Advertisement

ಅಮಿತ್‌ ಶಾಗೆ ಪ್ರತ್ಯೇಕ ಧರ್ಮ ಬೇಕು,ನಮ್‌ಗ್ಯಾಕೆ ಬೇಡ ?

02:29 PM Oct 01, 2017 | Team Udayavani |

ಹುಬ್ಬಳ್ಳಿ: ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಹಾಗೂ ಸಂವಿಧಾನಿಕ ಮಾನ್ಯತೆಗಾಗಿ ಹೋರಾಟ ತೀವ್ರ ಗೊಂಡಿದ್ದು, ಸಚಿವ,ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ  ವಿನಯ್‌ ಕುಲಕರ್ಣಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ವಿರುದ್ಧ ಕಿಡಿ ಕಾರಿದ್ದಾರೆ. 

Advertisement

ಭಾನುವಾರ ಲಿಂಗರಾಜ ನಗರದ ಲಿಂಗರಾಜ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಚಿಂತನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಕುಲಕರ್ಣಿ ‘ಅಮಿತ್‌ ಶಾ ಅವರಿಗೆ ಪ್ರತ್ಯೇಕ ಧರ್ಮ ಬೇಕು. ಅವರು ಅಲ್ಪಸಂಖ್ಯಾತ ಜೈನ ಧರ್ಮಕ್ಕೆ ಸೇರಿದವರು. ಅದು ಹಿಂದೂ ಧರ್ಮದಿಂದ ಪ್ರತ್ಯೇಕವಾಗಿದ್ದಲ್ಲವೇ? ನಾವು ಕೇಳಿದರೆ ಮಾತ್ರ ಧರ್ಮ ಒಡೆಯುವುದು ಬೇಡ ಎನ್ನುತ್ತಾರೆ. ಇದು ಯಾವ ನ್ಯಾಯ’ ಎಂದು ಕಿಡಿ ಕಾರಿದರು. 

‘ಅಮಿತ್‌ ಶಾ ಅವರು ನೆನಪಿಟ್ಟುಕೊಳ್ಳಲಿ ಜೈನ ಧರ್ಮಕ್ಕೆ ಪ್ರತ್ಯೇಕ ಸ್ಥಾನ ಮಾನ ನೀಡಿ ,ಅಲ್ಪಸಂಖ್ಯಾತರ ಸ್ಥಾನ ಮಾನ ನೀಡಿದ್ದು ಅಂದಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌’ ಎಂದರು. 
 

Advertisement

Udayavani is now on Telegram. Click here to join our channel and stay updated with the latest news.

Next