ಶಾ ತಿರುಗೇಟು ನೀಡಿದ್ದಾರೆ.

ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಕೇಂದ್ರ ಸ್ಥಳವಾದ ಲಕ್ನೋದಲ್ಲಿ ಮಾತನಾಡಿದ ಶಾ, ಜನರ ಹಿತದೃಷ್ಟಿಯಿಂದ ಸರ್ಕಾರ ಕಾನೂನು ರೂಪಿಸಿದೆ. ಆದರೆ ವಿರೋಧ ಪಕ್ಷಗಳು ವಾಸ್ತವಾಂಶ ನೋಡದೇ ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಮುಖವಾಡದ ಕಣ್ಣಿನಲ್ಲಿ ನೋಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಿಎಎ ಬಗ್ಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸುಳ್ಳನ್ನು ಹಬ್ಬಿಸುತ್ತಿದೆ. ಮಮತಾ ದೀದಿ, ರಾಹುಲ್ ಗಾಂಧಿ, ಅಖಿಲೇಶ್ ಜೀ, ಮಾಯಾವತಿ ಜೀ ನಾನು ನಿಮಗೆ ಸವಾಲು ಹಾಕುತ್ತಿದ್ದೇನೆ…ದೇಶದ ಯಾವುದೇ ಭಾಗದಲ್ಲಿಯೂ ಸಿಎಎ ಬಗ್ಗೆ ಚರ್ಚಿಸಲು ಸಿದ್ಧ ಎಂದರು. ಸಿಎಎ ಮಸೂದೆಯಲ್ಲಿ ದೇಶದ ಒಬ್ಬನೇ ಒಬ್ಬ ಪ್ರಜೆಯ ಪೌರತ್ವ ಕಸಿದುಕೊಳ್ಳುವ ಷರತ್ತು ಇರುವುದು ನನಗೆ ತೋರಿಸಿ ಎಂದು ಶಾ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next