Advertisement

ಕೇರಳದಲ್ಲಿ ಅಮೆರಿಕದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

04:12 PM Aug 02, 2023 | |

ಕರುನಾಗಪಲ್ಲಿ: ಇತ್ತೀಚೆಗೆ ಕೇರಳಕ್ಕೆ ಆಗಮಿಸಿ ಆಶ್ರಮವೊಂದರಲ್ಲಿ ತಂಗಿದ್ದ ಅಮೆರಿಕದ ಮಹಿಳೆಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ, ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಜುಲೈ 31 ರಂದು 44 ವರ್ಷದ ಮಹಿಳೆ ಆಶ್ರಮದ ಬಳಿಯ ಕಡಲತೀರದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದಾಗ ಘಟನೆ ಸಂಭವಿಸಿದ್ದು, ಮಹಿಳೆಯ ದೂರಿನ ಪ್ರಕಾರ, ಪುರುಷರು ಆಕೆಯ ಬಳಿಗೆ ಬಂದು ಸಿಗರೇಟ್ ಹಂಚಿಕೊಳ್ಳಲು ಮುಂದಾದರು ಮತ್ತು ಅವರು ನಿರಾಕರಿಸಿದಾಗ ಅವರು ರಮ್ ನೀಡಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದ್ಯ ಸೇವಿಸಿದ ಬಳಿಕ ಆಕೆಗೆ ಅಮಲೇರಿದ ಬಳಿಕ  ಬೈಕ್‌ನಲ್ಲಿ ಹಾಕಿಕೊಂಡು ಸಮೀಪದ ಖಾಲಿ ಮನೆಗೆ ಕರೆದೊಯ್ದು ಪದೇ ಪದೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಹಿಳೆ ಆಗಸ್ಟ್ 1 ರಂದು ರಾತ್ರಿ ದೂರು ನೀಡಿದ್ದರು. ಮಹಿಳೆ ಜುಲೈ 22 ರಂದು ಕೇರಳಕ್ಕೆ ಬಂದಿದ್ದರು ಎಂದು ಸಂತ್ರಸ್ತೆಯ ದೂರನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

“ಇಬ್ಬರು ಆರೋಪಿಗಳ ಬಂಧನವನ್ನು ಇನ್ನಷ್ಟೇ ದಾಖಲಿಸಬೇಕಾಗಿದೆ. ಅವರು ಪ್ರಸ್ತುತ ಬಂಧನದಲ್ಲಿದ್ದಾರೆ ಎಂದು ಕರುನಾಗಪಲ್ಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next