ಢಾಕಾ: “ಬಾಂಗ್ಲಾದೇಶಕ್ಕೆ ಸೇರಿದ ಸೆಂಟ್ ಮಾರ್ಟಿನ್ ದ್ವೀಪವನ್ನು ಅಮೆರಿಕಕ್ಕೆ ಒಪ್ಪಿಸಿದ್ದಿದ್ದರೆ ಸರಕಾರ ಉಳಿ ಯುತ್ತಿತ್ತು’ ‘ ಹೀಗೆಂದು ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿಕೊಂಡಿ ದ್ದಾರೆ. ಈ ಮೂಲಕ ತಮ್ಮ ಸರಕಾರದ ಪತನದ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.
ದೇಶ ತೊರೆಯುವುದಕ್ಕೂ ಮುನ್ನ ರಾಷ್ಟ್ರವನ್ನುದ್ದೇಶಿಸಿ ಅವರು ಭಾಷಣ ಮಾಡಲು ಮುಂದಾಗಿದ್ದರೂ, ಸೇನೆ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಆ ಭಾಷಣ ಪ್ರತಿ ಆಂಗ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಮಾರ್ಟಿನ್ ದ್ವೀಪವನ್ನು ಅಮೆರಿಕದ ಕೈಗೆ ಒಪ್ಪಿಸಿದ್ದಿ ದ್ದರೆ ನನ್ನ ಸರಕಾರ ಉಳಿಯುತ್ತಿತ್ತು. ವಿದ್ಯಾರ್ಥಿಗಳ ಶವಗಳ ಮೇಲೆ ಅಧಿಕಾರ ಸ್ಥಾಪಿಸಲು ಅವರು ಯೋಜಿ ಸಿದ್ದರು. ಬಂಗಾಲಕೊಲ್ಲಿಯ ಈಶಾನ್ಯ ಭಾಗದಲ್ಲಿರುವ ಸೆ.ಮಾರ್ಟಿನ್ ದ್ವೀಪದಲ್ಲಿ ಅಮೆರಿಕ ತನ್ನ ವಾಯುನೆಲೆಯನ್ನು ಸ್ಥಾಪಿಸಲು ಉದ್ದೇಶಿ ಸಿತ್ತು. ನಾನು ಎಂದಿಗೂ ಪ್ರತಿಭಟನಕಾ ರರನ್ನು ರಜಾಕಾರರು ಎಂದು ಕರೆದಿಲ್ಲ. ನನ್ನ ಮಾತುಗಳನ್ನು ತಿರುಚಲಾಗಿದೆ. ಬೇಕಿದ್ದರೆ ಅಂದಿನ ಭಾಷಣದ ಪೂರ್ಣ ವೀಡಿಯೋ ಪರಿಶೀಲಿಸಿ’ ಎಂದಿದ್ದಾರೆ. ಹಸೀನಾರ ಈ ಹೇಳಿಕೆಗೆ ಬಿ ಎನ್‌ಪಿ ಆಕ್ಷೇಪಿಸಿ, ಇದು ಅಸಂಬದ್ಧ ಹೇಳಿಕೆ ಎಂದಿದೆ.
ಮಾರ್ಟಿನ್ ದ್ವೀಪ ಎಲ್ಲಿದೆ?: ಬಂಗಾಲ ಕೊಲ್ಲಿಯ ಈಶಾನ್ಯದಲ್ಲಿರುವ 88.06 ಚ.ಕಿ.ಮೀ. ವ್ಯಾಪಿಯ ಈ ದ್ವೀಪ ಬ್ರಿಟಿಷ್ ಆಡಳಿತದಲ್ಲಿ ಭಾರತದ ಭಾಗವಾಗಿತ್ತು.
ಅಲ್ಪಸಂಖ್ಯಾಕರು, ಹಿಂದೂಗಳ ಮೇಲಿನ ದಾಳಿ ಹೇಯ: ಯೂನುಸ್
ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾಕರ ಮೇಲಿನ ದಾಳಿಯನ್ನು ಮಧ್ಯಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಖಂಡಿಸಿದ್ದಾರೆ. ಅಲ್ಪಸಂಖ್ಯಾ ಕರು ಈ ದೇಶದ ಪ್ರಜೆಗಳು. ಅವರ ಮೇಲೆ ದಾಳಿ ನಡೆಸುವುದು ಹೇಯ ಕೃತ್ಯ. ಅಲ್ಪಸಂಖ್ಯಾಕರಿಗೆ ರಕ್ಷಣೆ ಒದಗಿಸಬೇಕು’ ಎಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿ, “ದೇಶವನ್ನು ರಕ್ಷಿಸಿದ ನಿಮಗೆ ಕೆಲವು ಅಲ್ಪಸಂಖ್ಯಾಕ ಕುಟುಂಬ ಗಳನ್ನು ರಕ್ಷಿಸಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದರು. ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದ ಬಳಿಕ ಹಿಂದೂಗಳ ಮೇಲೆ 205 ದಾಳಿ ನಡೆಸಲಾಗಿತ್ತು.