Advertisement
ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದು ಹೋದರೂ ರಾಜ್ಯದಲ್ಲಿ ಎದ್ದಿದ್ದ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗದೇ ಇರುವುದು ಸಚಿವಾಕಾಂಕ್ಷಿಗಳಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.
Related Articles
ಅಮಿತ್ ಶಾ ಬಂದು ಹೋದರೂ ಗೊಂದಲಗಳಿಗೆ ಸ್ಪಷ್ಟ ಉತ್ತರ ದೊರೆಯದೆ ಇರುವುದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂತಹ ಸಂದರ್ಭದಲ್ಲಿ ಗೊಂದಲ ಮುಂದುವರಿಸಿದರೆ ಪಕ್ಷ ಸಂಘಟನೆ, ಪ್ರವಾಸ, ಸರಕಾರದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಯಾವುದಾದರೂ ಒಂದು ನಿರ್ಣಯವನ್ನು ಸ್ಪಷ್ಟಪಡಿಸಬೇಕಿತ್ತು ಎಂದು ಆಪ್ತರ ಬಳಿ ಹೇಳಿದ್ದಾರೆ ಎನ್ನಲಾಗಿದೆ.
Advertisement
ಯಾವುದೇ ಬದಲಾವಣೆಯಿಲ್ಲಬಿಜೆಪಿಯ ಒಂದು ವರ್ಗದ ಪ್ರಕಾರ, ಅಮಿತ್ ಶಾ ಜತೆಗೆ ಯಾವುದೇ ಗಂಭೀರ ಚರ್ಚೆ ನಡೆ ದಿಲ್ಲ. ಸಂಪುಟ ಪುನಾರಚನೆಯೂ ನಡೆಯುವುದಿಲ್ಲ. ಈಗಿರುವ ವ್ಯವಸ್ಥೆ ಯಲ್ಲಿ ಯಾವುದೇ ಬದಲಾವಣೆ ಯಿಲ್ಲ. ಪ್ರಸ್ತುತ ಮುಂದಿನ ಚುನಾ ವಣೆಯ ಕಡೆಗೆ ಹೆಚ್ಚಿನ ಗಮನಹರಿಸಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.