Advertisement

ರಾಜ್ಯದಲ್ಲಿ ಅಮಿಶಾ, ಮೋದಿ ತಂತ್ರಗಾರಿಕೆ ನಡೆಯಲ್ಲ

02:58 PM Apr 30, 2018 | Team Udayavani |

ಹಾಸನ: ದಕ್ಷಿಣ ಹಾಗೂ ಉತ್ತರ ಭಾರತದ ರಾಜಕಾರಣದಲ್ಲಿ ಭಾರೀ ವ್ಯತ್ಯಾಸವಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ತಂತ್ರಗಾರಿಕೆ ಕರ್ನಾಟಕದಲ್ಲಿ ಫ‌ಲಿಸುವುದಿಲ್ಲ. ಕರ್ನಾಟಕದಲ್ಲಂತೂ  ಬಿಜೆಪಿ ಅಧಿಕಾರ ಹಿಡಿಯುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ನಗರದ ಅರಳೇಪೇಟೆ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳು ಎನ್‌ಡಿಎಗೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದಿವೆ. ಕೇರಳದಲ್ಲೂ ಬಿಜೆಪಿಯ ಯಾವ ತಂತ್ರ ಫ‌ಲಿಸುವುದಿಲ್ಲ. ಹಾಗಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಇಲ್ಲ ಎಂದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 132 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದು ರಾಜ್ಯದಲ್ಲಿ ಮತ್ತೂಮ್ಮೆ ಅಧಿಕಾರ ನಡೆಸಲಿದೆ. ರಾಜ್ಯದ ಜನರು ಜೆಡಿಎಸ್‌ ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಆರೋಗ್ಯ ಭಾಗ್ಯ: ರಾಜ್ಯದಲ್ಲಿ 3 ವರ್ಷ ಬರಗಾಲ ಇದ್ದರೂ  ಸರ್ಕಾರ ವಿದ್ಯುತ್‌ ಕೊರತೆಯಾಗದಂತೆ ನೋಡಿಕೊಂಡಿದೆ. ಈಗಾಗಲೇ ಪಾವಗಡದಲ್ಲಿ 13 ಸಾವಿರ ಎಕರೆಯಲ್ಲಿ ವಿಶ್ವದಲ್ಲೇ ದೊಡ್ಡ ಸೋಲಾರ್‌ ಪಾರ್ಕ್‌ ಸ್ಥಾಪಿಸಿ ದಿನದ 24 ಗಂಟೆಯೂ ವಿದ್ಯುತ್‌ ಕೊಡಲು ಸರ್ಕಾರ ತೀರ್ಮಾನಿಸಿದೆ. ಮುಂದಿನ ದಿನಗಳಲ್ಲಿ 4 ಕೋಟಿ ಜನರಿಗೂ ಉಚಿತವಾಗಿ ಆರೋಗ್ಯದ ಭಾಗ್ಯ ನೀಡಲು ತೀರ್ಮಾನಿಸಿದ್ದೇವೆ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಂ ಮಾತನಾಡಿ, ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆಯಾದ ಪರಿಣಾಮ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿದೆ. ಏಳು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಬೇಕೆಂದರೆ ಹೊಳೆನರಸೀಪುರದಲ್ಲಿ ಪ್ರಬಲ ಸ್ಪರ್ಧಿ ಕಣಕ್ಕಿಳಿಸಬೇಕೆಂಬ ಮನವಿಗೆ ವರಿಷ್ಠರಿಂದ ಮನ್ನಣೆ ಸಿಕ್ಕಿದೆ ಎಂದರು.

Advertisement

ಹಾಸನ ಅಭ್ಯರ್ಥಿ ಎಚ್‌.ಕೆ. ಮಹೇಶ್‌ ಮಾತನಾಡಿ, ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ನಾನು ಸೋಲು ಅನುಭವಿಸಬೇಕಾಯಿತು. ಹಣದ ಬಲದಲ್ಲಿ ಜೆಡಿಎಸ್‌ ಗೆಲುವು ಪಡೆದಿದೆ. ಈ ಬಾರಿ ನನಗೆ ಅವಕಾಶ ಕೊಡುವ ಮೂಲಕ ಅಭಿವೃದ್ಧಿಗೆ ಜನರು ಸಹಕರಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಾವಗಲ್‌ ಮಂಜುನಾಥ್‌, ಹುಡಾ ಅಧ್ಯಕ್ಷ ಎಚ್‌.ಆರ್‌.ಕೃಷ್ಣಕುಮಾರ್‌, ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ಎಂ.ಆನಂದ್‌, ರಾಜ್ಯಸಭಾ ಮಾಜಿ ಸದಸ್ಯ ಎಚ್‌.ಕೆ. ಜವರೇಗೌಡ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಮ್ಮಿಗೆ ಮೋಹನ್‌, ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್‌, ಜಿ.ಟಿ. ಕುಮಾರ್‌, ನಗರಸಭೆ ಸದಸ್ಯರಾದ ರಾಜೇಶ್‌, ಯಶವಂತ್‌, ವನಮಾಲಾ, ತಾರಾಚಂದನ್‌,  ಕೆಲವತ್ತಿ ಸೋಮಸೇಖರ್‌, ಮದುಸೀಧನ್‌, ರಾಜೇಶ್‌, ರಾಘವೇಂದ್ರ, ತಮ್ಲಾಪುರ ಗಣೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next