ನವದೆಹಲಿ:ದೇಶದಲ್ಲಿ ಕೊರೊನಾ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯವಾದಿಗಳು ಅಗತ್ಯ ಬಿದ್ದರೆ ಆನ್‌ಲೈನ್ ವಿಚಾರಣೆ ಪ್ರಕ್ರಿಯೆಯನ್ನು ಆಯ್ಕೆ ಮಾಡಬಹುದು.
Advertisement
ಹೀಗೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಬುಧವಾರ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಂಕು ಸಂಖ್ಯೆಯ ಬಗೆಗಿನ ಮಾಧ್ಯಮ ವರದಿಗಳನ್ನೂ ಅವರು ಉಲ್ಲೇಖಿಸಿದರು. ಇದೇ ವೇಳೆ, ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 4,435 ಹೊಸ ಕೇಸುಗಳು ದೃಢಪಟ್ಟಿವೆ.
163 ದಿನಗಳಿಗೆ ಹೋಲಿಕೆ ಮಾಡಿದರೆ ಇದು ಗರಿಷ್ಠದ್ದು. ಕಳೆದ ವರ್ಷದ ಸೆ.25ರಂದು 4,777 ಕೇಸುಗಳು ದಾಖಲಾಲಾಗಿದ್ದವು.