Advertisement
ಅಫ್ಘಾನ್ ಜೈಲುಗಳಲ್ಲಿ ಬಂಧಿತರಾಗಿದ್ದ ಐಎಸ್-ಕೆಪಿಯ ಉಗ್ರರು ಬಂಧಮುಕ್ತರಾಗಿದ್ದಾರೆ. ಇವರಲ್ಲಿ ಕೆಲವರು ಪಾಕ್ ಪ್ರವೇಶಿಸಿದ್ದಾರೆ. ಐಎಸ್‌ಐಯು ಅವರನ್ನು ಪಿಒಕೆಗೆ ಕಳುಹಿಸಲು ಸಂಚು ರೂಪಿಸುತ್ತಿದ್ದು, ಜಮ್ಮು- ಕಾಶ್ಮೀರದಲ್ಲಿ ತನ್ನ ಕುತ್ಸಿತ ಕಾರ್ಯಸೂಚಿ ಜಾರಿಗೆ ಮುಂದಾಗಿದೆ ಎನ್ನಲಾಗಿದೆ.
Related Articles
Advertisement
ಗುಪ್ತಚರ ಸಂಸ್ಥೆಗಳ ವರದಿಯ ಪ್ರಕಾರ ಅಫ್ಘಾನ್‌ನ ಪಶ್ತೂನ್ ಭಾಷೆ ಮಾತನಾಡುವ ಕೆಲವು ಉಗ್ರರು ಕೂಡ ಪಿಒಕೆಯ ವಿವಿಧ ಭಾಗಗಳಲ್ಲಿ ಗೋಚರಿಸಿದ್ದಾರೆ. ಇದುವರೆಗೆ ಪಾಕ್ ಪ್ರೇರಿತ ಉಗ್ರರು ಪಿಒಕೆಯ ತರಬೇತಿ ಶಿಬಿರಗಳನ್ನು ಬಳಕೆ ಮಾಡುತ್ತಿದ್ದರು. ಈಗ ಐಎಸ್-ಕೆಪಿ ಉಗ್ರರು ಕೂಡ ಅವುಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆಯಲ್ಲಿ ಪ್ರಸ್ತಾವಿಸಲಾಗಿದೆ.
ಗೃಹ ಸಚಿವ ಷಾ ಸಭೆ :
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಹೊಸದಿಲ್ಲಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಪರಿ ಶೀಲನೆ ನಡೆಸಲಾಗಿದೆ. ಅಫ್ಘಾನಿಸ್ಥಾನ ವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಮತ್ತು ಐಎಸ್-ಕೆಪಿ ಉಗ್ರರು ಪಿಒಕೆಗೆ ಲಗ್ಗೆ ಹಾಕಲಿದ್ದಾರೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.
ಅಫ್ಘಾನ್‌ನತ್ತ ಲಷ್ಕರ್, ಜೈಶ್ ಗಮನ ಹರಿಸಿರುವ ಬಗ್ಗೆ ಚರ್ಚೆ ನಡೆಸ ಲಾಗಿದೆ. ಉಗ್ರರ ನುಸುಳುವಿಕೆ ತಡೆ ಯಲು ಅನುಸರಿಸಬೇಕಾದ ಮುನ್ನೆ ಚ್ಚರಿಕೆ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ರಾಷ್ಟ್ರೀಯ ಭದ್ರತ ಸಲಹೆಗಾರ ಅಜಿತ್ ದೋವಲ್, ಭೂಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ ಮುಖ್ಯಸ್ಥ ಸಮಂತ್ ಗೋಯಲ್ ಹಾಜರಿದ್ದರು.
ಉಗ್ರರಿಗೆ ಬೆಂಬಲ ಬೇಡ :
ಅಫ್ಘಾನ್ ನೆಲದಲ್ಲಿ ಇತರ ರಾಷ್ಟ್ರಗಳ ವಿರುದ್ಧ ಉಗ್ರ ಕೃತ್ಯಗಳನ್ನು ಎಸಗಲು ಅವಕಾಶ ನೀಡ ಬಾರದು ಎಂದು ಬ್ರಿಕ್ಸ್ ರಾಷ್ಟ್ರಗಳ ಒಕ್ಕೂಟ ಗುರು ವಾರ ಪ್ರತಿಪಾದಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾರತ, ಬ್ರೆಜಿಲ್, ರಷ್ಯಾ, ಚೀನ, ದಕ್ಷಿಣ ಆಫ್ರಿಕಗಳನ್ನು ಒಳಗೊಂಡ ಬ್ರಿಕ್ಸ್ ಒಕ್ಕೂಟ ಈ ಸಲಹೆ ನೀಡಿದೆ.
ಅಫ್ಘಾನ್‌ನ ಸದ್ಯದ ಪರಿ ಸ್ಥಿತಿ ಯನ್ನು ಶಾಂತಿ ಯುತ ದಾರಿ ಗಳಿಂದಲೇ ಬಗೆ ಹರಿಸಬೇಕು ಎಂದು ಅಭಿಪ್ರಾಯಪಡ ಲಾಗಿದೆ.
ಪ್ರಧಾನಿ ಮೋದಿ ಹೇಳಿದ್ದೇನು?:
- ಬ್ರಿಕ್ಸ್ ರಾಷ್ಟ್ರಗಳು ಉಗ್ರ ನಿಗ್ರಹ ಯೋಜನೆ ಯನ್ನು ಅಳವಡಿಸಿಕೊಳ್ಳಬೇಕು.
- ಬ್ರಿಕ್ಸ್ ಒಕ್ಕೂಟ ಮುಂದುವರಿಯಲು ಸಹಕಾರ, ಒಗ್ಗೂಡು ವಿಕೆ, ಸಹಮತದ ನಿರ್ಧಾರಗಳು ರೂಪುಗೊಳ್ಳಬೇಕು.
- ಸದ್ಯದ ಪರಿಸ್ಥಿತಿಯಲ್ಲಿ ಒಕ್ಕೂಟ ಜಗತ್ತಿನ ಪರಿ ಸ್ಥಿತಿಯ ಬಗ್ಗೆ ಅಧಿಕಾರಯುತವಾಗಿ ಮಾತ ನಾಡುವ ಅವಕಾಶ ಬ್ರಿಕ್ಸ್‌ಗೆ ಇದೆ.
- ಹೊಸ ಅಭಿವೃದ್ಧಿ ಬ್ಯಾಂಕ್, ಇಂಧನ ಸಂಶೋ ಧನೆ, ಸಹಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಲಾಗಿದೆ.