Advertisement
ಅಮಿತ್ ಶಾ ಅವರು ಬುಧವಾರ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Related Articles
Advertisement
ಮೋದಿ ಮತ್ತು ಶಾ ಅವರು ಸುಮಾರು 5 ಗಂಟೆಗಳ ಕಾಲ ಚರ್ಚಿಸಿ ಸಚಿವರುಗಳ ಪಟ್ಟಿಯನ್ನು ಸಿದ್ದಪಡಿಸಿದ್ದು, ಹಾಲಿ ಸಚಿವರೊಂದಿಗೆ ಕೆಲವು ಹೊಸಬರಿಗೂ ಅವಕಾಶ ನೀಡಲಾಗುವ ಬಗ್ಗೆ ಹೇಳಲಾಗಿದೆ.
ಯುವಸಂಸದರಿಗೆ ಆಧ್ಯತೆಯೊಂದಿಗೆ ಪ್ರಾಂತ್ಯವಾರು,ಜಾತಿವಾರು ಆಧ್ಯತೆಯನ್ನೂ ಸಚಿವ ಸ್ಥಾನಕ್ಕೆ ಪರಿಣಿಸುವ ಸಾಧ್ಯತೆಗಳಿವೆ.
ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿರುವ ರಾಜ್‌ನಾಥ್ ಸಿಂಗ್ (ಗೃಹ )ಸುಷ್ಮಾ ಸ್ವರಾಜ್ (ವಿದೇಶಾಂಗ ಇಲಾಖೆ)ನಿತಿನ್ ಗಡ್ಕರಿ(ಹೆದ್ದಾರಿ )ಖಾತೆಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.