Advertisement

‘ಬೂತ್‌ ಚಲೋ’ತಳ ಮಟ್ಟದ ಕಾರ್ಯಕರ್ತರೊಂದಿಗೆ ಅಮಿತ್‌ ಶಾ!

11:19 AM Apr 26, 2017 | Team Udayavani |

ಸಿಲಿಗುರಿ: ಕೆಲ ರಾಜ್ಯಗಳಲ್ಲಿ ಪಕ್ಷದ ತಳಮಟ್ಟದ ಸಂಘಟನೆಗೆ ಮುಂದಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ‘ಬೂತ್‌ ಚಲೋ’ ಕಾರ್ಯಕ್ರಮ ನಡೆಸುತ್ತಿದ್ದು, ಕೆಂಪು ಉಗ್ರರ ಅಟ್ಟಹಾಸದಿಂದ ನಲುಗಿದ್ದ ಪಶ್ಚಿಮ ಬಂಗಾಲದ ನಕ್ಸಲ್‌ಬಾರಿಯ ಬುಡಕಟ್ಟು ಜನಾಂಗದ ಬಡ ದಂಪತಿಯ ಗುಡಿಸಲಿನಲ್ಲಿ ಬಾಳೆ ಎಲೆಯಲ್ಲಿ ಸಸ್ಯಾಹಾರಿ ಊಟ ಸವಿದರು. 

Advertisement

ಈ ವೇಳೆ ಮಾತನಾಡಿದ ಶಾ ‘ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಗುತ್ತಿದೆ. ಎಷ್ಟು ದಾಳಿ ನಡೆಸುತ್ತಾರೋ ಅಷ್ಟೇ ಪ್ರಮಾಣದಲ್ಲಿ ಬಿಜೆಪಿ ಬೆಳೆಯುತ್ತದೆ’ ಎಂದರು. 

‘ ಪಶ್ಚಿಮ ಬಂಗಾಲದಲ್ಲಿ ಕಮಲ ಅರಳುವುದನ್ನು ತಡೆಯಲು ತೃಣಮೂಲ ಕಾಂಗ್ರೆಸ್‌ಗೆ ಸಾಧ್ಯವಿಲ್ಲ. 2019 ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಗರಿಷ್ಠ ಸ್ಥಾನಗಳನ್ನು ಗೆಲ್ಲಲಿದ್ದು, ಇದಕ್ಕೆ ದೇಶ ಸಾಕ್ಷಿಯಾಗಲಿದೆ’ ಎಂದು ಅಮಿತ್‌ ಶಾ ಹೇಳಿದರು.

‘ಟಿಎಂಸಿ ಭ್ರಮಿಸಿದೆ, ಮೋದಿ ಅವರ ವಿಜಯ ರಥವನ್ನು ನಾವು ತಡೆಯುತ್ತೇವೆ ಎಂದು. ಆದರೆ ಅದು ಸಾಧ್ಯವಿಲ್ಲ, ಅವರೆಷ್ಟು ತಡೆಯಲು ಯತ್ನಿಸುತ್ತಾರೋ ಅಷ್ಟೇ ಪ್ರಮಾಣದಲ್ಲಿ ಬಿಜೆಪಿ ಬೆಳೆಯುತ್ತದೆ’ ಎಂದರು. 

‘ಪ್ರಧಾನಿ ಅವರ ಮಹತ್ವಾಕಾಂಕ್ಷೆಯ ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ರಾಷ್ಟ್ರದ ಪ್ರತೀ ಹಳ್ಳಿ ಹಳ್ಳಿಗೂ ತಲುಪಬೇಕು. ಆದರೆ ಇದಕ್ಕೆ ಪಶ್ಚಿಮ ಬಂಗಾಳದಲ್ಲಿ  ಮಮತಾ ಬ್ಯಾನರ್ಜಿ ಅವಕಾಶ ನೀಡುತ್ತಿಲ್ಲ’ ಎಂದು ಆರೋಪಿಸಿದರು. 

Advertisement

ಮೂರು ದಿನಗಳ ಪಕ್ಷ ಸಂಘಟನೆಗಾಗಿ ಬಂಗಾಲ ಪ್ರವಾಸದಲ್ಲಿರುವ ಶಾ ಇಂದು ಮಮತಾ ಬ್ಯಾನರ್ಜಿ ಅವರ ತವರು ಕ್ಷೇತ್ರ ಭವಾನಿಪೂರ್‌ನಲ್ಲಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿ ಕೆಲ ಮನೆಗಳಿಗೆ ಭೇಟಿ ನೀಡಲಿದ್ದಾರೆ. 

ಗುರುವಾರ ಬಂಗಾಳದ 5 ಜಿಲ್ಲೆಗಳ 800 ಮಂದಿ ಬಿಜೆಪಿ ಮುಖಂಡರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 

2019 ರ ಲೋಕ ಸಭಾ ಚುನಾವಣೆಯಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವ ಉದ್ದೇಶದೊಂದಿಗ ಪಶ್ಚಿಮ ಬಂಗಾಲ, ಕೇರಳ ಮತ್ತು ಒಡಿಶಾದಲ್ಲಿ ಅಮಿತ್‌ ಶಾ ಅವರು ತಳಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಿದ್ದು ಹಲವು ಕಾರ್ಯಕ್ರಮಗಳ ರೂಪು ರೇಷೆಯನ್ನು ಸಿದ್ದಪಡಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next