Advertisement
ಬುಧವಾರ ಪರೇಶ್ ಮೇಸ್ತ ಮನೆಗೆ ತೆರಳಿ, ಅವರ ತಂದೆ ಕಮಲಾಕರ ಮೇಸ್ತ ಹಾಗೂ ಕುಟುಂಬದವರೊಂದಿಗೆ ಸುಮಾರು 25 ನಿಮಿಷಗಳ ಕಾಲ ಮಾತನಾಡಿದರು. ಜೊತೆಯಲ್ಲಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಅಮಿತ್ ಶಾ ಅವರಿಗೆ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿದರು. ಎಲ್ಲ ವಿಷಯಗಳನ್ನು ಆಲಿಸಿದ ಅಮಿತ್ ಶಾ, ಈ ಬಗ್ಗೆ ಅಗತ್ಯ ಕ್ರಮ ವಹಿಸಲಿದ್ದು, ಆತಂಕಪಡುವ ಅವಶ್ಯಕತೆ ಇಲ್ಲವೆಂದು ಪರೇಶ್ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ಹೇಳಿದರು. ಬೇಡಿಕೆಯ ಅಹವಾಲಿನ ಕುರಿತು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ಮಾಧ್ಯಮ ಪ್ರತಿನಿಧಿಗಳ ಜತೆಯೂ ಮಾತನಾಡಿಲ್ಲ ಎಂದು ಬಿಜೆಪಿ ನಾಯಕರು ಅಮಿತ್ ಶಾ ಮೌನಕ್ಕೆ ಸಮಜಾಯಿಷಿ ನೀಡಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಬಂದು ಮತ್ತೆ ಹೆಲಿಕಾಪ್ಟರ್ ಏರುವ ತನಕವೂ ಮಾಧ್ಯಮಗಳಿಂದ ದೂರವೇ ಉಳಿದಿದ್ದರು. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹಾಗೂ ಬಿಜೆಪಿ ಮುಖಂಡರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
Related Articles
ಪರೇಶ್ ಮೇಸ್ತ ಮನೆಗೆ ಆಗಮಿಸಲಿದ್ದಾರೆಂದು ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ಅಮಿತ್ ಶಾ ಅಹವಾಲಿಗೆ ಸ್ಥಳದಲ್ಲೇ ಸ್ಪಂದಿಸಲಿದ್ದಾರೆಂದು ಮೇಸ್ತ ಕುಟುಂಬವೂ ನಿರೀಕ್ಷಿಸಿತ್ತು. ಆದರೆ ಎಲ್ಲವನ್ನೂ ಆಲಿಸಿ, ಯಾವುದೇ ಆಶ್ವಾಸನೆ, ಭರವಸೆ ನೀಡದೇ ಮರಳಿದ್ದಾರೆ. ಸಿಬಿಐ ತನಿಖೆ ಮುಂದುವರಿಯಲಿದೆ ಎಂಬ ಬಗ್ಗೆ ಮಾತ್ರ ಪ್ರತಿಕ್ರಿಯಿಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ.
Advertisement