Advertisement
ಬಿಜೆಪಿ ವರಿಷ್ಠ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಸಿದ್ಧಗೊಳಿಸುವುದು ಹಾಗೂ ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಫೆ. 28ರಂದು ಮಂಗಳೂರಿನಲ್ಲಿ ನಡೆಯಲಿರುವ ಮಹಿಳಾ ಮೋರ್ಚಾ ಸಮಾವೇಶದ ಬಗ್ಗೆ, ಶಾಸಕ ಎಸ್. ಅಂಗಾರ ಅವರು ಸವಣೂರು ಗ್ರಾ.ಪಂ. ವ್ಯಾಪ್ತಿಗೆ ನೀಡಿರುವ ಅನುದಾನಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ನಡೆಸುವ ಕುರಿತೂ ಚರ್ಚಿಸಲಾಯಿತು. ಸಭೆಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮೇಂದ್ರ ಕಟ್ಟತ್ತಾರು, ಮಹಿಳಾ ಮೋರ್ಚಾ ಕಾರ್ಯದರ್ಶಿ ಚಂಪಾ, ಬಿಜೆಪಿ ಸುಳ್ಯ ಕ್ಷೇತ್ರದ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ
ಅಶ್ರಫ್ ಕಾಸಿಲೆ, ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್, ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕೆ., ಎಪಿಎಂಸಿ ನಿರ್ದೇಶಕ ದಿನೇಶ್ ಮೆದು, ಸವಣೂರು ಗ್ರಾ.ಪಂ. ಸದಸ್ಯರಾದ ಗಿರಿಶಂಕರ್ ಸುಲಾಯ, ಪ್ರಕಾಶ್ ಕುದ್ಮನಮಜಲು,
ದಿವಾಕರ ಬಂಗೇರ ಬೊಳಿಯಾಲ, ಸತೀಶ್ ಗೌಡ ಅಂಗಡಿಮೂಲೆ, ಜಯಂತಿ ಮಡಿವಾಳ, ರಾಜೀವಿ ಶೆಟ್ಟಿ, ಗಾಯತ್ರಿ ಬರೆಮೇಲು, ವಸಂತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಗಣೇಶ್ ನಿಡ್ವಣ್ಣಾಯ, ತಾರಾನಾಥ ಕಾಯರ್ಗ, ವೇದಾವತಿ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪದ್ಮಪ್ರಸಾದ್ ಆರಿಗ, ಹಿರಿಯರಾದ ಬಿ.ಕೆ. ರಮೇಶ್, ಶಿವರಾಮ ಗೌಡ ಮೆದು, ಮೋಹನ್ ದೇವಾಡಿಗ, ಸಂಜೀವ ಗೌಡ ಪಾಲ್ತಾಡಿ, ಪ್ರಕಾಶ್ ರೈ, ಸವಿತಾ ಹರೀಶ್, ಅನಿತಾ, ಬಿ. ವಿಟ್ಠಲ ಶೆಟ್ಟಿ ಬಂಬಿಲ, ಲೋಕೇಶ್ ಕನ್ಯಾಮಂಗಲ ಮೊದಲಾದವರು ಉಪಸ್ಥಿತರಿದ್ದರು. ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ಸ್ವಾಗತಿಸಿ,ವಂದಿಸಿದರು.